More

    ಬಾಯ್​ಫ್ರೆಂಡ್​ ಭೇಟಿಗೆ ತೆರಳಿದ ಮಹಿಳೆಯ ಶವ ಪತ್ತೆಯಾದ ಸ್ಥಿತಿ ಕಂಡು ಬೆಚ್ಚಿಬಿದ್ದ ಪಾಲಕರು!

    ಮೆಕ್ಸಿಕೋ: ನಾಪತ್ತೆಯಾಗಿದ್ದ ಎರಡು ಮಕ್ಕಳ ತಾಯಿಯೊಬ್ಬಳ ಮೃತದೇಹ ಕಿರುಕುಳ ನೀಡಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಹಲ್ಲುಗಳನೆಲ್ಲ ಕಿತ್ತೆಸೆಯಲಾಗಿದೆ. ನಾಪತ್ತೆಯಾದ ದಿನದ ಬೆನ್ನಲ್ಲೇ ಮೃತದೇಹ ಪತ್ತೆಯಾಗಿದೆ.

    ಲಿಜ್ಬೆತ್​ ಫ್ಲೊರ್ಸ್​ ಎಂಬಾಕೆ ಯುಎಸ್​ ಗಡಿಯನ್ನು ದಾಟಿ ಮೆಕ್ಸಿಕೋಗೆ ಪ್ರವೇಶ ನೀಡಿದ್ದಳು. ಆದರೆ, ಟೆಕ್ಸಾಸ್​ನಲ್ಲಿನ ತನ್ನ ಮನೆಗೆ ಮರಳದಿದ್ದರಿಂದ ಚಿಂತೆಗೀಡಾದ ಲಿಜ್ಬೆತ್​ ತಾಯಿ ಪೊಲೀಸರಿಗೆ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು.

    ಇದನ್ನೂ ಓದಿ: ಬಳ್ಳಾರಿ ಮೀನುಗಾರಿಕೆ ಕಚೇರಿಯಲ್ಲಿ ಮಹಿಳೆಯ ಬರ್ಬರ ಕೊಲೆ, ವ್ಯಕ್ತಿಯ ಆತ್ಮಹತ್ಯೆ: ಏನಿದರ ಮರ್ಮ?

    ನನ್ನು ಮಗಳು ಗಡಿ ಭಾಗದ ನಗರವಾದ ಮ್ಯಾಟಮೊರೊಸ್​ಗೆ ಆಗಸ್ಟ್​ 9ರಂದು ತೆರಳಿದ್ದಳು. ಅದೇ ದಿನ ಆಕೆ ಟೆಕ್ಸಾಸ್​ನ ಬ್ರೊನ್ಸವಿಲ್ಲೆಗೆ ಮರಳಬೇಕಿತ್ತು. ಬರದೇ ಇದ್ದುದ್ದರಿಂದ ಗಾಬರಿಗೊಂಡು ಆಗಸ್ಟ್​ 10ರಂದು ಬ್ರೊನ್ಸವಿಲ್ಲೆ ಪೊಲೀಸ್​ ಇಲಾಖೆಗೆ ದೂರು ನೀಡಿದೆ ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದರು.

    ಲಿಜ್ಬೆತ್​ ತಾಯಿ ಹೇಳಿದ ಪ್ರಕಾರ ಮಗಳು ತನ್ನ ಬಾಯ್​ಫ್ರೆಂಡ್​ ಭೇಟಿಯಾಗಲು ಹೋಗಿದ್ದಳು. ಇದೀಗ ನಾಪತ್ತೆಯಾದ ದಿನದ ಬೆನ್ನಲ್ಲೇ ಆಕೆಯ ಮೃತದೇಹ ಪತ್ತೆಯಾಗಿದೆ. ತುಂಬಾ ಕಿರುಕುಳ ನೀಡಿರುವ ರೀತಿಯಲ್ಲಿ ಶವ ಪತ್ತೆಯಾಗಿದೆ.

    ಮೃತದೇಹ ಪತ್ತೆಯಾದ ಸ್ಥಳದಲ್ಲಿದ್ದ ದೊಡ್ಡ ಬಂಡೆಗೆ ಹೊಡೆದು ಸಾಯಿಸಲಾಗಿದೆ ಎಂದು ತನಿಖಾಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಆಲ್ಲದೆ, ಆಕೆಯ ನೆತ್ತಿಯ ಭಾಗ ಹಾಗೂ ಹಲ್ಲುಗಳನ್ನು ಕೀಳಲಾಗಿದೆ. ಆಕೆಯ ದೇಹ ತರಚು ಗಾಯಗಳಿಂದ ಕೂಡಿರುವುದು ಕಿರುಕುಳ ನೀಡಿರುವುದಕ್ಕೆ ಪುಷ್ಠಿ ನೀಡಿದೆ.

    ಇದನ್ನೂ ಓದಿ: ಪತಿಯ ಜನನಾಂಗ ಕತ್ತರಿಸಿ ಕೊಲೆಗೈದ ಮಹಿಳೆ ತನ್ನ ಮಕ್ಕಳಿಗೆ ಹೇಳಿದ್ದು ಶಾಕ್​ ಆಗುವ ವಿಚಾರ!

    ಮಗಳ ಸಾವಲ್ಲದೆ, ಆಕೆಯ ಮೃತದೇಹದ ಸ್ಥಿತಿ ಕಂಡು ತಾಯಿಗೆ ಆಕಾಶವೇ ಕಳಚಿಬಿದ್ದಂತಾಗಿತ್ತು. ಇಬ್ಬರು ಮಕ್ಕಳನ್ನು ಬಿಟ್ಟು, ತನ್ನನ್ನು ಒಂಟಿ ಮಾಡಿ ಹೊರಟ ಮಗಳನ್ನು ನೆನೆದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)

    ಕೊಲೆ​ ಆರೋಪಿ ಎಸೆದ ಬಾಂಬ್​ಗೆ ಪೇದೆ ಸಾವು: ಮಾಡಿದ ಪಾಪಕ್ಕೆ ಅದೇ ಬಾಂಬ್​ಗೆ ಕೊಲೆಗಾರನೂ ಬಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts