More

    ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಪೂರ್ಣ

    ಹರಪನಹಳ್ಳಿ: ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಪೂರ್ಣವಾಗಿದ್ದು, ಕ್ಷೇತ್ರದ ಶಾಸಕರು ತರಾತುರಿಯಲ್ಲಿ ಉದ್ಘಾಟನೆ ಮಾಡಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಸದಸ್ಯೆ ಎಂ.ಪಿ.ವೀಣಾ ಮಹಾಂತೇಶ್ ದೂರಿದರು.

    ಚುನಾವಣೆ ದೃಷ್ಟಿ ಇಟ್ಟುಕೊಂಡು ಅಪೂರ್ಣಗೊಂಡಿರುವ ಕಾಮಗಾರಿಯನ್ನು ಉದ್ಘಾಟನೆ ಮಾಡಿದ್ದಾರೆಯೇ ಹೊರತು ಜನರ ಅನುಕೂಲಕ್ಕಾಗಿ ಅಲ್ಲ ಎಂಬು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಶಾಸಕರು ಮಾಡಿರುವುದು ಪ್ರಯೋಗ ಅಷ್ಟೇ ಎಂದ ಅವರು ಯಾವುದೇ ಯೋಜನೆಯಾಗಿದ್ದರೂ ಅದನ್ನು ಪೂರ್ಣಗೊಳಿಸಿ, ಪ್ರಾಯೋಗಿಕ ಪರೀಕ್ಷಾರ್ಥ ಮಾಡಿ ಉದ್ಘಾಟಿಸಬೇಕಿದೆ. ಆದರೆ 5 ವರ್ಷಗಳ ಕಾಲ ಸುಮ್ಮನಿದ್ದು ಚುನಾವಣೆ ನೀತಿ ಸಂಹಿತೆ ಜಾರಿಗೂ ಮುನ್ನವೇ ಪ್ರಾಯೋಗಿಕ ಇಲ್ಲದೆ ನೇರವಾಗಿ ಉದ್ಘಾಟಿಸಿರುವುದು ಸರಿಯಲ್ಲ ಎಂದರು.

    ತಾಲೂಕಿನ ಹಲುವಾಗಲು ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪೈಪ್‌ಲೈನ್‌ಗಳೇ ಆಗಿಲ್ಲ. ಇದೇ ರೀತಿಯಾಗಿ ಕಂಚಿಕೇರಿ ಕೆರೆಗೂ ಪೈಪ್‌ಲೈನ್ ಆಗಿಲ್ಲ. ಕೇವಲ ಬಿಲ್‌ಗಾಗಿ ಉದ್ಘಾಟನೆಯಾಗಿದ್ದು, ಜನರ ತೆರಿಗೆ ಹಣ ದುರುಪಯೋಗ ಪಡಿಸಿಕೊಂಡಂತಾಗಿದೆ. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಬೇಕು, ಇಲ್ಲವೇ ಉಳಿದ ಅನುದಾನವನ್ನು ಸರ್ಕಾರಕ್ಕೆ ವಾಪಸ್ಸು ನೀಡಬೇಕು ಎಂದು ಆಗ್ರಹಿಸಿದರು.

    ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ, ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್, ಮಾಜಿ ಸಚಿವ ನಾರಾಯಣದಾಸ್ ಅವರ ಕನಸಾಗಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ನನಸು ಮಾಡಲು ಕಾಂಗ್ರೆಸ್ ಶಾಸಕ ದಿ.ಎಂ.ಪಿ.ರವೀಂದ್ರ ಹೋರಾಟ ನಡೆಸಿ 58 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ಈ ಯೋಜನೆಯನ್ನು ಮುಂದುವರಿಸಲು ಹಾಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರದೆ, ಕಾಲಹರಣ ಮಾಡಿದ್ದಾರೆ ಎಂದು ಆರೋಪಿಸಿದರು.

    ಕಾಂಗ್ರೆಸ್ ಮುಖಂಡರಾದ ಟಿ.ಎಚ್.ಎಂ.ಮಹೇಶ್, ಸಿದ್ದಲಿಂಗನಗೌಡ, ಕವಿತಾ ವಾಗೀಶ್, ಬೆಣ್ಣಿ ಬಸಣ್ಣ, ನಾಗರಾಜ, ರಾಜುನಾಯ್ಕ, ಮೂಡ್ಲಪ್ಪ, ದಾದಾಪೀರ್, ಮನೋಜ, ಬಸವರಾಜ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts