More

    ಮಾದರಿ ಗ್ರಾಮಕ್ಕೆ ಪ್ರಯತ್ನ

    ಬೆನಕಟ್ಟಿ: ಗ್ರಾಮವನ್ನು ಮಾದರಿಯಾಗಿಸಲು ಪ್ರಯತ್ನಿಸುವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಇಂಚಗೇರಿಯ ಮಾಧವಾನಂದ, ಗುರುಪುತ್ರೇಶ್ವರ ಹಾಗೂ ಜಗನ್ನಾತ ಮಹಾರಾಜರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

    ರಾಜ್ಯ ಸಹಕಾರ ಸಂಘಗಳ ಮಹಾಮಂಡಳ ನಿರ್ದೇಶಕ ಉಮೇಶ ಬಾಳಿ ಮಾತನಾಡಿ, ಯುವಕರು ದುಶ್ಚಟಕ್ಕೆ ಬಲಿಯಾಗಿ ಧರ್ಮ ಹಾಗೂ ಸಂಪ್ರದಾಯ ಮರೆಯುತ್ತಿದ್ದಾರೆ. ಇಂಚಗೇರಿ ಮಾಧವಾನಂದರು ನಾಡಿನ ಒಳತಿಗಾಗಿ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಆಧ್ಯಾತ್ಮಿಕ ಸಪ್ತಾಹದ ಮೂಲಕ ಅವರ ಸಿದ್ಧಾಂತ ತಿಳಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು.

    ರೇವಣಸಿದ್ಧೇಶ್ವರ ಮಹಾರಾಜರು ಮಾತನಾಡಿ, ಸಂಸ್ಕಾರದ ಕೊರತೆ ಆದರೆ ದುಷ್ಟತನ ಸಮಾಜವನ್ನು ಆಳುತ್ತದೆ. ಇದನ್ನರಿತು ಮಾಧವಾನಂದ ಸದ್ಗುರುಗಳ ಉಪದೇಶ ಆಲಿಸಿ ಮಾನವ ಜನ್ಮ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಉಮೇಶ ಬಾಳಿ, ಗ್ರಾಪಂ ಅಧ್ಯಕ್ಷ ಪುಂಡಲೀಕ ಉಪ್ಪಾರ, ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಎಚ್.ವೈ.ಮಾದರ ಅವರನ್ನು ಸನ್ಮಾನಿಸಲಾಯಿತು. ಶಂಕರಪ್ಪ ಮಹಾರಾಜರು, ಸಂಗಪ್ಪ ಸಾಲಿ ಮಹಾರಾಜರು, ಅಪ್ಪಾಸಾಬ ಮಹಾರಾಜರು, ರಾಮಣ್ಣ ಮಹಾರಾಜರು, ಸಣ್ಣಕೀರಪ್ಪ ಪಚ್ಚಿ, ಭೀರಪ್ಪ ಕುರಿ, ಗಿರೀಶ ಜಕಬಾಳ, ನಾಮದೇವ ಕಕ್ಕಾಳಿ, ಮಾರುತಿ ಗೊಗ್ಗಿ, ಈರಪ್ಪ ಶಿರಸಂಗಿ, ಕೀರಪ್ಪ ಟಪಾಲ, ಹೂವಪ್ಪ ಜಕಬಾಳ, ಗದಿಗೆಪ್ಪ ಚೂರಿ, ಭೀಮಪ್ಪ ಹಿನಕುಪ್ಪಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts