More

    ಹೇರ್ ಕಲರಿಂಗ್‌ಗೆ 2ನೇ ದಿನವೂ ಉತ್ತಮ ಸ್ಪಂದನೆ

    ಗುಂಡ್ಲುಪೇಟೆ: ಪಟ್ಟಣದ ಶ್ರೀ ವಿನಾಯಕ ಕಾನ್ವೆಂಟ್‌ನಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಕಂಪನಿ ವತಿಯಿಂದ ಗುರುವಾರ ಸಾರ್ವಜನಿಕರಿಗೆ ಆಯೋಜಿಸಿದ್ದ ಎರಡನೇ ದಿನದ ಉಚಿತ ಹೇರ್ ಕಲರಿಂಗ್ ಕಾರ್ಯಕ್ರಮದಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಆಗಮಿಸಿ ತಮ್ಮ ತಲೆಗೂದಲಿಗೆ ಬಣ್ಣ ಹಚ್ಚಿಸಿಕೊಂಡು ಸಂಭ್ರಮಿಸಿದರು.

    ಬೆಳಗ್ಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರು, ಜ್ಞಾನವಿಕಾಸ ಹಾಗೂ ಕೃಷಿ ಯೋಜನೆಯ ಮೇಲ್ವಿಚಾರಕರು, ಶಾಲೆಗಳ ಶಿಕ್ಷಕಿಯರು, ಸರ್ಕಾರಿ ನೌಕರರು ಸೇರಿದಂತೆ ಹಲವಾರು ಜನ ಪಾಲ್ಗೊಂಡು ತಮಗೆ ಇಷ್ಟವಾದ ಬಣ್ಣವನ್ನು ಹಾಕಿಸಿಕೊಂಡರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆಯ ಶ್ರೀನಿವಾಸ್, ಮಂಜುಳಾ, ಗ್ರಾಮ ಪಂಚಾಯಿತಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಮಲ್ಲು, ಅನುಗ್ರಹ ಫೌಂಡೇಷನ್‌ನ ವಿಕಲಚೇತನರ ಸಮುದಾಯ ಕಾರ್ಯಕರ್ತೆಯರಾದ ಪುಟ್ಟತಾಯಮ್ಮ, ಮುದ್ದಮ್ಮ ಇದ್ದರು. ಶುಕ್ರವಾರವೂ ಈ ಕಾರ್ಯಕ್ರಮ ಮುಂದುವರಿಯಲಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.

    ವಿಜಯವಾಣಿ ಪತ್ರಿಕೆಯು ಪ್ರತಿ ಬಾರಿಯೂ ವಿನೂತನ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಅಗತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಹಿಳೆಯರು ಇದರ ಸದ್ಬಳಕೆ ಮಾಡಿಕೊಂಡಿದ್ದಾರೆ.
    ಪುಟ್ಟತಾಯಮ್ಮ, ವಿಕಲಚೇತನರ ಸಮುದಾಯ ಕಾರ್ಯಕರ್ತೆ

    ಹೇರ್ ಡೈ ಮಾಡಿಸುವುದರಿಂದ ಚರ್ಮದ ಅಲರ್ಜಿ ಉಂಟಾಗುತ್ತಿತ್ತು. ಆದರೆ ವಿಜಯವಾಣಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾರ್ನಿಯರ್ ಕಂಪನಿಯ ಉತ್ಪನ್ನ ಬಳಕೆ ಮಾಡಿದ್ದರಿಂದ ಯಾವುದೇ ತೊಂದರೆ ಎದುರಾಗಿಲ್ಲದಿರುವುದು ಸಂತಸ ತಂದಿದೆ.
    ಮಲ್ಲೇಶ್, ಪಟ್ಟಣ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts