More

    ಸಂಚು ನಡೆಸಿದರೆ ಹೋರಾಟ ಮಾಡುವೆ: ಶಾಸಕ ಕೆ.ಶ್ರೀನಿವಾಸಗೌಡ ಎಚ್ಚರಿಕೆ, ಡಿಸಿಸಿ ಬ್ಯಾಂಕ್‌ನಿಂದ 2 ಕೋಟಿ ರೂ. ಸಾಲ ವಿತರಣೆ

    ಕೋಲಾರ :  ಅವಿಭಜಿತ ಜಿಲ್ಲೆಯ ಲಕ್ಷಾಂತರ ರೈತರ, ಮಹಿಳೆಯರ ಬದುಕಿಗೆ ಆಸರೆಯಾಗಿರುವ ಡಿಸಿಸಿ ಬ್ಯಾಂಕ್ ವಿರುದ್ಧ ಯಾರಾದರೂ ಸಂಚು ನಡೆಸಿದಲ್ಲಿ ನನ್ನ ನೇತೃತ್ವದಲ್ಲೇ ಹೋರಾಟ ನಡೆಸುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ಎಚ್ಚರಿಕೆ ನೀಡಿದರು.

    ವಕ್ಕಲೇರಿ ಗ್ರಾಮದ ವಿದ್ಯಾಭಿವೃದ್ಧಿ ಶಾಲೆ ಆವರಣದಲ್ಲಿ ಭಾನುವಾರ ರೇಷ್ಮೆ ಬೆಳೆಗಾರರ ಸಹಕಾರ ಸಂ ಹಾಗೂ ಡಿಸಿಸಿ ಬ್ಯಾಂಕ್ ಆಶ್ರಯದಲ್ಲಿ ರೈತರು ಮತ್ತು ಮಹಿಳಾ ಸಂಗಳಿಗೆ 2 ಕೋಟಿ ರೂ. ಸಾಲ ವಿತರಿಸಿ ವಾತನಾಡಿ, ಸಹಕಾರಿ ವ್ಯವಸ್ಥೆ ಹಾಳು ವಾಡುವ ಪ್ರಯತ್ನ ಸಲ್ಲದು, ಇದರಲ್ಲಿ ಜನರ ಬದುಕಿನ ಪ್ರಶ್ನೆ ಇದೆ, ಸಹಕಾರಿ ಸಂಸ್ಥೆಗಳಲ್ಲಿ ಕೈಹಾಕುವ ಮುನ್ನಾ 100 ಬಾರಿ ಯೋಚಿಸಬೇಕು ಎಂದು ಸರ್ಕಾರಕ್ಕೆ ಕಿವಿವಾತು ಹೇಳಿದರು.

    1994-95ನೇ ಸಾಲಿನ ಯಾವುದೋ ಹಳೆಯ ಪ್ರಕರಣ ಹಿಡಿದುಕೊಂಡು ಬ್ಯಾಂಕ್ ಅನ್ನು ಅಭದ್ರತೆಗೊಳಿಸುವ ಕ್ರಮ ಸಹಿಸುವುದಿಲ್ಲ. ಬ್ಯಾಂಕ್ ದಿವಾಳಿಯಾಗಿ ಎರಡೂ ಜಿಲ್ಲೆಯ ರೈತರು, ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದ ದಿನಗಳನ್ನು ಮರೆತಿಲ್ಲ, ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೆ ವಾತುಕತೆ ಮೂಲಕ ನಿವಾರಣೆ ವಾಡಿಕೊಳ್ಳಲು ಅವಕಾಶವಿದೆ. ಆದರೆ ಚಾಡಿಕೋರರ ವಾತು ಕೇಳಿ ಬ್ಯಾಂಕಿನ ಹಿತಕ್ಕೆ ಧಕ್ಕೆ ಉಂಟು ವಾಡಿದಲ್ಲಿ ರಾಜಕೀಯೇತರವಾಗಿ ಹೋರಾಟ ವಾಡಬೇಕಾಗುತ್ತದೆ ಎಂದರು.

    ಬ್ಯಾಲಹಳ್ಳಿ ಗೋವಿಂದಗೌಡರ ಆಡಳಿತ ಮಂಡಳಿ ಬಂದ ನಂತರ ಬ್ಯಾಂಕ್ ರಾಜ್ಯಕ್ಕೆ ನಂ.1 ಆಗಿದೆ. ಇಲ್ಲಿ ಮಹಿಳೆಯರಿಗೆ ನೀಡಿದಷ್ಟು ಸಾಲವನ್ನು ಬೇರ‌್ಯಾವ ಜಿಲ್ಲೆಯಲ್ಲೂ ನೀಡಿಲ್ಲ, ನನಗೂ ಬ್ಯಾಂಕಿನ ಬಗ್ಗೆ ಅನುವಾನವಿತ್ತು. ಈಗ ಗರ್ವ ಪಡುವಂತಾಗಿದೆ. ಈ ಬ್ಯಾಂಕನ್ನು ಅಭಿವೃದ್ಧಿಪಡಿಸಲು ಸರ್ಕಾರ ಹೆಚ್ಚಿನ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.

     

    ಹೆಣ್ಣು ಮಕ್ಕಳ ಶಾಪ ತಟ್ಟುತ್ತೆ: ಬ್ಯಾಂಕ್‌ನ ನಿರ್ದೇಶಕ ನಾಗನಾಳ ಸೋಮಣ್ಣ ವಾತನಾಡಿ, ರಾಜ್ಯದಲ್ಲೇ ಹೆಚ್ಚು 6 ಲಕ್ಷ ಮಹಿಳೆಯರಿಗೆ ಸಾಲ ನೀಡಿದ್ದೇವೆ, ದಿವಾಳಿಯಾಗಿದ್ದ ಬ್ಯಾಂಕನ್ನು 1200 ಕೋಟಿ ಸಾಲ ನೀಡುವ ಶಕ್ತಿಯನ್ನು ತಂದಿದ್ದೇವೆ, ಇಂತಹ ಬ್ಯಾಂಕಿನ ಬೆನ್ನಿಗೆ ಚೂರಿ ಹಾಕಿದರೆ ಅಂತಹವರಿಗೆ ಹೆಣ್ಣು ಮಕ್ಕಳ ಶಾಪ ತಟ್ಟುತ್ತದೆ ಎಂದು ಎಚ್ಚರಿಸಿದರು.

    ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ವಕ್ಕಲೇರಿ ಸೊಸೈಟಿ ಅಧ್ಯಕ್ಷ ಪಾಲಾಕ್ಷಗೌಡ, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಚಿದಾನಂದ್, ಟಿ.ಕಷ್ಣಪ್ಪ, ಎನ್.ಎಂ.ಆನಂದಕುವಾರ್, ರಮೇಶ್, ಟಿ.ಮುನಿಯಪ್ಪ,ಆರ್.ಚಂದ್ರೇಗೌಡ, ಸದಾಶಿವಯ್ಯ, ಗ್ರಾಪಂ ಅಧ್ಯಕ್ಷ ಮುರಳಿ ಉಪಸ್ಥಿತರಿದ್ದರು.

    ಟೀಕೆಗಳಿಗೆ ಮೌನವೇ ಉತ್ತರ: ನಾನೇನು ತಪ್ಪು ವಾಡಿದ್ದೇನೆ ಎಂದು ಅರ್ಥವಾಗುತ್ತಿಲ್ಲ, ಪ್ರತಿ ನಿತ್ಯ ಬ್ಯಾಂಕಿನ ವಿರುದ್ಧ ಸಂಚು ನಡೆಸುತ್ತಿದ್ದಾರೆ. ಆದರೆ ಎಲ್ಲರ ಟೀಕೆಗಳಿಗೂ ನನ್ನದು ಮೌನವೇ ಉತ್ತರ. ದಿವಾಳಿಯಾಗಿದ್ದ ಬ್ಯಾಂಕನ್ನು ಅಭಿವೃದ್ಧಿ ಪಡಿಸಿದ್ದು ತಪ್ಪಾಯಿತೇ? ಕಡಿಮೆ ಬಡ್ಡಿ, ಶೂನ್ಯಬಡ್ಡಿ ಸಾಲ, ಸಾಲ ಮನ್ನಾದಂತಹ ಯೋಜನೆಗಳಿಂದ ವಂಚಿತರಾಗಿದ್ದ ಜಿಲ್ಲೆಯ ರೈತರು, ಮಹಿಳೆಯರ ಪರ ಕೆಲಸ ವಾಡಿದ್ದು ತಪ್ಪಾಯಿತೇ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭಾವುಕರಾದರು.

    ರಾಜ್ಯ ಸರ್ಕಾರ ಹಾಗೂ ಸಚಿವರುಗಳಲ್ಲಿ ನನ್ನದೊಂದು ಸ್ಪಷ್ಟನೆ, ಡಿಸಿಸಿ ಬ್ಯಾಂಕಿನಲ್ಲಿ ರಾಜಕಾರಣ ವಾಡಲು ನಾನು ಅಧ್ಯಕ್ಷನಾಗಿಲ್ಲ. ಬಡವರು, ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕೆಲಸ ವಾಡುತ್ತಿದ್ದೇವೆ, ಸಂಸ್ಥೆಗೆ ಕೆಟ್ಟದು ವಾಡುವ ಉದ್ದೇಶ ನನ್ನಗಿಲ್ಲ. ನೀವು ಸಹ ಬ್ಯಾಂಕಿನ ಭವಿಷ್ಯಕ್ಕೆ ಕಲ್ಲು ಹಾಕಬೇಡಿ ಎಂದು ಯಾರ ಹೆಸರು ಹೇಳದೆ ಮನವಿ ವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts