More

    ರಾಜ್ಯದಲ್ಲಿ ರೂಪಾಂತರಿ BF.7 ಆತಂಕ; ಶುರುವಾಯ್ತು ಮಾಕ್​ ಡ್ರಿಲ್​…

    ಬೆಂಗಳೂರು: ರಾಜ್ಯದಲ್ಲಿ ರೂಪಾಂತರಿ BF.7 ಆತಂಕ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಮಾಕ್​ ಡ್ರಿಲ್​ ಪ್ರಾರಂಭವಾಗಿದೆ. ಈ ಹಿಂದೆ ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​ ಮಾಕ್​ ಡ್ರಿಲ್​ ಮಾಡುವ ಬಗ್ಗೆ ಹೇಳಿದ್ದರು. ‘ಕರೋನಾ ಹೆಚ್ಚಾದಾಗ ನಮ್ಮ ಸನ್ನದ್ಧತೆ ಹೇಗಿದೆ ಎಂದು ಪರೀಕ್ಷಿಸಲು ನಾವು ಒಟ್ಟು 27 ಬಾರಿ ಮಾಕ್ ಡ್ರಿಲ್ ಮಾಡುತ್ತೇವೆ’ ಎಂದಿದ್ದರು.

    ಇದನ್ನೂ ಓದಿ: ಬೆಂಗಳೂರಲ್ಲಿ 60% ಜನ ಬೂಸ್ಟರ್​ ಡೋಸ್​ ಇನ್ನೂ ಪಡೆದಿಲ್ಲ: ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​

    ಈ ಮೂಲಕ ಎಲ್ಲಾ ರೀತಿಯಲ್ಲೂ ರೂಪಾಂತರಿಯನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ. ನಗರದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇಂದಿನಿಂದ ಮಾಕ್ ಡ್ರಿಲ್ ಹಾಗೂ ಆಕ್ಸಿಜನ್ ಪ್ಲಾಂಟ್‌ಗಳ ಡ್ರೈರನ್ ಆರಂಭವಾಗಲಿದೆ. ಆಕ್ಸಿಜನ್ ಪೂರೈಕೆ, ಬೆಡ್‌ಗಳು ಹಾಗೂ ಔಷಧಗಳ ಪರಿಶೀಲನೆ ನಡೆಸಿ ಮಾಹಿತಿ ನೀಡಲಾಗುವುದು

    ಕೆಸಿ ಜನರಲ್, ಬೌರಿಂಗ್, ಸಿ.ವಿ.ರಾಮನ್ ನಗರ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ESI ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದ್ದು ಆಕ್ಸಿಜನ್ ಪ್ಲಾಂಟ್‌ಗಳಲ್ಲಿ ಡ್ರೈರನ್ ಮಾಡಿ ಅದರ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆಕ್ಸಿಜನರರಪ್ಲಾಂಟ್‌ಗಳು ಸರಿಯಾಗಿವೆಯೇ ಎಂದು ಪರೀಶಿಲನೆ ನಡೆಸಲಾಗುತ್ತಿದ್ದು ಆಸ್ಪತ್ರೆಗಳಲ್ಲಿ ಸಿಬ್ಬಂದಿ, ಹಾಗೂ ಔಷಧಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

    ರೂಪಾಂತರಿ ಆತಂಕ ಇರೋದ್ರಿಂದ ಕೇಂದ್ರ ಆರೋಗ್ಯ ಇಲಾಖೆ ಮಾಕ್ ಡ್ರಿಲ್ಗೆ ಸೂಚನೆ ನೀಡಿದೆ. ಈ ಹಿಂದೆ ಸರಿಯಾದ ಮಾಹಿತಿ ಹಾಗೂ ಆಕ್ಸಿಜನ್ ಕೊರತೆಯಿಂದ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿರಲಿಲ್ಲ. ಮತ್ತೊಮ್ಮೆ ಆ ಪರಿಸ್ಥಿತಿ ಬರಬಾರದೆಂದು ಮುಂಜಾಗ್ರತೆ ಆರೋಗ್ಯ ಇಲಾಖೆ ವಹಿಸುತ್ತಿದೆ. ಮುಖ್ಯವಾಗಿ ಹೆಲ್ತ್ ಎಮರ್ಜೆನ್ಸಿ ಸೃಷ್ಟಿಯಾಗದಂತೆ ನೋಡಿಕೊಳ್ಳಲು ತಯಾರಿ ನಡೆಸಲಾಗುತ್ತಿದೆ. ಈ‌ ಹಿನ್ನೆಲೆ ಎಲ್ಲಾ ರೀತಿಯಲ್ಲೂ ಆಸ್ಪತ್ರೆಗಳು ಅಲರ್ಟ್ ಆಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts