More

    ಮೊಬೈಲ್​​​​​ನಲ್ಲಿ ಗೇಮ್ ಆಡುತ್ತಿದ್ದ ವೇಳೆ ಏಕಾಏಕಿ ಮೊಬೈಲ್ ಸ್ಫೋಟ; ಸುಟ್ಟು ಹೋದ ಬಾಲಕನ ಕೈಬೆರಳುಗಳು

    ಉತ್ತರಪ್ರದೇಶ: ಮೊಬೈಲ್ ಫೋನ್ ಬಳಸುವಾಗ ಅಥವಾ ಚಾರ್ಜ್ ಮಾಡುವಾಗ ಗೇಮ್ ಆಡುವುದು ಎಷ್ಟು ಅಪಾಯಕಾರಿ ಎಂಬುದು ಇತ್ತೀಚೆಗೆ ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ನಡೆದ ಘಟನೆಯಿಂದ ತಿಳಿದುಬಂದಿದೆ. ಹೌದು, ಬಾಲಕ ಮೊಬೈಲ್ ಫೋನ್ ಚಾರ್ಜ್ ಆಗುವಾಗ ಗೇಮ್ ಆಡುತ್ತಿದ್ದಾನೆ. ಆಗ ಇದ್ದಕ್ಕಿದ್ದಂತೆ ಮೊಬೈಲ್ ನಲ್ಲಿ ಅಪಾಯಕಾರಿ ಸ್ಫೋಟ ಸಂಭವಿಸಿದೆ. ಇದರಿಂದ ಬಾಲಕನ ದೇಹ ತೀವ್ರವಾಗಿ ಸುಟ್ಟು ಹೋಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ವರದಿಗಳ ಪ್ರಕಾರ, ಬಾಲಕನಿಗೆ 12 ವರ್ಷ. ಮದನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬದೌರಾ ಗ್ರಾಮದ ನಿವಾಸಿ ಉತ್ತಮ್ ಸಿಂಗ್ ತನ್ನ ಮೊಬೈಲ್ ಫೋನ್ ಅನ್ನು ಚಾರ್ಜ್​​​​ಗೆ ಹಾಕಿ ಮನೆಯಿಂದ ಆಚೆ ಹೋದಾಗ, ಮಗ ಸಚಿನ್ ಅದರಲ್ಲಿ ಆಟವಾಡಲು ಪ್ರಾರಂಭಿಸಿದನು. ಗೇಮ್ ಆಡುತ್ತಿದ್ದಾಗ ಏಕಾಏಕಿ ಮೊಬೈಲ್ ಸ್ಫೋಟಗೊಂಡು ಜೋರಾಗಿ ಸದ್ದು ಮಾಡಿದೆ. ಇದರಿಂದ ಮಗು ಗಂಭೀರವಾಗಿ ಗಾಯಗೊಂಡಿದೆ. ಸ್ಫೋಟದ ಸದ್ದು ಕೇಳಿದ ಸಂಬಂಧಿಕರು ಗಾಯಾಳು ಸಚಿನ್‌ನನ್ನು ತರಾತುರಿಯಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯಲ್ಲಿ ಸಚಿನ್‌ನ ಎರಡೂ ಕೈ ಮತ್ತು ಬೆರಳುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.

    ಈ ರೀತಿ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ, ಇದಕ್ಕೂ ಮೊದಲು, ದೇಶದಲ್ಲಿ ಇದೇ ರೀತಿ ವಿಭಿನ್ನ ಪ್ರಕರಣಗಳು ನಡೆದಿವೆ. ಹೀಗಿದ್ದರೂ ಜನರು ಮುಂಜಾಗ್ರತೆ ವಹಿಸುತ್ತಿಲ್ಲ.

    ನುಹ್​​ ಹಿಂಸಾಚಾರದ ಮಾಸ್ಟರ್ ಮೈಂಡ್, ಗೋರಕ್ಷಕ ಬಿಟ್ಟು ಬಜರಂಗಿಗೆ ಜಾಮೀನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts