More

    ರೈತರು ಕಾರಿನಲ್ಲಿ ಓಡಾಡಬಾರದಾ: ಸಂಸದ ಅನಂತ್‌ಕುಮಾರ್ ಹೆಗಡೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಟಾಂಗ್

    ಮಂಡ್ಯ: ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಅನುಮತಿ ನೀಡಿದೆ. ಆದರೆ ಈ ವಿಚಾರದಲ್ಲಿ ಸ್ವಲ್ಪ ಗೊಂದಲವಾಗುತ್ತಿದೆ. ನನ್ನ ಉದ್ದೇಶ ಕೈಕುಳಿಗಳನ್ನು ನಂಬಿಕೊಂಡು ಜೀವನ ಕಟ್ಟಿಕೊಂಡಿರುವ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅವಕಾಶ ಸಿಗಬೇಕು. ಆದರೆ ದೊಡ್ಡಮಟ್ಟದ ಬ್ಲಾಸ್‌ಗೆ ನನ್ನ ವಿರೋಧವಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
    ಕೈಕುಳಿಗೆ ಅವಕಾಶ ಮಾಡಿಕೊಡಿ ಎಂದು ನಮ್ಮ ತಂದೆಯಾಗಿ ರೈತಸಂಘ ಹೋರಾಟ ಮಾಡಿದೆ. ಅವಕಾಶ ಮಾಡಿಕೊಡಲು ಮುಂಚಿನಿಂದಲೂ ಪ್ರಯತ್ನ ಮಾಡಿದ್ದೇವೆ. ಎಲ್ಲದಕ್ಕಿಂತ ಕೆಆರ್‌ಎಸ್ ಅಣೆಕಟ್ಟೆಯೇ ಮುಖ್ಯ. ಕ್ರಷರ್‌ಗಳನ್ನು ಮೊದಲು ಮುಚ್ಚಿಸಿಬೇಕು. ಇಲ್ಲವಾದರೇ ಬ್ಲಾಸ್ಟ್ ಮಾಡುತ್ತಾರೆ. ಅದೇ ರೀತಿ ಕೈಕುಳಿ ಕೆಲಸ ಮಾಡುವವರಿಗೆ ಮಾತ್ರ ಅವಕಾಶ ಮಾಡಿಕೊಡಬೇಕು. ಅವರಿಗೂ ಬ್ಲಾಸ್ಟಿಂಗ್ ಮಾಡದಂತೆ ಸೂಚನೆ ಕೊಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಯಾರಾದರೂ ಬ್ಲಾಸ್ಟ್ ಮಾಡಲು ಬಂದರೇ ನಾನೇ ತಡೆಯಲು ಮುಂದೆ ನಿಲ್ಲುತ್ತೇನೆ. ಈ ವಿಚಾರದಲ್ಲಿ ಯಾರಿಗೂ ಹೆದರುವುದಿಲ್ಲ. ಕೆಆರ್‌ಎಸ್ ಅಣೆಕಟ್ಟೆ ನಮಗೆ ಮುಖ್ಯವೇ ಹೊರತು ಗಣಿಗಾರಿಕೆ ಅಲ್ಲ. ಇನ್ನು ಗಣಿ ಮಾಲೀಕರಿಗೂ ಕೂಡ ಕೆಆರ್‌ಎಸ್ ಡ್ಯಾಂ ನಮ್ಮದು ಎಂಬ ಮನೋಭಾವನೆ ಬರಬೇಕು. ಮತ್ತೆ ಏನಾದರೂ ಗಣಿಗಾರಿಕೆಗೆ ಅವಕಾಶ ಕೊಟ್ಟರೆ ಹೇಗೆ ಎಂದು ನನಗೂ ಆತಂಕವಿದೆ ಎಂದರು.
    ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಬಗ್ಗೆ ಸಂಸದ ಅನಂತ್‌ಕುಮಾರ್ ಹೆಗಡೆ ಅವಹೇಳನಕಾರಿ ಮಾತನಾಡಿದ್ದಾರೆ. ನಾನು ಬಹಳ ವಿಡಿಯೋಗಳನ್ನ ನೋಡಿದ್ದೇನೆ. ಬಡ ರೈತರು ಕಾರಿನಲ್ಲಿ ಬರುತ್ತಿದ್ದಾರೆ ಎನ್ನುತ್ತಾರೆ. ಹಾಗಾದರೇ ರೈತರು ಚೆನ್ನಾಗಿ ಇರಬಾರದಾ. ಅವರು ಕಾರಿನಲ್ಲಿ ಓಡಾಡಬಾರದಾ. ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಾವು ಅಲ್ಲಿಗೆ ಹೋಗಿ ಹೋರಾಟ ಮಾಡಬೇಕು ಅಂದರೆ ಹೋಗುತ್ತೇವೆ. ಆದ್ದರಿಂದ ಅವರ ಹೇಳಿಕೆಗೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ. ಯಾರು ಖಲಿಸ್ತಾನಿಗಳಲ್ಲ, ಎಲ್ಲರೂ ರೈತರು. ಈ ಹಿಂದೆ ಒಂದು ವರ್ಷ ಹೋರಾಟ ಮಾಡಿದ್ದಾರೆ. ರೈತರು ದುಡ್ಡು ಮಾಡಬಾರದಾ, ರೈತರು ಅಂದರೆ ಬಡವರು ಎಂಬುದು ತಲೆಯಲ್ಲಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts