More

    ಮಿಸೈಲ್ ಲಾಂಚರ್ ನಿಷ್ಕ್ರಿಯಗೊಳಿಸಿದ ಸಿಬ್ಬಂದಿ

    ಹಾರೋಹಳ್ಳಿ: ಕನಕಪುರ ತಾಲೂಕಿನ ಸಂಗಮ ಬಳಿಯ ಕೊಗ್ಗೆದೊಡ್ಡಿ ಗ್ರಾಮದ ಅರ್ಕಾವತಿ ನದಿ ಮಡಿವಾಳ ಸೇತುವೆ ಕೆಳಗೆ ನೀರಿನಲ್ಲಿ ಸಿಕ್ಕಿದ್ದ ಮಿಸೈಲ್ ಲಾಂಚರ್ ಅನ್ನು ಉಯ್ಯಂಬಳ್ಳಿ ಹೋಬಳಿಯ ಬೆಂಡಗೋಡು ಚೆಕ್​ಪೋಸ್ಟ್ ಬಳಿ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಹಾಗೂ ಪೊಲೀಸರು ಶುಕ್ರವಾರ ನಿಷ್ಕ್ರಿಯಗೊಳಿಸಿದರು.

    20 ವರ್ಷಗಳ ಹಿಂದೆ ಸಂಗಮ ಬಳಿ ಮಿಲಿಟರಿಯವರು ಇಲ್ಲಿ ತರಬೇತಿ ಕ್ಯಾಂಪ್ ಆಯೋಜಿಸುತ್ತಿದ್ದರು. ಈ ಸಂದರ್ಭದಲ್ಲಿ ಮಿಸೈಲ್ ಲಾಂಚರ್​ಗಳು ಕಣ್ಮರೆಯಾಗಿದ್ದವು. 6 ತಿಂಗಳ ಹಿಂದೆಯೂ ಸಂಗಮ ಬಳಿಯ ಬೊಮ್ಮಸಂದ್ರದ ಬಳಿ ಕಾವೇರಿ ನದಿ ತೀರದಲ್ಲಿ ಮಿಲಿಟರಿ ಉಪಕರಣಗಳು ಪತ್ತೆಯಾಗಿದ್ದವು ಎಂದು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಮಾಹಿತಿ ನೀಡಿದರು.

    ಬಿಡಿಡಿಎಸ್ ಎಸ್ಪಿ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸುಕುಮಾರ್, ಕನಕಪುರ ಸಿಪಿಐ ಕೃಷ್ಣ, ಸಾತನೂರು ಎಸ್​ಐ ರವಿಕುಮಾರ್, ವಲಯ ಅರಣ್ಯ ಅಧಿಕಾರಿಗಳಾದ ಅನಿಲ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts