More

    3 ವರ್ಷದ ಬಾಲಕನಿಗೆ ತಂಪು ಪಾನೀಯದ ಜತೆ ಮದ್ಯ ಬೆರೆಸಿ ಕುಡಿಸಿದ್ರು; 2 ಗಂಟೆ ಕಾಲ ಪ್ರಜ್ಞಾಹೀನನಾದ…

    ಮಧುಗಿರಿ: ಮೂರು ವರ್ಷದ ಬಾಲಕನಿಗೆ ಕಿಡಿಗೇಡಿಗಳು ತಂಪು ಪಾನೀಯದಲ್ಲಿ ಮದ್ಯವನ್ನು ಬೆರೆಸಿ ಕುಡಿಸಿ ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಏ. 10ರಂದು ಸಂಜೆ 6 ಗಂಟೆ ಸಮಯದಲ್ಲಿ ಗ್ರಾಮದ ಗುರುಸ್ವಾಮಿ ಎಂಬುವವರ ಮಗನಿಗೆ ಕಿಡಿಗೇಡಿಗಳು ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿದ್ದಾರೆ. ತಂಪು ಪಾನೀಯ ಎಂದು ಭಾವಿಸಿ ಮದ್ಯ ಕುಡಿದ ಬಾಲಕ ಸುಮಾರು 2 ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಪೋಷಕರು ಮತ್ತು ಗ್ರಾಮಸ್ಥರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ರುಂಡ-ಮುಂಡ ಬೇರೆ ಮಾಡಿ ಸೇಡು ತೀರಿಸಿಕೊಂಡರು; ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ಮಗನ ಕೊಲೆ

    ಗ್ರಾಮದಲ್ಲಿ ಮೂರು ಕಿರಾಣಿ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, ಇದರಿಂದ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಅಂಥ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆಂದು ಮಿಡಿಗೇಶಿ ಪೋಲೀಸ್ ಠಾಣೆಗೆ ದೂರು ಗ್ರಾಮಸ್ಥರು ದೂರು ನೀಡಿದ್ದಾರೆ.

    ಎಚ್ಚೆತ್ತ ಗ್ರಾಮ ಪಂಚಾಯತ್: ಮಿಡಿಗೇಶಿ ಗ್ರಾಮ ಪಂಚಾಯತ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋಮವಾರ ಹನುಮಂತಪುರ ಗ್ರಾಮದ ಶಾಲಾ ಆವರಣದಲ್ಲಿ ಎಸ್​ಡಿಎಂಸಿ ಅಧ್ಯಕ್ಷರು ಮತ್ತು ಸಾರ್ವಜನಿಕರ ಸಭೆ ನಡೆಸಿದ್ದು, ಶಾಲೆಯ ಮುಂಭಾಗದಲ್ಲಿ ಅಂಗಡಿ ಇಟ್ಟುಕೊಂಡು ಅಕ್ರಮವಾಗಿ ಮದ್ಯ ಮಾರುತ್ತಿದ್ದಾರೆ ಎಂದು ಈ ಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಅಶ್ವತ್ಥನಾರಾಯಣ ಮತ್ತು ಶ್ರೀಧರ ಎಂಬುವವರಿಗೆ ನೋಟಿಸ್​ ನೀಡಿದ್ದು, ಎ.15 ರೊಳಗೆ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಸೂಚಿಸಲಾಗಿದೆ.

    ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ ನಂಬರ್​ ಪ್ಲೇಟ್ ಮರೆಮಾಚಿ ಪರಾರಿ!; ದಂಡ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಚಂಡರು..

    ಅಬಕಾರಿ ನಿರೀಕ್ಷಕರ ಭೇಟಿ: ಘಟನೆಯ ನಂತರ ಗ್ರಾಮಕ್ಕೆ ಅಬಕಾರಿ ನಿರೀಕ್ಷಕ ಎಸ್. ರಾಮಮೂರ್ತಿ, ಪಿಎಸ್ಐ ಹನುಮಂತರಾಯಪ್ಪ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದ್ದು, ಕಿಡಿಗೇಡಿಗಳ ಬಗ್ಗೆ ಬಾಲಕನನ್ನು ಮತ್ತು ಪೋಷಕರನ್ನು ಕೇಳಿದಾಗ ಗೊತ್ತಿಲ್ಲ ಎಂದು ಹೇಳಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆದರೆ ಉಗ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಸೆಲ್ಫಿ ತೆಗೆಯಲು ಹೋದ ಪ್ರೇಮಿಗಳು ನಾಪತ್ತೆ; ತೀವ್ರ ಹುಡುಕಾಟ ನಡೆಸಿದರೂ ಇದುವರೆಗೂ ಆಗಿಲ್ಲ ಪತ್ತೆ

    ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ; ನಾಳೆ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts