More

    ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ


    ಚಾಮರಾಜನಗರ : ಮೂಲ ಸೌಕರ್ಯ ಕೊರತೆ ಎದುರಿಸುತ್ತಿರುವ ತಾಲೂಕಿನ ಪೆದ್ದನಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಭೇಟಿ ನೀಡಿದ ಶಾಸಕ ಎಂ.ಆರ್. ಮಂಜುನಾಥ್, ತರಗತಿ ಕೊಠಡಿ ಹಾಗೂ ಶಾಲಾ ಆವರಣ ಪರಿಶೀಲಿಸಿದರು.

    ಹನೂರು ತಾಲೂಕು ಶಿಕ್ಷಣ ಅಧಿಕಾರಿಗಳ ಜತೆ ಶಾಲೆಗೆ ಶಾಸಕರು ಆಗಮಿಸಿದ ವಿಷಯ ತಿಳಿದ ಪೋಷಕರು ಶಾಲೆಗೆ ಧಾವಿಸಿ ತಮ್ಮ ಮಕ್ಕಳಿಗೆ ಉಂಟಾಗುತ್ತಿರುವ ಸಂಕಷ್ಟಗಳ ಬಗ್ಗೆ ಶಾಸಕ ಮಂಜುನಾಥ್ ಅವರಿಗೆ ವಿವರಿಸಿದರು.


    ಈ ವೇಳೆ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮವಹಿಸಲಾಗುವುದು. ಹಾಗಾಗಿ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು.


    ಇನ್ನು ಶಾಲೆ ನೆರೆಹೊರೆಯಲ್ಲಿ ಸಾಕು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ, ಇಲ್ಲಿಯೂ ಕೌಂಪೌಂಡ್ ನಿರ್ಮಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ಶಾಲೆಗೆ 20 ಸೆಂಟ್ ಜಾಗ ನೀಡಿರುವ ಖಾಸಗಿ ವ್ಯಕ್ತಿ ಜತೆ ಚರ್ಚಿಸಿ ಎದುರಾಗಿರುವ ಜಾಗದ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.


    ಆದರೆ, ನೆರೆದಿದ್ದ ಪೋಷಕರ ಪೈಕಿ ಕೆಲವರು ಮೂಲಸೌಕರ್ಯ ಕಲ್ಪಿಸುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಲೆಗೆ ಜಾಗ ನೀಡಿದ ವ್ಯಕ್ತಿಯೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದರ ಮೂಲಕ ಶಾಲಾ ಕೊಠಡಿ ದುರಸ್ತಿ ಹಾಗೂ ಕಾಂಪೌಂಡ್ ನಿರ್ಮಿಸಲು ಅಗತ್ಯ ಕ್ರಮವಹಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಮಕ್ಕಳ ಕಲಿಕಾ ದೃಷ್ಠಿಯಿಂದ ಮಕ್ಕಳನ್ನು ಸೋಮವಾರದಿಂದ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು. ಆದರೆ ಕೆಲ ಪಾಲಕರು ಅಗತ್ಯ ಮೂಲ ಸೌಕರ್ಯ ಒದಗಿಸುವ ತನಕ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಈ ವೇಳೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ಡಿಎಚ್‌ಒ ಚಿದಂಬರಂ, ಬಿಇಒ ಶಿವರಾಜು, ತಾಪಂ ಎಡಿ ರವೀಂದ್ರ, ಶಿಕ್ಷಣ ಸಂಯೋಜಕ ಕಂದವೇಲು ಹಾಗೂ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts