More

    ಸಿಆರ್‌ಪಿಎಫ್ ಯೋಧರಿಂದ ಪಥಸಂಚಲನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ 15 ಘಟಕಗಳ ಘಟಕಾಧಿಕಾರಿಗಳ ಸಭೆ ನಗರದ ಮೇರಿಹಿಲ್‌ನಲ್ಲಿರುವ ಗೃಹರಕ್ಷಕ ದಳದ ಕಚೇರಿಯಲ್ಲಿ ಬುಧವಾರ ಜರುಗಿತು.

    ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಮುಂಬರುವ ವಿಧಾನ ಸಭಾ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ಹೆಚ್ಚಿನ

    ಮಂಗಳೂರು: ನಗರ ಪೊಲೀಸ್ ಕಮಿಷನರೆಟ್‌ನ 4 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಸಂಜೆ ಸಿಆರ್‌ಪಿಎಫ್ ಯೋಧರ ಜತೆ ಪೊಲೀಸರು ಪಥಸಂಚಲನ ನಡೆಸಿದರು. ಮಂಗಳಾದೇವಿ ದೇವಳದ ಬಳಿಯಿಂದ ಆರಂಭಗೊಂಡು ಕಾಸ್ಸಿಯಾ ಜಂಕ್ಷನ್, ಜೆಪ್ಪು ಮಾರ್ಕೆಟ್, ಬೋಳಾರ ಜಂಕ್ಷನ್, ಮಾರಿಗುಡಿ ತನಕ. ಕುತ್ತಾರ್ ರಾಜರಾಜೇಶ್ವರಿ ದೇವಳದ ಬಳಿಯಿಂದ ಆರಂಭಗೊಂಡು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ತನಕ, ಸುರತ್ಕಲ್ ಜಂಕ್ಷನ್‌ನಿಂದ ಆರಂಭಗೊಂಡು ಚೊಕ್ಕಬೆಟ್ಟು, ಜಂಕ್ಷನ್, ಜೋಕಟ್ಟೆ ಜಂಕ್ಷನ್ ತನಕ ಪಥಸಂಚಲನ ನಡೆಸಿ, ಸಾರ್ವಜನಿಕರಲ್ಲಿ ಧೈರ್ಯ ತುಂಬಲಾಯಿತು.

    ಸಂಖ್ಯೆಯಲ್ಲಿ ನಿಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಗೃಹರಕ್ಷಕರ ಕ್ಷೇಮಾಭಿವೃದ್ದಿ ನಿಧಿಗೆ ವಂತಿಗೆ ಕಟ್ಟಲು ಬಾಕಿ ಇರುವ ಗೃಹರಕ್ಷಕರ ಬಗ್ಗೆ ಚರ್ಚಿಸಲಾಯಿತು. ಮೂರು ವರ್ಷಗಳನ್ನು ಮೀರಿದ ಗೃಹರಕ್ಷಕರು ನವೀಕರಣ ಮಾಡಿಸಲು ಸೂಚಿಸಲಾಯಿತು.

    ಉಪಸಮಾದೇಷ್ಟ ರಮೇಶ್ ಸ್ವಾಗತಿಸಿದರು. ಕಚೇರಿ ಅಧೀಕ್ಷಕಿ ಕವಿತಾ ಕೆ.ಸಿ ಮತ್ತು ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್. ಉಪಸ್ಥಿತರಿದ್ದರು. ಮಂಗಳೂರು ಘಟಕಾಧಿಕಾರಿ ಮಾರ್ಕ್‌ಶೇರ್, ಬಂಟ್ವಾಳ ಘಟಕಾಧಿಕಾರಿ ಐತಪ್ಪ, ಕಡಬ ಘಟಕಾಧಿಕಾರಿ ತೀರ್ಥೇಶ್, ಪ್ರಭಾರ ಘಟಕಾಧಿಕಾರಿಗಳಾದ ಎಂ.ಭಾಸ್ಕರ್ ಉಳ್ಳಾಲ ಘಟಕ, ಶಿವಪ್ಪ ನಾಯ್ಕ ಪಣಂಬೂರು ಘಟಕ, ಲೋಕೇಶ್ ಮೂಲ್ಕಿ ಘಟಕ ದಿನೇಶ್ ಉಪ್ಪಿನಂಗಡಿ ಘಟಕ, ರಮೇಶ್ ಸುರತ್ಕಲ್ ಘಟಕ, ಸಂಜೀವ ವಿಟ್ಲ ಘಟಕ, ಗಿರಿಧರ್ ಸುಳ್ಯ ಘಟಕ, ವಸಂತ ಕುಮಾರ್ ಬೆಳ್ಳಾರೆ ಘಟಕ, ಹರಿಶ್ಚಂದ್ರ ಸುಬ್ರಹ್ಮಣ್ಯ ಘಟಕ, ಸೆಕ್ಷನ್ ಲೀಡರ್ ಜಗನ್ನಾಥ್ ಪುತ್ತೂರು ಘಟಕ, ಲಾರೆನ್ಸ್ ಡಿಸೋಜ ಮೂಡುಬಿದಿರೆ ಘಟಕ, ಚಾಕೋ ಕೆ.ಜೆ ಬೆಳ್ತಂಗಡಿ ಘಟಕ, ಗಿರೀಶ್ ಕುಮಾರ್ ಸುಬ್ರಹ್ಮಣ್ಯ ಘಟಕ ಉಪಸ್ಥಿತರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts