More

    ಗಣರಾಜ್ಯೋತ್ಸವದಂದೇ ಈ ವರ್ಷದ ಮೊದಲ ಮನ್​ ಕೀ ಬಾತ್​ ; ದೇಶದ ಜನರ ಉತ್ಸಾಹ ಎಂದೆಂದೂ ಕುಂದುವುದಿಲ್ಲ ಎಂದ ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 2020ರ ಮೊದಲ ಮನ್​ ಕೀ ಬಾತ್​ನ್ನು ಗಣರಾಜ್ಯೋತ್ಸವದಂದೇ ನಡೆಸುವ ಮೂಲಕ ವಿಶೇಷವಾಗಿಸಿದರು.

    ನಿಮ್ಮೆಲ್ಲರೊಟ್ಟಿಗೆ ಬೆಳಗ್ಗೆಯೇ ಮಾತನಾಡಬೇಕಿತ್ತು. ಆದರೆ ಗಣರಾಜ್ಯೋತ್ಸವ ನಿಮಿತ್ತ ಸಂಜೆ 6ಗಂಟೆಗೆ ಮನ್​ ಕೀ ಬಾತ್​ ನಡೆಸಿಕೊಡುತ್ತಿದ್ದೇನೆ ಎಂದು ಮೋದಿಯವರು ಹೇಳಿದರು.

    ಆಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟದ ಬಗ್ಗೆ ಮಾತನಾಡಿದ ಪ್ರಧಾನಿ, ಅದರಲ್ಲಿ ಪಾಲ್ಗೊಂಡ ಹಾಗೂ ಗೆದ್ದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
    ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಕೂಡ ಈ ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಂಡು ಫಿಟ್ ಆಗಿರಿ ಎಂದು ಸಲಹೆ ನೀಡಿದರು.

    ಇಂದು ಜನವರಿ 26. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದ ಮೋದಿಯವರು, ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು ಬದಲಾಗುತ್ತವೆ. ಆದರೆ ಈ ದೇಶದ ಜನರ ಅಮೋಘ ಉತ್ಸಾಹ ಮಾತ್ರ ಯಾವ ಕಾರಣಕ್ಕೂ ಕುಂದುವುದಿಲ್ಲ, ಅದು ಬದಲಾಗುವುದೂ ಇಲ್ಲ. ದೇಶಕ್ಕಾಗಿ ನಾವೇನಾದರೂ ಕೊಡುಗೆ ನೀಡಬೇಕು ಎಂಬ ಅವರ ತುಡಿತ ದಿನೇದಿನೆ ಹೆಚ್ಚುತ್ತಲೇ ಇದೆ ಎಂದು ಹೇಳಿದರು.

    ನಾವೆಲ್ಲರೂ ಒಟ್ಟಾಗಿ ಕಲಿಯಲು, ಬೆಳೆಯಲು ಮನ್​ ಕೀ ಬಾತ್​ ಒಂದು ವೇದಿಕೆಯಾಗುತ್ತಿದೆ. ಪ್ರತಿತಿಂಗಳೂ ಜನರೂ ನೀಡುವ ಸಲಹೆ ಬಗ್ಗೆ ಚರ್ಚಿಸಲು ದಾರಿಯಾಗುತ್ತಿದೆ ಎಂದರು.

    ಏಕಬಳಕೆ ಪ್ಲಾಸ್ಟಿಕ್​ ನಿಷೇಧ, ಖಾದಿ ಬಳಕೆ, ಸ್ವಚ್ಛತೆ, ಹೆಣ್ಣು ಮಕ್ಕಳಿಗೆ ಪುರಸ್ಕಾರ, ನಗದು ರಹಿತ ಆರ್ಥಿಕತೆಗಳೆಲ್ಲ ನಮ್ಮ ಮನ್​ ಕೀ ಬಾತ್ ಚರ್ಚೆಯಲ್ಲಿಯೇ ಹುಟ್ಟಿದ್ದು. ಅತ್ಯುತ್ತಮ ಸಲಹೆ ನೀಡಿದವರಿಗೆಲ್ಲ ಪ್ರಧಾನ ಮಂತ್ರಿ ಪತ್ರ ಬರೆಯಲಿದ್ದಾರೆ ಎಂದರು.

    ಜಲಶಕ್ತಿ ಅಭಿಯಾನ
    ಕೇಂದ್ರದ ಜಲಶಕ್ತಿ ಅಭಿಯಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ರಾಜಸ್ಥಾನದಲ್ಲಿ ಅಲ್ಲಿನ ಜನರು ನೀರಿನ ಸೆಲೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ಸಾರಾಹಿ ಸರೋವರನ್ನೂ ರಕ್ಷಿಸಲಾಗಿದೆ. ಉತ್ತರಾಖಂಡದ ಅಲ್ಮೋರಾ ಹಳ್ಳಿಯಲ್ಲಿ ಸ್ಥಳೀಯರು ನೀರಿನ ಪೈಪ್​ಗಳನ್ನು ಹಾಕಿಕೊಳ್ಳುವ ಮೂಲಕ ಜಲಸಂರಕ್ಷಣೆ ಮಾಡಿದ್ದಾರೆ. ಹಾಗೇ ನಿಮ್ಮ ನಿಮ್ಮ ರಾಜ್ಯ, ಊರಿನಲ್ಲಿ ನೀವು ಜಲಸಂರಕ್ಷಣೆಗೆ ಮಾಡಿರುವ ಕೆಲಸಗಳನ್ನು ಫೋಟೋ ತೆಗೆದು, ಆ ಬಗ್ಗೆ ಬರೆದು ವೈರಲ್​ ಮಾಡಿ, ನಮ್ಮೊಂದಿಗೆ ಹಂಚಿಕೊಳ್ಳಿ ಎಂದಿದ್ದಾರೆ.

    ಬುಡಕಟ್ಟು ಜನರ ಬದುಕಲ್ಲಿ ಹೊಸಬೆಳಕು
    ಬ್ರೂ ರ್ಯೊಂಗ್ ಬುಡಕಟ್ಟು ಜನರ ವಲಸೆ ಬಗ್ಗೆ ನರೇಂದ್ರ ಮೋದಿ ಮಾತನಾಡಿದರು. 1997ರಲ್ಲಿ ಈ ಬುಡಕಟ್ಟು ಜನಾಂಗದವರು ಮಿಝೋರಾಂನಿಂದ ತ್ರಿಪುರಕ್ಕೆ ನಿರಾಶ್ರಿತರಾಗಿ ವಲಸೆ ಬಂದಿದ್ದಾರೆ. ಅವರೆಲ್ಲ ತಾತ್ಕಾಲಿಕ ಶಿಬಿರಗಳಲ್ಲಿ ಇದ್ದರು. ಕಳೆದ 23 ವರ್ಷಗಳಿಂದ ಅವರ ಬಳಿ ಮನೆ, ಭೂಮಿ ಏನೂ ಇರಲಿಲ್ಲ. ಅನಾರೋಗ್ಯಕ್ಕೀಡಾದರೆ ಚಿಕಿತ್ಸೆ ಸಿಗುತ್ತಿರಲಿಲ್ಲ. ಮಕ್ಕಳಿಗೆ ಶಿಕ್ಷಣ ದೊರೆಯುತ್ತಿರಲಿಲ್ಲ.

    ಅವರ ಬದುಕು ಅದೆಷ್ಟು ಕಷ್ಟವಿತ್ತು ಯೋಚನೆ ಮಾಡಿ. ಈಗ ಅವರ ಪುನರ್ವಸತಿಗಾಗಿ ಕೇಂದ್ರ ಸರ್ಕಾರ 600 ಕೋಟಿ ರೂಪಾಯಿ ನೀಡಿದೆ. ಬುಡಕಟ್ಟು ಜನಾಂಗದ ನಿರಾಶ್ರಿತರ ಬದುಕಲ್ಲಿ ಹೊಸ ಬೆಳಕು ಮೂಡಿದೆ. ಅವರ ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ ನೀಡುವ ವ್ಯವಸ್ಥೆಯಾಗಿದೆ ಎಂದು ಮೋದಿ ತಿಳಿಸಿದರು.

    ಹಾಗೇ ಆಸ್ಸಾಂನಲ್ಲಿ ಇತ್ತೀಚೆಗೆ 600ಕ್ಕೂ ಹೆಚ್ಚು ಉಗ್ರರು ಶರಣಾದ ಬಗ್ಗೆ ಪ್ರಧಾನಿ ಮಾತನಾಡಿದರು. ಇದೊಂದು ದೊಡ್ಡ ಬದಲಾವಣೆ ಎಂದರು.

    ಇಸ್ರೋದ ಮುಂದಿನ ಮಹತ್ವಾಕಾಂಕ್ಷಿ ಯೋಜನೆ ಮಾನವ ಸಹಿತ ಗಗನಯಾನದ ಬಗ್ಗೆ ತುಂಬ ಸಂತೋಷವಿದೆ. ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲು ಆಗಲಿದೆ ಎಂದು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts