More

    ಡಕಾಯಿತರೆಂದು ಭಾವಿಸಿ ಕುನೊ ಚೀತಾ ಟ್ರ್ಯಾಕಿಂಗ್ ತಂಡದ ಮೇಲೆ ದಾಳಿ ​

    ಭೋಪಾಲ್: ಭಾರತದಲ್ಲಿ ನಮೀಬಿಯಾದಿಂದ ತಂದ ಚೀತಾಗಳನ್ನು ಮರುಪರಿಚಯಿಸುವ ಯೋಜನೆಯ ಪ್ರಗತಿ ಪರಿಶೀಲನೆ ಹಾಗೂ ಮೇಲ್ವಿಚಾರಣೆಗಾಗಿ ಕೇಂದ್ರ ಸರ್ಕಾರ 11 ಸದಸ್ಯರ ಉನ್ನತ ಮಟ್ಟದ ಸಮಿ ಒಂದನ್ನು ರಚಿಸಿದೆ.

    ಗ್ಲೋಬಲ್​ ಟೈಗರ್​​ ಫೋರಂನ ಪ್ರಧಾನ ಕಾರ್ಯದರ್ಶಿ ರಾಜೇಶ್​ ಗೋಪಾಲ್​ ನೇತೃತ್ವವನ್ನು ವಹಿಸಿದ್ದಾರೆ. ಗುರುವಾರ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಚೀತಾ ಮರಿಗಳು ಮೃತಪಟ್ಟ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ.

    ಅಧಿಕಾರಿಗಳ ಮೇಲೆ ಹಲ್ಲೆ

    ಇದರ ಭಾಗವಾಗಿ ಚಿರೆತ ಟ್ರ್ಯಾಕಿಂಗ್​ ಮಾಡುತ್ತಿದ್ದ ತಂಡದ ಮೇಲೆ ಶಿವಪುರಿ ಜಿಲ್ಲೆಯಲ್ಲಿ ಗ್ರಾಮಸ್ಥರು ದಾಳಿ ಮಾಡಿದ್ದು ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

    jeep attack
    ದಾಳಿಯಲ್ಲಿ ಜಖಂಗೊಂಡಿರುವ ಜೀಪ್​

    ಪೋಹಾರಿ ಪ್ರದೇಶದ ಬುರಖೇಡಾ ಗ್ರಾಮದ ಬಳಿ ನಾಲ್ವರು ಸದಸ್ಯರ ಅಧಿಕಾರಿಗಳ ತಂಡವು ಆಶಾ ಹೆಸರಿನ ಚಿರತೆಯೂ ಸಂರಕ್ಷಿತ ಪ್ರದೇಶದಿಂದ ಕಾಡನ್ನು ಪ್ರವೇಶಿಸಿರುವುದನ್ನು ಗಮನಿಸಿದ್ದಾರೆ. ಬೆಳಗಿನ ಜಾವ ಆಗಿದ್ದರಿಂದ ಕತ್ತಲಿನಲ್ಲಿ ನಿಂತು ಮಾತನಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: IPL ಕ್ವಾಲಿಫೈಯರ್​2-ಫಿನಾಲೆ ಟಿಕೆಟ್​ಗಾಗಿ ಮುಗಿಬಿದ್ದ ಜನ; ಜೀವಕ್ಕಿಂತ ಟಿಕೆಟ್​ ಮುಖ್ಯವೇ ಎಂದ ನೆಟ್ಟಿಗರು

    ಡಕಾಯಿತರೆಂದು ಭಾವಿಸಿ ಹಲ್ಲೆ

    ಈ ವೇಳೆ ಅಧಿಕಾರಿಗಳು ತಾವು ಚಿರತೆಯ ಜಾಡನ್ನು ಹಿಡಿದು ಬಂದಿರುವುದಾಗಿ ತಿಳಿಸಿದ್ದು ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಗ್ರಾಮಸ್ಥರು ಕರ್ತವ್ಯ ನಿರತ ಅಧಿಕಾರಿಗಳನ್ನು ಡಕಾಯಿತರೆಂದು ಭಾವಿಸಿ ಹಲ್ಲೆ ನಡೆಸಿದ್ದಾರೆ.

    ಈ ವೇಳೆ ಹ್ಲಲೆಗೊಳಗಾದ ಅಧಿಕಾರಿಗಳ ತಂಡ ಹಿರಿಯ ಸದಸ್ಯರಿಗೆ ಮಾಹಿತಿ ನೀಡಿದ್ದು ಕುಡಲ್ಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಗ್ರಾಮಸ್ಥರಿಗೆ ವಿಚಾರವನ್ನು ಮನವರಿಕೆ ಮಾಡಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts