More

    ಹಾನಗಲ್‌ ಗ್ಯಾಂಗ್ ರೇಪ್ ಪ್ರಕರಣ; ಜಾತಿ ಮುಂದೆ ಇಟ್ಟುಕೊಂಡು ಕಾಲಹರಣ ಮಾಡಬಾರದು: ಶಾಸಕ ಶ್ರೀನಿವಾಸ ಮಾನೆ

    ಹಾವೇರಿ: ಹಾನಗಲ್​​​​​​ನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಶ್ರೀನಿವಾಸ ಮಾನೆ ಹೇಳಿಕೆ ನೀಡಿದ್ದಾರೆ. ರಾಣೆಬೆನ್ನೂರಿನ ನರಸೀಪುರ ಬಳಿಯ ಹೆಲಿಪ್ಯಾಡ್​​​​ ಬಳಿ ಮಾತನಾಡಿದ ಅವರು ಸಂತ್ರಸ್ತೆ ಹಾಗೂ ಪರಪುರಷನ ಮೇಲೆ ಹಲ್ಲೆ ಮಾಡಿದ ಮಾಹಿತಿ ಪಡೆದುಕೊಂಡಿದ್ದೇನೆ. ಅಂದಿನ ಮಾಹಿತಿ ಎಲ್ಲೂ ಹೊರಗೆ ಬಂದಿರಲಿಲ್ಲ. 9ನೇ ತಾರೀಖಿನ ಸಂಜೆ ದೃಶ್ಯಗಳು ವೈರಲ್ ಆಗಿದ್ದವು. ನಾನು ದೃಶ್ಯಗಳನ್ನು ಪೊಲೀಸರಿಗೆ ಕಳುಹಿಸಿ ಪರಿಶೀಲನೆ ಮಾಡುವಂತೆ ಸೂಚಿಸಿದ್ದೆ. ಜ. 10, 11ರಂದು ಬೆಂಗಳೂರಿನಲ್ಲಿ ಇದ್ದು ವಾಪಸ್ ಬಂದ ಬಳಿಕ ಸಭೆ ಮಾಡಿದ್ದೇನೆ ಎಂದರು.

    ಪೋಲಿಸರೊಂದಿಗೆ ಸಭೆಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ನಾನು ಹೇಳಿದ್ದೇನೆ ಎಂದ ಶ್ರೀನಿವಾಸ ಮಾನೆ ಅವರು, ಸಂತ್ರಸ್ತೆ ಭೇಟಿಯಾಗಬೇಕೆಂದಾಗ ಮೆಡಿಕಲ್ ಪರೀಕ್ಷೆಯಲ್ಲಿದ್ದರು. ಆದರೆ ನಮ್ಮ ಪಕ್ಷದ ವತಿಯಿಂದ ಹಿರಿಯ ಮುಖಂಡರು ಭೇಟಿಯಾಗಿದ್ದಾರೆ. ಭೇಟಿಯಾಗಿದ್ದು ಕಾಟಾಚಾರಕ್ಕೆ ಅಲ್ಲ. ನಾನು ಕೂಡ ಭೇಟಿಯಾಗಿ ಧೈರ್ಯ ತುಂಬುತ್ತೇನೆ. ಜಾತಿ ಮುಂದೆ ಇಟ್ಟುಕೊಂಡು ನಾವು ಕಾಲಹರಣ ಮಾಡಬಾರದು. ಸಂತ್ರಸ್ತೆ ಹಾಗೂ ನ್ಯಾಯದ ಪರವಾಗಿ ನಾವಿದ್ದೇವೆ. ಕುಟುಂಬಸ್ಥರನ್ನು ಸಿಎಂ ಬಳಿ ಭೇಟಿ ಮಾಡಿಸುತ್ತೇವೆ. ಸಿಎಂಗೆ ಪರಿಹಾರದ ಬಗ್ಗೆ ನಾವು ನೀವೂ ಮನವಿ ಮಾಡೋಣ ಎಂದು ತಿಳಿಸಿದರು.

    ಕಾಂಗ್ರೆಸ್ ಒಲೈಕೆ ರಾಜಕೀಯ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ ಮಾನೆ ಅವರು, ಬಿಜೆಪಿಯವರೇ ಸಿಎಂ ಆಗಿದ್ದಾಗ ಎಲ್ಲೆಲ್ಲಿ ಶೂಟೌಟ್ ಆಗಿದ್ದವು? ಏನೇನು ಪ್ರಕರಣ ಆಗಿವೆ ಎಂದು ಉತ್ತರ ಕೊಡಲಿ. ತಮ್ಮದೇ ಬಿಜೆಪಿ ಮುಖಂಡನದ್ದೇ ವಸತಿ ಗೃಹಗಳು ಇರುವುದು. ಯಾಕಪ್ಪ ಅವರಿಗೆ ರೂಮ್ ಗಳನ್ನ ಕೊಟ್ಟೆ ಎಂದು ಕೇಳಲಿ, ಐಡಿ ತೆಗೆದುಕೊಳ್ಳಲ್ಲ ಯಾವ ಮಾಹಿತಿ ತೆಗೆದುಕೊಂಡಿಲ್ಲ. ಅನೈತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುತ್ತಾರೆ. ತಮ್ಮ ಮೇಲೆ ಬಂದಾಗ ನಮ್ಮದಲ್ಲ ಅಂತ ಕಾಂಗ್ರೆಸ್ ಮೇಲೆ ಆರೋಪ ಮಾಡೊದಲ್ಲ. ಇದನ್ನು ಯಾರು ಒಪ್ಪಿಕೊಳ್ತಾರೆ. ಅಲ್ಲಿ ಏನೇನು ವ್ಯವಹಾರ ನಡೆಯುತ್ತವೆ ಎನ್ನುವುದು ತನಿಖೆಯಾಗಲಿ. ವಸತಿ ಗೃಹಗಳು ಬಿಜೆಪಿ ಮುಖಂಡನಿಗೆ ಸೇರಿದೆ. ನಮ್ಮ ಕಡೆ ತಪ್ಪು ತೋರಿಸುವ ಬದಲು ಅಲ್ಲೇನಾಗಿದೆ ಎಂದು ತೋರಿಸಿಲಿ ಎಂದರು. 

    ವಿಮಾನದಲ್ಲಿ ಪೈಲಟ್‌ಗೆ ಕಪಾಳಮೋಕ್ಷ ಮಾಡಿದ ಪ್ರಯಾಣಿಕ; ‘ನೊ-ಫ್ಲೈ ಲಿಸ್ಟ್’ಗೆ ಸೇರಿಸಲು ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts