More

    ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ಧ; ಇದು ಬಿಜೆಪಿಯ ಸಂಕಲ್ಪ ಎಂದ ಶಾಸಕ

    ಮಂಗಳೂರು: ಸಚಿವ ಕೆ.ಎಸ್​. ಈಶ್ವರಪ್ಪ ನೀಡಿದ್ದ ಹೇಳಿಕೆ ಅಧಿವೇಶನದಲ್ಲಿ ಅನುರಣಿಸಿ, ಕೋಲಾಹಲಕ್ಕೆ ಕಾರಣವಾಗಿ, ಕಲಾಪವನ್ನೇ ಮೊಟಕುಗೊಳಿಸುವ ಹಂತಕ್ಕೆ ತಲುಪಿತ್ತು. ಇದೀಗ ಅದೇ ಹೇಳಿಕೆಯನ್ನು ಬಿಜೆಪಿಯ ಶಾಸಕರೊಬ್ಬರು ಹೇಳಿರುವುದು ಮತ್ತೊಂದು ಗದ್ದಲಕ್ಕೆ ವಾಗ್ವಾದಕ್ಕೆ ಕಾರಣವಾಗಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

    ಕೆಂಪು ಕೋಟೆಯ ಮೇಲೆ ಹಿಂದೂ ಸಮಾಜ ಭಗವಾಧ್ವಜ ಹಾರಿಸಿಯೇ ಸಿದ್ಧ. ಅದು ಭಾರತೀಯ ಜನತಾ ಪಕ್ಷದ ಸಂಕಲ್ಪವೂ ಕೂಡ ಎಂಬುದಾಗಿ ಬೆಳ್ತಂಗಡಿ ಶಾಸಕ ಹರೀಶ್​ ಪೂಂಜಾ ಘಂಟಾಘೋಷವಾಗಿ ಹೇಳಿರುವ ವಿಡಿಯೋ ವೈರಲ್​ ಆಗಿದೆ. ಶಿವಮೊಗ್ಗದ ಹರ್ಷ ಹತ್ಯೆಯನ್ನು ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ಬೆಳ್ತಂಗಡಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಈ ಹೇಳಿಕೆಯನ್ನು ನೀಡಿದರು.

    ಇದನ್ನೂ ಓದಿ: ಯೂಕ್ರೇನ್​ನಲ್ಲಿ ಕನ್ನಡಿಗ ಬಲಿ; ಮೃತನ ಪಾಲಕರಿಗೆ ಕರೆ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ

    ತುಳು ಭಾಷೆಯಲ್ಲಿ ಹರೀಶ್ ಪೂಂಜಾ ಭಾಷಣ ಮಾಡಿದ ಹರೀಶ್​ ಪೂಂಜಾ, ಕಾಂಗ್ರೆಸ್ ಷಡ್ಯಂತ್ರ, ಪ್ರೇರಣೆ ಮತ್ತು ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತನ ಹತ್ಯೆ ಆಗಿದೆ. ಆದರೆ ಅಂಥ ಕೋಟ್ಯಂತರ ಹರ್ಷರು ಕರ್ನಾಟಕದಲ್ಲಿ ಹುಟ್ಟಿ ಹಿಂದೂ ಸಮಾಜದ ರಕ್ಷಣೆಗಾಗಿ ಸಮಾಜಘಾತಕ ಶಕ್ತಿಗಳ ವಿರುದ್ಧ ಹೋರಾಡುತ್ತಾರೆ ಎಂದರು.
    ಕೆಂಪುಕೋಟೆ ಮೇಲೆ ಭಗವಾದ್ವಜ ಹಾರಿಸ್ತೀವಿ ಅಂತ ಈಶ್ವರಪ್ಪ ಹೇಳಿದರು ಎನ್ನುವ ಕಾರಣಕ್ಕೆ ವಿಧಾನಮಂಡಲದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ನವರು ಅಧಿವೇಶನ ಮೊಟಕುಗೊಳಿಸುವಂತೆ ಮಾಡಿದರು.

    ಇದನ್ನೂ ಓದಿ: ದರ್ಗಾ ಬಳಿ ಗಲಾಟೆ, ಕಲ್ಲುತೂರಾಟ: ಸಾರ್ವಜನಿಕರು, ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೂ ಗಾಯ…

    ಆದರೆ ನಾನು ಬೆಳ್ತಂಗಡಿಯ ಈ ಸಭೆಯಲ್ಲಿ ಶಾಸಕನಾಗಿ ಹೇಳುತ್ತೇನೆ, ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುವುದನ್ನು ಯಾವುದೇ ಪಕ್ಷ ತಡೆಯಲು ಸಾಧ್ಯವಿಲ್ಲ. ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುವುದು ಹಿಂದೂ ಸಮಾಜ ಮತ್ತು ಭಾರತೀಯ ಜನತಾ ಪಕ್ಷದ ಸಂಕಲ್ಪ. ಆದರೆ ನಾವು ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುವುದು ರಾಷ್ಟ್ರಧ್ವಜದ ಕೆಳಗೆ ಎಂಬ ಸ್ಪಷ್ಟನೆಯನ್ನೂ ಅವರು ನೀಡಿದರು.

    70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts