More

    ಉಂಡೆ ಕೊಬ್ಬರಿ ಖರೀದಿಗೆ ಕೇಂದ್ರಕ್ಕೆ ಮನವಿ

    ಹಾಸನ: ನೋಂದಣಿಯಾಗದೆ ಉಳಿದ 60 ಸಾವಿರ ಮೆಟ್ರಿಕ್ ಟನ್ ಉಂಡೆ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.


    ನುಗ್ಗೇಹಳ್ಳಿ ಹೋಬಳಿಯ ಹೊನ್ನ ಮಾರನಹಳ್ಳಿ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗ 20 ಲಕ್ಷ ರೂ. ವೆಚ್ಚದ ಡಾಂಬರ್ ರಸ್ತೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.


    ಕಳೆದ ವರ್ಷ 54,000 ಸಾವಿರ ಮೆಟ್ರಿಕ್ ಟನ್ ಉಂಡೆ ಕೊಬ್ಬರಿ ಖರೀದಿಸಲು ಕಡಿಮೆ ನೋಂದಣಿ ಕೇಂದ್ರಗಳಿದ್ದವು. ಈ ವರ್ಷ 8 ಜಿಲ್ಲೆಗಳಿಂದ 50ಕ್ಕೂ ಹೆಚ್ಚು ನೋಂದಣಿ ಕೇಂದ್ರಗಳಿಂದ 64000 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಪೂರ್ಣಗೊಂಡಿರುವುದರಿಂದ ಉಳಿದ ರೈತರ ಕೊಬ್ಬರಿ ನೋಂದಣಿ ಪ್ರಕ್ರಿಯೆ ಮುಂದುವರಿಸಲು ಎಸಿಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಸಂಸದ ಪ್ರಜ್ವಲ್ ರೇವಣ್ಣ ಅವರ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಅವರು ಕೇಂದ್ರಕ್ಕೆ ಮನವಿಯನ್ನೂ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.


    ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ್ ಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ರಂಗಸ್ವಾಮಿ, ಮುಖಂಡರಾದ ತೋಟಿನಾಗರಾಜ್, ಎಚ್.ಎಂ.ನಟರಾಜ್, ಮರವನಹಳ್ಳಿ ಬಾಲರಾಜ್, ಎಚ್.ಪಿ.ಸಂಪತ್ ಕುಮಾರ್, ಮಂಜುನಾಥ್ ಮುಖಂಡರಾದ ಶಿವೇಗೌಡ, ಕೃಷ್ಣಮೂರ್ತಿ, ಗಂಗಾಧರ್, ಕಾಂತರಾಜ್, ಸುರೇಶ್, ಕುಮಾರ್, ದೇವರಾಜ್, ಶೇಖರ್, ದೊಡ್ಡಯ್ಯ ಬಸವರಾಜು, ಇಂಜಿನಿಯರ್ ಮಂಜುನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts