More

    ಒಲಿಂಪಿಕ್ಸ್‌ನಲ್ಲಿ ಕನ್ನಡಿಗ ಫವಾದ್ ಮಿರ್ಜಾ ಕುದುರೆ ಫಿಟ್ನೆಸ್ ಪರೀಕ್ಷೆ ಪಾಸ್, ಸ್ಪರ್ಧೆಗೆ ಸಜ್ಜು

    ಟೋಕಿಯೊ: ಕರ್ನಾಟಕದ ಕುದುರೆ ಸವಾರ ಫವಾದ್ ಮಿರ್ಜಾ ಅವರ ಈಕ್ವೆಸ್ಟ್ರಿಯನ್ ಸ್ಪರ್ಧೆಯ ಜತೆಗಾರ ಕುದುರೆ ‘ಸೆನ್ಯೂಹ್ ಮೆಡಿಕಾಟ್’ ಆರೋಗ್ಯ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಶುಕ್ರವಾರದಿಂದ ಸ್ಪರ್ಧೆಗಿಳಿಯಲು ಫಿಟ್ ಆಗಿದೆ. ಗುರುವಾರ ನಡೆದ ಇನ್ಸ್‌ಪೆಕ್ಷನ್ ರೌಂಡ್‌ನಲ್ಲಿ ತೀರ್ಪುಗಾರರ ಸಮಿತಿ ಫವಾದ್ ಅವರ ಕುದುರೆಗೆ ಆರೋಗ್ಯವಾಗಿದೆ ಎಂದು ಪ್ರಮಾಣಪತ್ರ ನೀಡಿದರು.

    ಪ್ರತಿ ಈಕ್ವೆಸ್ಟ್ರಿಯನ್ ಸ್ಪರ್ಧೆಗೂ ಮುನ್ನ ಈ ರೀತಿ ಕುದುರೆಗಳನ್ನು ಪರೀಕ್ಷೆಗೆ ಒಳಪಡಿಸುವುದು ಸಾಮಾನ್ಯವಾಗಿದೆ. ಈ ಮೂಲಕ ಕುದುರೆ ಯಾವುದೇ ಗಾಯಗಳಿಲ್ಲದೆ, ಸ್ಪರ್ಧಿಸಲು ಫಿಟ್ ಆಗಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಕುದುರೆ ಸವಾರಿಯ ಸ್ಪರ್ಧೆಯಲ್ಲಿ ಸುಮಾರು 2 ದಶಕದ ಬಳಿಕ ಭಾರತೀಯರೊಬ್ಬರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.

    ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಸೆಕ್ಸಿಯಾಗಿ ಚಿತ್ರೀಕರಿಸುವಂತಿಲ್ಲ!

    ಫವಾದ್ 2018ರ ಏಷ್ಯನ್ ಗೇಮ್ಸ್‌ನಲ್ಲಿ ಇದೇ ಕುದುರೆಯೊಂದಿಗೆ 2 ರಜತ ಪದಕ ಜಯಿಸಿದ್ದರು. ಟೋಕಿಯೊದಲ್ಲಿ ‘ದಜರ-4’ ಕುದುರೆ ಜತೆ ಸ್ಪರ್ಧಿಸಲು ಮುಂದಾಗಿದ್ದ ಫವಾದ್, ಕೊನೇಕ್ಷಣದಲ್ಲಿ ನಿರ್ಧಾರ ಬದಲಾಯಿಸಿ ‘ಸೆನ್ಯೂಹ್ ಮೆಡಿಕಾಟ್’ ಕುದುರೆಯನ್ನು ಆಯ್ಕೆ ಮಾಡಿಕೊಂಡಿದ್ದರು.

    ಅಪ್ಪನ ಇಚ್ಛೆಗೆ ವಿರುದ್ಧವಾಗಿ ಬಾಕ್ಸಿಂಗ್ ರಿಂಗ್ ಪ್ರವೇಶಿಸಿದ್ದವಳು ಈಗ ಒಲಿಂಪಿಕ್ಸ್ ಪದಕಕ್ಕೆ ಸನಿಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts