More

    ದರ್ಗಾ ಬಳಿ ಗಲಾಟೆ, ಕಲ್ಲುತೂರಾಟ: ಸಾರ್ವಜನಿಕರು, ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೂ ಗಾಯ…

    ಕಲಬುರಗಿ: ಕೇಂದ್ರ ಸಚಿವ, ಶಾಸಕ, ಸ್ವಾಮೀಜಿ ಅವರು ಬಂದಿದ್ದ ಸಂದರ್ಭದಲ್ಲೇ ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದ ಪ್ರಕರಣವೊಂದು ನಡೆದಿದೆ. ಇದರಲ್ಲಿ ಸಾರ್ವಜನಿಕರು ಮಾತ್ರವಲ್ಲದೆ ಪೊಲೀಸರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೂ ಗಾಯಗಳಾಗಿವೆ.

    ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಮಾಡಲು ಹೋಗಿದ್ದಾಗ ಈ ಗಲಾಟೆ ನಡೆದಿದೆ. ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ರಾಜಕುಮಾರ ಪಾಟೀಲ್, ಬಸವರಾಜ್ ಮತ್ತಿಮೂಡು, ಕಡಗಂಚಿ ಮಠದ ಸ್ವಾಮೀಜಿ ಸೇರಿ ಹತ್ತು ಜನರ ತಂಡ ಕಲ್ಲು ತೂರಾಟದ ನಡುವೆಯೇ ದರ್ಗಾದೊಳಗೆ ಹೋಗಿ ಪೂಜೆ ಮಾಡಿ ಬಂದಿದೆ.

    ಗಲಾಟೆ ಹಾಗೂ ಹಲ್ಲೆ ನಡೆಸಿದ ಒಂದು ಕೋಮಿನವರಿಂದಾಗಿ ಸಾರ್ವಜನಿಕರು, ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳು ಕೂಡ ಗಾಯಗೊಂಡಿದ್ದಾರೆ. ಗಲಾಟೆ ಪರಿಣಾಮ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನ ಬೂದಿ ಮುಚ್ಚಿದ ಕೆಂಡದಂತಾಗಿದೆ.

    ದರ್ಗಾ ಬಳಿ ಗಲಾಟೆ, ಕಲ್ಲುತೂರಾಟ: ಸಾರ್ವಜನಿಕರು, ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೂ ಗಾಯ...

    ಮಹಾ ಶಿವರಾತ್ರಿಯಂದು‌ ಶಿವಲಿಂಗ ಪೂಜೆ ಮಾಡಲಾಗಿದೆ. ಆದರೆ ಅನವಶ್ಯಕವಾಗಿ ಅನ್ಯಧರ್ಮೀಯರು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕಲ್ಲು ತೂರಾಟ ಮಾಡಿರುವುದು ಮಾನಸಿಕ ಅಸ್ವಸ್ಥತೆಯನ್ನು ತೋರಿಸುತ್ತದೆ. ಜಿಲ್ಲಾಡಳಿತ ಸೂಕ್ತವಾಗಿ ನಮಗೆ ಪೂಜೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

    70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts