More

    ಸದನದಲ್ಲಿ ಮೊಬೈಲ್ ಫೋನ್ ಬಳಕೆಗೆ ಸದ್ಯದಲ್ಲೇ ಬೀಳಲಿದೆ ಬ್ರೇಕ್!

    ಚಿಕ್ಕಮಗಳೂರು: ವಿಧಾನಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದರೆನ್ನಲಾದ ಘಟನೆಯ ಹಿನ್ನೆಲೆಯಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನೇ ನಿಷೇಧಿಸುವ ಸಾಧ್ಯತೆ ಇದೆ. ಮೇಲ್ಮನೆಯ ನೂತನ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಈ ಕುರಿತು ಮುನ್ಸೂಚನೆ ನೀಡಿದ್ದಾರೆ. ‘‘ವಿಧಾನ ಮಂಡಲದ ಉಭಯ ಸದನಗಳಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸುವ ಕುರಿತು ವಿಧಾನಸಭೆ ಸ್ಪೀಕರ್ ಹಾಗೂ ವಿಧಾನ ಪರಿಷತ್ ಸಭಾಪತಿ ಜತೆ ಸಮಾಲೋಚಿಸಿ ನಿರ್ಧರಿಸಲಾಗುವುದು’’ ಎಂದು ಹೇಳಿದ್ದಾರೆ.

    ‘‘ಈಗ ಜಾಮರ್ ಅಳವಡಿಸಿರುವುದರಿಂದ ಇಂಟರ್‌ನೆಟ್ ಬಳಕೆ ಸಾಧ್ಯವಾಗುವುದಿಲ್ಲ. ಆದರೆ ಮೊಬೈಲ್‌ನಲ್ಲಿ ಈಗಾಗಲೇ ಇರುವ ಸಂದೇಶಗಳು, ಚಿತ್ರಗಳನ್ನು ನೋಡಬಹುದಾಗಿದೆ. ಅಷ್ಟಕ್ಕೂ ಸದನ ನಡೆಯುವಾಗ ಮೊಬೈಲ್ ಬಳಕೆಯೇ ಅಗತ್ಯವೆನಿಸದು. ಹಾಗೊಂದು ವೇಳೆ ಅಗತ್ಯವಿದ್ದರೆ ಮೊಗಸಾಲೆಗೆ ತೆರಳಿ ಅಲ್ಲಿ ಬಳಸಬಹುದು. ಸದನದ ಮೊಗಸಾಲೆಯಲ್ಲಿ ಸ್ಥಿರ ದೂರವಾಣಿಗಳ ವ್ಯವಸ್ಥೆಯೂ ಇರುವುದರಿಂದ ಅವುಗಳನ್ನೂ ಬಳಸಬಹುದು. ಹೀಗಿರುವಾಗ ಸದನಕ್ಕೆ ಮೊಬೈಲ್ ಒಯ್ಯುವುದನ್ನು ನಿರ್ಬಂಧಿಸಲು ಏನಡ್ಡಿ? ಸದಸ್ಯರ ಮೊಬೈಲ್‌ಗಳನ್ನು ಇಡಲು ಲಾಕರ್ ವ್ಯವಸ್ಥೆ ಮಾಡಿದರಾಯಿತು’’ ಎಂದು ವಿವರಿಸಿದರು.

    ಇದನ್ನೂ ಓದಿ: ಕಳ್ಳನೆಂದುಕೊಂಡು ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿಹಾಕಿ ಬಡಿದ ಜನರು!; ಆತನ ಜತೆಗಿದ್ದ ನಾಲ್ವರು ಪರಾರಿ…

    ‘‘ಚಿಂತಕರ ಚಾವಡಿ ಎಂದೇ ಕರೆಯಲಾಗುವ ಕರ್ನಾಟಕ ವಿಧಾನ ಪರಿಷತ್ತಿಗೆ 113 ವರ್ಷಗಳ ಇತಿಹಾಸವಿದ್ದು ಅದರದ್ದೇ ಆದ ಘನತೆ, ಗೌರವ ಉಳಿಸಿಕೊಂಡಿದೆ. ನಮ್ಮ ಹಿರಿಯರು ಈ ಸ್ಥಾನದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ಅಪಚಾರವಾಗದಂತೆ ನೋಡಿಕೊಂಡಿದ್ದಾರೆ. ಈಗಲೂ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಆ ಸ್ಥಾನಕ್ಕೆ ಯಾವುದೇ ಚ್ಯುತಿ ಬರದಂತೆ ನೋಡಿಕೊಳ್ಳಲಾಗುವುದು. ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಅದನ್ನು ಎತ್ತಿಹಿಡಿಯಬೇಕಿದೆ’’ ಎಂದರು.

    ಅಲ್ಲಿ ಸಿಕ್ಕಾಪಟ್ಟೆ ಕಿತ್ತಾಡಿಕೊಂಡ್ರು… ಇಲ್ಲಿ ಬಂದು ಅಪ್ಪಿಕೊಂಡು ಮುದ್ದಾಡಿದ್ರು…

    ಲಸಿಕೆ ಹಾಕಿಸಿಕೊಂಡಿದ್ದ ವೈದ್ಯರಿಗೂ ಕೋವಿಡ್​​-19 ಪಾಸಿಟಿವ್​; ಏಳು ವೈದ್ಯರಲ್ಲಿ ಸೋಂಕು ಪತ್ತೆ!

    ಅವನಿಗೆ ಅರ್ಪಿಸಿಕೊಂಡಿರುವೆ, ಮನೆಯವರಿಗೆ ತಿಳಿದರೆ ಕೊಂದೇ ಬಿಡುತ್ತಾರೆ, ಓಡಿ ಹೋಗಲೆ?

    ಒಂದೆಡೆ ಮಾಜಿ ಗಂಡ, ಇನ್ನೊಂದೆಡೆ ಪ್ರೇಮಿ, ಮತ್ತೊಂದೆಡೆ ಕುಟುಂಬದವರು… ಯಾರನ್ನು ಆರಿಸಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts