More

    ಗೋಹತ್ಯಾ ನಿಷೇಧ ಕಾಯ್ದೆ ಮಹತ್ವದ ತೀರ್ಮಾನ

    ಸಾಗರ: ಗೋಹತ್ಯಾ ನಿಷೇಧ ಕಾಯ್ದೆ ರಾಜ್ಯ ಸರ್ಕಾರದ ಮಹತ್ವದ ತೀರ್ವನ. ಇದರಿಂದ ಗೋ ಸಂಕುಲ ಉಳಿಸಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

    ನಗರದ ಗಿರಿಬಾಪಟ್ ಅವರ ಗೋಶಾಲೆಯಲ್ಲಿ ಬಿಜೆಪಿ ನಗರ ಘಟಕದಿಂದ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದಿರುವ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗೋಪೂಜೆ ಮೂಲಕ ಚಾಲನೆ ನೀಡಿ ಮಾತನಾಡಿದರು.

    ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ. ಪ್ರಕೃತಿ ವಿಪತ್ತು ಸಂಭವಿಸುವ ಸಂದರ್ಭದಲ್ಲಿ ಗೋವುಗಳಿಗೆ ಮೊದಲು ಸೂಚನೆ ಸಿಗುತ್ತದೆ ಎನ್ನಲಾಗುತ್ತದೆ. ಅನೇಕ ವರ್ಷಗಳಿಂದ ದೇಶವಾಸಿಗಳು ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರಬೇಕೆನ್ನುವ ಬೇಡಿಕೆ ಇತ್ತು. ಅದನ್ನು ಸಾಕಾರಗೊಳಿಸಿದ ಹೆಗ್ಗಳಿಕೆ ನಮ್ಮ ಸರ್ಕಾರದ್ದಾಗಿದೆ ಎಂದು ಹೇಳಿದರು.

    ಮುಂದಿನ ದಿನಗಳಲ್ಲಿ ಗೋಶಾಲೆ ನಿರ್ಮಾಣ ಮತ್ತು ಗೋವುಗಳ ಸಂರಕ್ಷಣೆಗೆ ಸರ್ಕಾರ ಹೆಚ್ಚು ಒತ್ತು ನೀಡುವಂತೆ ಸಿಎಂಗೆ ಮನವಿ ಸಲ್ಲಿಸಲಾಗುತ್ತದೆ. ಗೋವಿನ ಬಗ್ಗೆ ಜನರಲ್ಲಿರುವ ಮನೋಭಾವ ಬದಲಾಗಬೇಕು. ಮಕ್ಕಳಲ್ಲಿ ಗೋವಿನ ಬಗ್ಗೆ ಪ್ರೀತಿ ಬೆಳೆಸುವಂತಾಗಬೇಕು ಎಂದರು.

    ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಪ್ರಕೃತಿ ನಮಗೆ ನೀಡಿದ ಶ್ರೇಷ್ಠ ಕೊಡುಗೆ ಗೋವು. ಮನುಷ್ಯ ಸ್ವಲ್ಪದಿನ ಮಾತ್ರ ತಾಯಿಹಾಲು ಕುಡಿಯುತ್ತಾನೆ. ನಂತರ ಅಂತಿಮ ಹಂತದವರೆಗೂ ಆತ ಗೋವಿನ ಹಾಲನ್ನೇ ಕುಡಿಯಬೇಕು. ರಾಜ್ಯ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಇದಕ್ಕೆ ಸಮಸ್ತ ಭಾರತೀಯರ ಸಹಕಾರವೂ ಇದೆ ಎಂದು ಹೇಳಿದರು.

    ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಆರ್.ಶ್ರೀನಿವಾಸ್, ಅರವಿಂದ ರಾಯ್ಕರ್, ಬಿ.ಎಚ್.ಲಿಂಗರಾಜ್, ಗೋಶಾಲೆಯ ಸ್ಥಾಪಕ ಗಿರಿಬಾಪಟ್ ಇತರರಿದ್ದರು. ಸಂತೋಷ್ ಶೇಟ್ ಸ್ವಾಗತಿಸಿದರು. ರೇಣುಕಾ ವಂದಿಸಿದರು. ಕೆ.ಸತೀಶ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts