More

    ರಂಗೇರಿದ ಎಂಎಲ್‌ಸಿ ಚುನಾವಣೆ ; ಮತ ಪಡೆಯಲು ವಿವಿಧ ಕಸರತ್ತು

    ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಪ್ರಚಾರ ದಿನೇದಿನೆ ಕಾವು ಪಡೆಯುತ್ತಿದೆ. ಮತದಾನದ ಹಕ್ಕು ಹೊಂದಿರುವ ಪದವೀಧರರು ನಡುವೆ ಹಣ ಹಾಗೂ ವಿಶೇಷ ಉಡುಗೊರೆ ಬಗ್ಗೆಯೇ ಹೆಚ್ಚು ಚರ್ಚೆ ನಡೆಯಲಾರಂಭಿಸಿದೆ.

    ಜಯಗಳಿಸಲು ಚಲಾವಣೆಯಾದ ಒಟ್ಟು ಮತದಲ್ಲಿ ಶೇ.50 ಪಡೆಯುವುದು ಕಡ್ಡಾಯವಾಗಿದ್ದು ಒಂದು, ಎರಡು ಹಾಗೂ ಮೂರನೇ ಪ್ರಾಶಸ್ತ್ಯದ ಮತ ಪಡೆಯಲು ಆಮಿಷಗಳನ್ನು ತೋರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಹೋಬಳಿ ಕೇಂದ್ರಗಳಲ್ಲಿಯೂ ಮತದಾನಕ್ಕೆ ಅವಕಾಶ ನೀಡಲಾಗಿದ್ದು ಮತದಾನ ಎಷ್ಟು ಪ್ರಮಾಣದಲ್ಲಾಗಲಿದೆ ಎಂಬುದು ಲಿತಾಂಶವನ್ನು ನಿರ್ಧರಿಸಲಿದೆ.

    ಪ್ರತಿನಿಧಿಗಳ ನಿರಂತರ ವೈ​ಫಲ್ಯ, ಚುನಾವಣೆ ಪ್ರಚಾರದಲ್ಲಿನ ಅಕ್ರಮ ಹಾಗೂ ಕರೊನಾ ಕಾರಣಕ್ಕೆ ಬಹುತೇಕ ಪದವೀಧರರು ಚುನಾವಣೆಯ ಬಗ್ಗೆ ನಿರಾಸಕ್ತರಾಗಿದ್ದು ಮತದಾನ ಶೇ.50 ತಲುಪುವುದು ಅನುಮಾನ ಎನ್ನಿಸಿದೆ. ವಿದ್ಯಾವಂತರೇ ಇರುವ ಕ್ಷೇತ್ರದಲ್ಲಿ ಉಡುಗೊರೆಯದ್ದೇ ಸದ್ದು ಹೆಚ್ಚಾಗುತ್ತಿದ್ದು ಪ್ರಚಾರದ ಸಮಯದಲ್ಲಿಯೇ ಅಭ್ಯರ್ಥಿಯ ಹೆಸರಿರುವ ೈಲ್, ಪೆನ್ನು ಮತದಾರರ ಕೈ ಸೇರಿವೆ, ಮತದಾನದ ಒಂದೆರಡು ದಿನದ ಮುಂಚೆ ಬೆಳ್ಳಿ, ನಗದು ಹಂಚಿಕೆ ಬಗ್ಗೆಯೂ ಊಹಾಪೋಹ ಹರಿದಾಡುತ್ತಿದ್ದು ಪ್ರಜ್ಞಾವಂತರು ನಾಚಿಕೆಪಟ್ಟುಕೊಳ್ಳುವಂತಾಗಿದೆ.

    ಡಾಬಾ, ಬಾರ್‌ಗಳು ಹೌಸ್​ಫುಲ್: ಬಹುತೇಕ ಡಾಬಾ, ಬಾರ್‌ಗಳಲ್ಲಿ ಕೆಲ ಶಿಕ್ಷಕರು, ಪದವೀಧರರು ಕಾಣಸಿಗುತ್ತಿದ್ದಾರೆ. ಹಗಲೆಲ್ಲಾ ಗುಂಪು ಕಟ್ಟಿಕೊಂಡು ಪ್ರಚಾರ ನಡೆಸುವ ಪ್ರಮುಖರು ಸಂಜೆಯ ನಂತರ ಮದ್ಯದ ಅಮಲಿನಲ್ಲಿ ತೇಲಾಡುವುದೇ ಜಾಸ್ತಿಯಾಗಿದೆ. ನಿರುದ್ಯೋಗ, ಪದವೀಧರರ ಸಮಸ್ಯೆಗಳು ಗೌಣ!: ಪ್ರಸ್ತುತ ಚುನಾವಣೆಯಲ್ಲಿ ಸಮಾಜದಲ್ಲಿರುವ ಪದವೀಧರರ ಸಮಸ್ಯೆಗಳಾದ ನಿರುದ್ಯೋಗ, ಉದ್ಯೋಗ ಅಭದ್ರತೆ, ತರಬೇತಿ ಕೇಂದ್ರಗಳ ಅಭಾವ ಮತ್ತಿತರ ವಿಷಯಗಳ ಬಗ್ಗೆ ಎಲ್ಲಿಯೂ ಚಕಾರವಿಲ್ಲ. ಸ್ಪರ್ಧಿಸಿರುವ ಅಭ್ಯರ್ಥಿಗಳು ಈ ಬಗ್ಗೆ ಮಾತನಾಡುತ್ತಿಲ್ಲ, ಅವರನ್ನು ಪ್ರಶ್ನಿಸಬೇಕಾದ ಪದವೀಧರರು ಈ ಬಗ್ಗೆ ಮೌನವಹಿಸಿರುವುದು ಆಶ್ಚರ್ಯ ಮೂಡಿಸಿದೆ. ಇತ್ತೀಚಿನ ವರ್ಷದಲ್ಲಿ ಹಣದ ಮೇಲೆಯೇ ಇಂತಹ ಚುನಾವಣೆಗಳು ನಡೆಯಲಾಂಭಿಸಿರುವುದು ಸಾಮಾನ್ಯ ಚುನಾವಣೆಗಳನ್ನು ಮೀರಿಸುವ ಅಕ್ರಮ ಇಲ್ಲಿ ನಡೆಯುತ್ತಿದೆ.

    ತುಮಕೂರಿನಲ್ಲಿ ಪ್ರಚಾರ ಬಿರುಸು: ತುಮಕೂರು ತಾಲೂಕಿನಲ್ಲಿ ಅತೀ ಹೆಚ್ಚು ಮತದಾರರಿದ್ದು ಅವರನ್ನು ಸೆಳೆಯಲು ಎಲ್ಲ ಅಭ್ಯರ್ಥಿಗಳು ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ. ಲಿಂಗಾಯತ ವಿದ್ಯಾಸಂಸ್ಥೆಗಳು ಹೆಚ್ಚಿರುವ ಜಿಲ್ಲಾ ಕೇಂದ್ರದಲ್ಲಿ ಆ ಸಮುದಾಯದ ಮತ ಸೆಳೆಯುವಲ್ಲಿ ವಿವಿಧ ಕಸರತ್ತು ನಡೆಸಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ, ಹಾಲಿ ಸದಸ್ಯ ತೂಪಲ್ಲಿ ಚೌಡರೆಡ್ಡಿ ಪರವಾಗಿ ಹರಿಹರ ಮಾಜಿ ಶಾಸಕ, ಲಿಂಗಾಯತ ಸಮುದಾಯದ ಎಚ್.ಎಸ್.ಶಿವಶಂಕರ್ ತುಮಕೂರು ನಗರದಲ್ಲಿ ಅಖಾಡಕ್ಕಿಳಿದಿರುವ ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸಿದೆ. ಚುನಾವಣೆಯಲ್ಲಿ ಪ್ರಭಾವ ಬೀರುವ ಸಾಮರ್ಥ್ಯವಿರುವ ಸ್ಥಳೀಯ ಲಿಂಗಾಯತ ಮುಖಂಡರನ್ನು ಸೆಳೆಯುತ್ತಿರುವುದು ಕುತೂಹಲ ಮೂಡಿಸಿದೆ. ಬಿಜೆಪಿ ಇವರ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ನೇತೃತ್ವವನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಎಬಿವಿಪಿ ಹಿನ್ನೆಲೆಯ ತುಮಕೂರು ವಿವಿ ಸಿಂಡಿಕೇಟ್ ಸದಸ್ಯರು ನಗರದೆಲ್ಲೆಡೆ ಬಿರುಸಿನಿಂದ ಓಡಾಡಲಾರಂಭಿಸಿದ್ದು ಇದೇ ಮೊದಲ ಬಾರಿಗೆ ಪದವೀಧರ ಕ್ಷೇತ್ರದ ಚುನಾವಣೆ ರಂಗೇರಿಸಿದೆ. ಡಿ.ಟಿ.ಶ್ರೀನಿವಾಸ್ ಬಂಡಾಯ ಹಾಗೂ ಪೆಪ್ಸಿಬಸವರಾಜು ಮುನಿಸು ಬಿಜೆಪಿಗೆ ನಷ್ಟ ತಂದರೂ ಆಶ್ಚರ್ಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts