More

    ಪ್ರಧಾನಿ ಮೋದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೇಷರತ್​ ಕ್ಷಮೆ ಕೇಳಿದ ಶಾಸಕ…

    ವಿಜಯನಗರ: ಪ್ರಧಾನಿ ನರೇಂದ್ರ ಮೋದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ಪರಿಮೇಶ್ವರ ನಾಯ್ಕ್ ಇದೀಗ ಕ್ಷಮೆ ಕೇಳಿದ್ದಾರೆ.

    ಮಾಜಿ ಸಚಿವ. ಹೂವಿನಹಡಗಲಿ ಕಾಂಗ್ರೆಸ್ ಶಾಸಕ ಪರಮೇಶ್ವರ ನಾಯ್ಕ್ ಪ್ರಧಾನಿ ನರೇಂದ್ರ ಮೋದಿಗೆ ನಿಂದಿಸಿದ್ದರು. ಮೋದಿ ಮಿ**ಗೆ ಹುಟ್ಟಿದ ಮಗ ಎಂದು ಅವಾಚ್ಯವಾಗಿ ಶಾಸಕ ಪರಮೇಶ್ವರ ನಾಯ್ಕ್ ಬೈದಿದ್ದರು.

    ‘ಪೆಟ್ರೋಲ್ ಬೆಲೆ ೧೦೫ ರೂಪಾಯಿ ಆದ್ರು ಈ ಯುವಕರು ಮೋದಿ ಮೋದಿ ಅಂತಾರೆ. ಜನ ದುಡ್ಡು ಕೊಟ್ಟವರಿಗೆ ವೋಟ್ ಹಾಕ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಪರಮೇಶ್ವರ್​ ನಾಯ್ಕ್​ ಕೆಟ್ಟದಾಗಿ ಬೈದಿದ್ದರು.

    ಸಾಮಾನ್ಯ ಕ್ಷೇತ್ರವಾಗಿರುವ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ದೆ ಮಡುವಂತೆ ಬೆಂಬಲಗರು ಪರಮೇಶ್ವರ್ ನಾಯ್ಕ್​ ಬಳಿ ಮನವಿ ವೇಳೆ ನಿಂದನೆ. ಶಾಸಕ ಪರಮೇಶ್ವರ ನಾಯ್ಕ್ ಮೊದಿಗೆ ಬೈದಿರುವ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬಿಜೆಪಿಯವರು ಪ್ರತಿಭಟನೆಗೆ ಸಿದ್ದತೆ ನಡೆಸಿದ್ದರು. ಈಗ ಮಾಡಿದ ತಪ್ಪಿನ ಅರಿವಾಗಿ ಶಾಸಕರು ಕ್ಷಮೆಯಾಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts