More

    ನಾರಿಯರ ಏಳಿಗೆಗೆ ಮಿಥಾಲಿ ಸಹಕಾರ ನಿರಂತರ

    ಗೊಳಸಂಗಿ: ದೇಶದ 40ಕ್ಕೂ ಅಧಿಕ ಎನ್‌ಟಿಪಿಸಿ ಘಟಕಗಳಲ್ಲಿ ನಮ್ಮ ಮಂಡಳದ ಸಹಕಾರದಿಂದ ಪ್ರಸ್ತುತ 2 ಸಾವಿರಕ್ಕೂ ಹೆಚ್ಚು ಬಾಲಕಿಯರಿಗೆ ಸಬಲೀಕರಣ ತರಬೇತಿ ನೀಡಲಾಗಿದೆ ಎಂದು ಕೂಡಗಿ ಎನ್‌ಟಿಪಿಸಿ ವ್ಯಾಪ್ತಿಯ ಮಿಥಾಲಿ ಮಹಿಳಾ ಮಂಡಳದ ಅಧ್ಯಕ್ಷೆ ಸಾಧನಾ ಪಾಂಡೆ ಹೇಳಿದರು.

    ಸಮೀಪದ ಕೂಡಗಿ ಎನ್‌ಟಿಪಿಸಿ ಮಹಾಶಕ್ತಿ ನಗರದಲ್ಲಿ ಸ್ಥಾವರ ವ್ಯಾಪ್ತಿಯ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ 5ನೇ ತರಗತಿ ಪೂರೈಸಿದ 70 ವಿದ್ಯಾರ್ಥಿನಿಯರಿಗಾಗಿ ಮೇ 1ರಿಂದ ಆರಂಭವಾಗಿದ್ದ 2023ನೇ ಸಾಲಿನ ಸಬಲೀಕರಣ ತರಬೇತಿ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

    ಎನ್‌ಟಿಪಿಸಿ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ವಿಜಯಕೃಷ್ಣ ಪಾಂಡೆ ಮಾತನಾಡಿ, ಐದು ಗ್ರಾಮದ 70 ಬಾಲಕಿಯರಿಗಾಗಿ ಸಬಲೀಕರಣ ತರಬೇತಿಯನ್ನು ಒಂದು ತಿಂಗಳು ಯಶಸ್ವಿಯಾಗಿ ಪೂರೈಸಲಾಗಿದೆ. ಈ ಅವಧಿಯಲ್ಲಿ ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ, ಯೋಗ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹತ್ತಾರು ಬಗೆಯ ಕಲಿಕೆಯನ್ನು ಮನದಟ್ಟು ಮಾಡಿಕೊಂಡಿದ್ದಾರೆ. ಇಂಥ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಮ್ಮ ಎನ್‌ಟಿಪಿಸಿ ನಿರಂತರವಾಗಿ ಮುಂದುವರಿಸಿಕೊಂಡು ಹೋಗಲಿದೆ ಎಂದರು.

    ಸಿಎಸ್‌ಆರ್ ವಿಭಾಗದ ಡಿಜಿಎಂ ಎಂ.ಎಚ್. ಮಂಜುನಾಥ (ರಾಣೆಬೆನ್ನೂರ), ಶಿಕ್ಷಕಿಯರಾದ ಜ್ಯೋತಿ ಬಿರಾದಾರ, ತಸ್ನಿಮ್ ಉಸ್ತಾದ ಮಾತನಾಡಿದರು. ಒ ಆ್ಯಂಡ್ ಎಂ ವಿಭಾಗದ ಜನರಲ್ ಮ್ಯಾನೇಜರ್ ಬಿ.ಎನ್. ಝಾ, ಪಿಜಿಎಂ ಅಲೋಕೇಶ್ ಬ್ಯಾನರ್ಜಿ, ಎಚ್‌ಆರ್ ವಿಭಾಗದ ಎಜಿಎಂ ಅನಿರುದ್ಧ ಸಿಂಗ್, ಸಾರ್ವಜನಿಕ ಸಂಪರ್ಕಾಧಿಕಾರಿ ಗುಲ್ಷನ್ ಟೋಪೊ, ಶಿಕ್ಷಕಿಯರು, ಮಿಥಾಲಿ ಮಹಿಳಾ ಮಂಡಳದ ಸದಸ್ಯರು, ವಿದ್ಯಾರ್ಥಿನಿಯರ ಪಾಲಕರು ಇತರರಿದ್ದರು.

    ತರಬೇತಿಯ ಒಂದು ತಿಂಗಳು ಹೊಸ ವಾತಾವರಣದಲ್ಲಿ ಶಿಕ್ಷಕಿಯರು ಹಾಗೂ ಮಿಥಾಲಿ ಮಹಿಳಾ ಮಂಡಳ ಸದಸ್ಯರು ತೋರಿದ ಪ್ರೀತಿ, ನೀಡಿದ ಶಿಕ್ಷಣ ನೆನೆದು ಸಬಲೀಕರಣ ತರಬೇತಿಗೆ ಬಂದಿದ್ದ ಬಾಲಕಿಯರು ಬಿಕ್ಕಿಬಿಕ್ಕಿ ಅತ್ತರು. ಶಿಕ್ಷಕಿಯರು ಮತ್ತು ಮಿಥಾಲಿ ಮಂಡಳಿ ಸದಸ್ಯೆಯರನ್ನು ಅಪ್ಪಿಕೊಂಡು ನಿಮ್ಮ ಈ ಒಡನಾಟದ ಕಲಿಕೆಯನ್ನು ನಮ್ಮ ಬದುಕಿನುದ್ದಕ್ಕೂ ಮರೆಯಲಾರೆವು ಎಂದು ಭಾವನಾತ್ಮಕ ಕಣ್ಣೀರು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts