More

    ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ

    ನುಗ್ಗೇಹಳ್ಳಿ: ಕೊಬ್ಬರಿಗೆ 15 ಸಾವಿರ ರೂ. ಬೆಲೆ ನಿಗದಿಪಡಿಸುವಂತೆ ಎಂದು ರಾಜ್ಯದ ಮಂತ್ರಿಗಳು ಪ್ರಧಾನಿ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಬೇಕು ಎಂದು ಶಾಸಕ ಸಿ.ಎಸ್.ಬಾಲಕೃಷ್ಣ ಆಗ್ರಹಿಸಿದರು.

    ನುಗ್ಗೇಹಳ್ಳಿ ಅಮ್ಮನವರ ದೇಗುಲದ ಆವರಣದಲ್ಲಿ 30 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ತಾಲೂಕಿನ 25,000 ಹೆಕ್ಟೇರ್ ಪ್ರದೇಶದಲ್ಲಿ ಹಾಕಲಾಗಿದ್ದ ರಾಗಿ ಹಾಗೂ ಮುಸುಕಿನ ಜೋಳ ಬೆಳೆ ಒಣಗಿ ಹೋಗಿದ್ದು, 300 ಕೋಟಿ ರೂ. ನಷ್ಟವಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಎಸ್‌ಟಿಆರ್‌ಎಫ್ ಮೂಲಕ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
    ಮುಖಂಡರಾದ ತೋಟಿ ನಾಗರಾಜ್, ಬಿ.ಆರ್.ದೊರೆಸ್ವಾಮಿ, ಉದ್ಯಮಿಗಳಾದ ಜಗದೀಶ್, ಸಬ್ಸಿಡಿ ದೇವರಾಜ್, ಎನ್.ಡಿ.ಜಗದೀಶ್, ಗ್ರಾಪಂ ಸದಸ್ಯರಾದ ನಟರಾಜ್, ಹೊನ್ನೇಗೌಡ, ಮಂಜುನಾಥ್ ಸ್ವಾಮಿ, ರವಿ, ಪಟೇಲ್ ಕುಮಾರ್, ಯಲ್ಲಪ್ಪ, ಮುರಳಿ, ಎಚ್.ಎಂ.ರಮೇಶ್, ರಂಗಣ್ಣ, ರಾಜಣ್ಣ, ಸಂಪತ್‌ಕುಮಾರ್, ಬಸವನಪುರ ಬಿ.ಬಿ.ರಾಮಸ್ವಾಮಿ, ನಾರಾಯಣ್, ಸುರೇಶ್, ಪ್ರದೀಪ್, ಪ್ರತಿಭಾ, ಜಯಣ್ಣ, ನಿಂಗರಾಜ್, ರೇಣುಕಾಸ್ವಾಮಿ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts