More

    ಕೃಷಿ ಯಂತ್ರೋಪಕರಣ ಸದ್ಬಳಕೆ ಮಾಡಿಕೊಳ್ಳಿ ; ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮನವಿ

    ಚಿಂತಾಮಣಿ : ಸಾಮಾನ್ಯ ರೈತರೂ ಕೃಷಿ ಚಟುವಟಿಕೆಗೆ ಬೇಕಾಗಿರುವ ಯಂತ್ರೋಪಕರಣಗಳನ್ನು ಬಾಡಿಗೆ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ತಿಳಿಸಿದರು.

    ಕೆಂಚಾರ‌್ಲಹಳ್ಳಿ ರೈತ ಸಂಪರ್ಕ ಕೇಂದ್ರದ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ ಹಾಗೂ ಚಿತ್ರದುರ್ಗದ ವರ್ಷ ಅಸೋಸಿಯೇಟ್ಸ್ ಸಂಸ್ಥೆ ಸಹಯೋಗದೊಂದಿಗೆ ನಿರ್ಮಿಸಿರುವ ಬಾಡಿಗೆ ಕೃಷಿ ಯಂತ್ರಧಾರೆಗೆ ಚಾಲನೆ ನೀಡಿ ಮಾತನಾಡಿದರು.

    ಪ್ರತಿಯೊಬ್ಬ ರೈತರು ಕೃಷಿ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದು, ಬೇಸಾಯಕ್ಕೆ ಬೇಕಾದಂತಹ ಪರಿಕರಣಗಳನ್ನು ಪಡೆದು ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಚಟುವಟಿಕೆ ನಡೆಸಬೇಕೆಂದು ಕಿವಿಮಾತು ಹೇಳಿದರು. ಕೃಷಿ ಉಪ ನಿರ್ದೇಶಕಿ ಎಂ. ಅನುರೂಪ್ ಮಾತನಾಡಿ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಇಲ್ಲಿ ಪಡೆಯಬಹುದು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಲ್ಲಿ ನೆಲಗಡಲೆ, ರಾಗಿ ಮತ್ತು ತೊಗರಿ ಕಿರು ಚೀಲಗಳನ್ನು ಲಾನುಭವಿಗಳಿಗೆ ವಿತರಿಸಿ ನಂತರ ರೈತರಿಗೆ ಬೀಜೋಪಚಾರ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆ ಮತ್ತು ಬೆಳೆ ಸಮೀಕ್ಷೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

    ಸಹಾಯಕ ಕೃಷಿ ನಿರ್ದೇಶಕರಾದ ಡಾ.ಎಸ್. ಶ್ರೀನಿವಾಸ, ಫಸಲ್ ಬಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.
    ಕೃಷಿ ಅಧಿಕಾರಿ ಸಿ.ಕೆ.ರಮೇಶ ಮಾತನಾಡಿ ಬಾಡಿಗೆ ನೀಡಿದ ಯಂತ್ರೋಪಕರಣಗಳಿಗೆ ಕಡ್ಡಾಯವಾಗಿ ಬಿಲ್ ಪಡೆಯಬೇಕೆಂದು ಕಿವಿಮಾತು ಹೇಳಿದರು.

    ತಹಸೀಲ್ದಾರ್ ಹನುಮಂತರಾಯಪ್ಪ, ತಾಪಂ ಮಾಜಿ ಸದಸ್ಯರಾದ ನಡಂಪಲ್ಲಿ ಶ್ರೀನಿವಾಸ ಮತ್ತು ಮುನೀರ, ಕೋರ‌್ಲಪರ್ತಿ ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ, ಎಂಪಿಸಿಎಸ್ ಮಾಜಿ ಸದಸ್ಯ ಮುನಿಶಾಮಿಗೌಡ, ಚಿತ್ರದುರ್ಗ ವರ್ಷ ಅಸೋಸಿಯೆಟ್ಸ್ ವಲಯ ವ್ಯವಸ್ಥಾಪಕ ಪ್ರಕಾಶ, ಚಿಕ್ಕಬಳ್ಳಾಪುರ ಕೇಂದ್ರ ಅಭಿವೃದ್ಧಿ ಅಧಿಕಾರಿ ರೋಹಿತ್, ಕೃಷಿ ಅಧಿಕಾರಿಗಳಾದ ಸಿ.ಕೆ.ರಮೇಶ, ಎಂ.ಸಿ. ಪ್ರಸಾದ್, ಶ್ವೇತಾ, ಲಕ್ಷ್ಮೀಶ್ರೀ, ಆತ್ಮ ಯೋಜನೆ ಸಿಬ್ಬಂದಿ ಶ್ವೇತಾ, ಶಿಲ್ಪ, ಆಶಾ, ಸುಷ್ಮಾ ಹಾಗೂ ರೈತರು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts