More

    ಬೆಳ್ಳಿ ಪರದೆ ಮೇಲೆ ರತನ್ ಟಾಟಾ ಬಯೋಪಿಕ್​; ನಿರ್ದೇಶನಕ್ಕೆ ಸಜ್ಜಾದ ಸುಧಾ ಕೋಂಗಾರ!

    ನವದೆಹಲಿ: ಈಗಾಗಲೇ ವಿವಿಧ ಭಾಷೆಯಲ್ಲಿ ಅನೇಕ ಸಾಧಕರು, ಮಹನೀಯರ ಜೀವನ ಚರಿತ್ರೆಯ ಸಿನಿಮಾಗಳು ಬಂದಿವೆ. ಇದೀಗ ದೇಶದ ಅಗ್ರಗಣ್ಯ ಉದ್ಯಮಿ ರತನ್ ಟಾಟಾ ಅವರ ಜೀವನಾಧಾರಿತ ಸಿನಿಮಾ ನಿರ್ಮಾಣವಾಗುತ್ತದೆ. ರತನ್ ಟಾಟಾ ಬಯೋಪಿಕ್ ಸಿನಿಮಾವನ್ನು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕಿ ಸುಧಾ ಕೋಂಗಾರ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಇದೀಗ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ವರದಿಯ ಪ್ರಕಾರ 2023ರಲ್ಲಿ ರತನ್ ಟಾಟಾ ಜೀವನಾಧಾರಿತ ಸಿನಿಮಾದ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ. 84 ವರ್ಷದ ರತನ್​ ಟಾಟಾ ಬಗೆಗೆ ಕುತೂಹಲಕರ ಹಾಗೂ ಯಾರಿಗೂ ಗೊತ್ತಿಲ್ಲದಂತಹ ಸಂಗತಿಗಳನ್ನು ಈ ಸಿನಿಮಾದ ಮೂಲಕ ಹೇಳಲಾಗುತ್ತಿದೆ ಎಂದು ವರದಿಯಾಗಿದೆ.

    ತಮಿಳಿನ ಸೂಪರ್​ಸ್ಟಾರ್​​ ಸೂರ್ಯ, ರತನ್ ಟಾಟಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಇನ್ನಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.

    ಹೆಮ್ಮೆಯ ರತನ್ ಟಾಟಾ ಜೀವನಾಧಾರಿತ ಸಿನಿಮಾ ನಿರ್ಮಾಣ ಆಗಬೇಕೆಂದು ಈ ಹಿಂದಿನಿಂದಲೂ ಅನೇಕರು ಧ್ವನಿಯೆತ್ತಿದ್ದರು. ರತನ್ ಟಾಟಾ ಯುವ ಸಮೂಹಕ್ಕೆ ಸ್ಫೂರ್ತಿಯಾಗುವಂತೆ ಸಾಧನೆ ಮಾಡಿದ್ದಾರೆ. ಆದರ್ಷ ವ್ಯಕ್ತಿಯಾಗಿ ರೂಪುಗೊಂಡಿರುವ ರತನ್ ಟಾಟಾ ಅವರ ಜೀವನದ ಕಥೆ ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿ ಎಂಬ ಮಾತು ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಸದ್ಯ ನಿರ್ದೇಶಕಿ ಸುಧಾ ಕೋಂಗಾರ ಸ್ಕ್ರಿಪ್ಟ್​​ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts