More

    ಚಳ್ಳಕೆರೆ ತಾಲೂಕಿನ 53 ಹಳ್ಳಿಗಳ ರುದ್ರಭೂಮಿ ಸಮಸ್ಯೆ ಪರಿಹಾರಕ್ಕೆ ಶಾಸಕರ ಕಟ್ಟಪ್ಪಣೆ

    ಚಳ್ಳಕೆರೆ: ತಾಲೂಕಿನ 53 ಗ್ರಾಮಗಳಲ್ಲಿ ರುದ್ರಭೂಮಿ ಸಮಸ್ಯೆಗೆ ಪರಿಹಾರ ಒದಗಿಸಲು ಹಾಗೂ ವಸತಿ ಸೌಕರ್ಯಕ್ಕೆ ಜಾಗ ಮಂಜೂರಿಗೆ ಅಧಿಕಾರಿಗಳಿಗೆ ಶಾಸಕ ಟಿ. ರಘುಮೂರ್ತಿ ಸೂಚಿಸಿದರು.

    ತಾಲೂಕು ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತ ನಾಡಿ, ಗ್ರಾಮೀಣರ ಮೂಲ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸ್ಮಶಾನಕ್ಕೆ ಜಾಗ ಒದಗಿಸಲು ಪಂಚಾಯಿತಿ ಹಂತದಲ್ಲಿ ಪ್ರಯತ್ನಿಸಲು ತಹಸೀಲ್ದಾರ್ ಎನ್.ರಘುಮೂರ್ತಿ ಅವರಿಗೆ ಹೇಳಿದರು.

    ಟಿಎಚ್‌ಒ ಡಾ.ಎನ್.ಪ್ರೇಮಸುಧಾ ಮಾತನಾಡಿ, ಡಿಸೆಂಬರ್‌ನಿಂದ 28 ಕರೊನಾ ಪ್ರಕರಣ ದಾಖಲಾಗಿದ್ದು 19 ಸಕ್ರಿಯ ಪ್ರಕರಣಗಳಿವೆ ಎಂದರು. ಒಮಿಕ್ರಾನ್ ಹರಡುವಿಕೆ ಕುರಿತು ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ನಿಗಾ ವಹಿಸಲು ಶಾಸಕರು ಸೂಚಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಿ.ಅಶೋಕ್ ಕುಮಾರ್ ಮಾತನಾಡಿ 43 ಸಾವಿರ ಹೆಕ್ಟೇರ್ ಬೆಳೆಗೆ ಪರಿಹಾರ ಸಂದಾಯ ಆಗಿದೆ ಎಂದರೆ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, 7,500 ಹೆ. ಬೆಳೆ ನಷ್ಟಕ್ಕೆ ಶೇ.70ರಷ್ಟು ಪರಿಹಾರ ನೀಡಲಾಗಿದೆ ಎಂದರು. ಗ್ರಾಮೀಣ ಭಾಗದಲ್ಲಿ 39 ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಲು ಇಂಜಿನಿಯರ್ ಕಾವ್ಯಾ ಅವರಿಗೆ ಶಾಸಕರು ಸೂಚಿಸಿದರು. ಸಿಡಿಪಿಒ ವಿ.ಮೋಹನ್‌ಕುಮಾರಿ, ಅರಣ್ಯ ಇಲಾಖೆ ಅಧಿಕಾರಿಗಳಾದ ರಾಜಶೇಖರ್, ಬಾಬು ಇದ್ದರು.

    ವಿಜಯವಾಣಿ ವರದಿ ಪ್ರತಿಧ್ವನಿ

    ಸ್ಮಶಾನ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಚನ್ನಮ್ಮನಾಗತಿಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಇನಾಯತ್ ಬಾಷಾ ಮಾಹಿತಿ ನೀಡಿ, ಹಾಲಿಗೊಂಡನಹಳ್ಳಿಯಲ್ಲಿ ರುದ್ರಭೂಮಿ ಸಮಸ್ಯೆ ಗಂಭೀರವಾಗಿದೆ. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ವಾಸ್ತವ ವರದಿ ಪ್ರಕಟವಾಗಿದೆ. ಭೂಮಿ ಮಂಜೂರಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಶಾಸಕರು, ಜಾಗ ಮಂಜೂರು ಮಾಡಲು ತಾಪಂ ಇಒ ಬಸಪ್ಪ, ತಹಸೀಲ್ದಾರ್ ಅವರಿಗೆ ಸೂಚಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts