More

  ಬಸ್ ನಿಲ್ದಾಣದಲ್ಲಿ ಸೌಲಭ್ಯ ಕಲ್ಪಿಸಿ

  ಹುಮನಾಬಾದ್: ಪಟ್ಟಣದ ಕೇಂದ್ರ ಬಸ್ ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಪ್ರಯಾಣಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
  ನಿಲ್ದಾಣ ಆವರಣದಲ್ಲಿ ಅಸ್ವಚ್ಛತೆ ಹಾಗೂ ಶೌಚಗೃಹ ಅವ್ಯವಸ್ಥೆ ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಲ್ಯಾಣ ಕರ್ನಾಟಕದ ತಾಲೂಕು ಕೇಂದ್ರಗಳಲ್ಲೇ ದೊಡ್ಡ ಮತ್ತು ಹೈಟೆಕ್ ಬಸ್ ನಿಲ್ದಾಣ ಇದಾಗಿದೆ. ಹಗಲೂ-ರಾತ್ರಿ ಬಸ್ ಸಂಚಾರವಿದ್ದು, ಸದಾ ಪ್ರಯಾಣಿಕರಿರುತ್ತಾರೆ. ಹೀಗಾಗಿ ಶೌಚಗೃಹ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಒದಗಿಸುವಂತೆ ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರು.
  ಗ್ರಾಮೀಣ ಜನರು, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸಮಯಕ್ಕೆ ಸರಿಯಾಗಿ ಬಸ್ ಓಡಿಸಬೇಕು. ನಿರ್ಲಕ್ಷಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಮೇಲಧಿಕಾರಿಗಳ ಜತೆ ಮಾತನಾಡಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಇನ್ನಷ್ಟು ಆಸನಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
  ಘಟಕ ವ್ಯವಸ್ಥಾಪಕ ವಿಠ್ಠಲ್ ಕದಮ್, ಪ್ರಮುಖರಾದ ಗಿರೀಶ ತುಂಬಾ, ಮಲ್ಲಿಕಾರ್ಜುನ ಸೀಗಿ, ಸಂತೋಷ ಪಾಟೀಲ್, ಸುನೀಲ ಪಾಟೀಲ್, ನಾಗಭೂಷಣ ಸಂಗಮ, ಗಿರೀಶ ಪಾಟೀಲ್, ಗೋಪಾಲಕೃಷ್ಣ ಮೋಹಳೆ, ಜ್ಞಾನದೇವ ಧುಮಾಳೆ, ಶಿವರಾಜ ರಾಜೋಳೆ, ರವಿ ಮಾಡಗಿ, ರಮೇಶ ಕಲ್ಲೂರ, ಸುನೀಲ ಪತ್ರಿ, ಸಂತೋಷ ನಾವದಗಿ, ರಮೇಶ ಖೆರೋಜಿ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts