More

    ಲಾಕ್​ಡೌನ್​​ನಲ್ಲಿ 200 ಅಪ್ರಾಪ್ತರ ವಿವಾಹ ದಾಖಲು: ಬಾಲ್ಯವನ್ನು ಕಸಿದುಕೊಂಡಿತಾ ಲಾಕ್​ಡೌನ್ ?

    ಮುಂಬೈ: ಕರೊನಾ, ಲಾಕ್​ಡೌನ್​​ ಜನರ ಬದುಕಿನಲ್ಲಿ ಅನೂಹ್ಯ ಬದಲಾವಣೆಗಳನ್ನೇ ತಂದಿದೆ.  ಯಾವ ಪ್ರಗತಿಪರ ಚಟುವಟಿಕೆಗಳಿಗೂ ಆಸ್ಪದವಿಲ್ಲದ ಆ ದಿನಗಳಲ್ಲಿ ಬೇಡದ ಸಂಗತಿಗಳು ನಡೆದುದ್ದೇ ಹೆಚ್ಚು.  ಆರ್ಥಿಕ ಸಂಕಷ್ಟ ಉಂಟಾದ ಕಾರಣ ಹಲವೆಡೆ ಬಾಲ್ಯವಿವಾಹಗಳು ನಡೆದಿವೆ.
    ಆತಂಕಕಾರಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ 15 ವರ್ಷದ ಮಿಥಾಲಿ ಸಾಥೆ ಎಂಬ ಬಾಲಕಿಯ ಪೋಷಕರು ಅವಳಿಗಿಂತ ನಲವತ್ತು ವರ್ಷ ಹಿರಿಯ ವ್ಯಕ್ತಿಯೊಂದಿಗೆ, ಅಂದರೆ, ಹೆಚ್ಚೂ ಕಡಿಮೆ ಅವಳ ಅಜ್ಜನಷ್ಟೇ ವಯಸ್ಸಾದ ವ್ಯಕ್ತಿಯೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದರು ಎಂದರೆ ನೀವು ನಂಬಲೇಬೇಕು. ಆದಾಗ್ಯೂ, ಕೆಲವರ ಸಮಯೋಚಿತ ಮಧ್ಯಸ್ಥಿಕೆಯಿಂದಾಗಿ ಮದುವೆ ನಡೆಯದೆ ನಿಂತುಹೋಗಿದೆ.

    ಇದನ್ನೂ ಓದಿ : ಮುಯ್ಯಿಗೆ ಮುಯ್ಯಿ…ಲಷ್ಕರ್​ ಎ ತೊಯ್ಬಾದ ಕಮಾಂಡರ್​ ಉಡೀಸ್​

    ಅಷ್ಟೇ ಅಲ್ಲದೆ ಅಪ್ರಾಪ್ತ ವಯಸ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿಯು ಸಲಹೆ ನೀಡಿಲಾಯಿತು. ಆಕೆಗೆ 18 ವರ್ಷ ತುಂಬುವವರೆಗೂ ಮದುವೆ ಮಾಡುವುದಿಲ್ಲ ಎಂಬ ಘೋಷಣಾ ಪತ್ರಕ್ಕೆ ಆಕೆಯ ಪಾಲಕರಿಂದ ಸಹಿ ಪಡೆಯಲಾಯಿತು.
    ಮಕ್ಕಳ ರಕ್ಷಣಾತ್ಮಕ ನಡೆಗಳೇನು? : ಸಂಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಾಗಿ ಇರುವ ನೋಡಲ್ ಸರ್ಕಾರಿ ಸಂಸ್ಥೆಯಾದ ಚೈಲ್ಡ್​​ಲೈನ್, ಮೇ ಮತ್ತು ಜುಲೈ ನಡುವೆ 92,000 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸಿದೆ, ಅದರಲ್ಲಿ 5,584 ಅಪ್ರಾಪ್ತ ವಯಸ್ಸಿನ ವಿವಾಹ ತಡೆಯಲು ಮಧ್ಯಸ್ಥಿಕೆ ವಹಿಸಿದೆ. ಮಾರ್ಚ್ ಮತ್ತು ಜೂನ್ ನಡುವೆ 200 ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ವರದಿಯಾಗಿವೆ, ಅದರಲ್ಲಿ ಶೇ.90 ಪ್ರಕರಣಗಳನ್ನು ಸ್ಥಳೀಯರು ಮತ್ತು ಅಧಿಕಾರಿಗಳ ಸಹಾಯದಿಂದ ತಪ್ಪಿಸಲಾಗಿದೆ ಎಂದು ಮಕ್ಕಳ ರಕ್ಷಣೆಗಾಗಿನ ಮಹಾರಾಷ್ಟ್ರ ರಾಜ್ಯ ಆಯೋಗದ ಮಾಜಿ ಸದಸ್ಯ ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತ ಸಂತೋಷ್ ಶಿಂಧೆ ತಿಳಿಸಿದ್ದಾರೆ.

    ಇದನ್ನೂ ಓದಿ : ಪದ್ಮಭೂಷಣ ಪಂಡಿತ ಜಸ್​ರಾಜ್​ ಇನ್ನಿಲ್ಲ

    ಕಾರಣಗಳು : ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಶಾಲಾ ಶಿಕ್ಷಕರು ಅಥವಾ ಸಂತ್ರಸ್ತರ ಸಹಪಾಠಿಗಳಿಂದಲೇ ತಿಳಿದುಬರುತ್ತವೆ. ಆದರೆ ಕೋವಿಡ್​​ನಿಂದಾಗಿ ಶಾಲೆಗಳು ಮುಚ್ಚಿರುವುದರಿಂದ ರಕ್ಷಣಾತ್ಮಕ ಅಸ್ತ್ರವೆಂಬುದೇ ಇಲ್ಲದಂತಾಗಿದೆ. ಅಲ್ಲದೆ, ಅನೇಕ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಲಾಕ್ ಡೌನ್ ಸಮಯದಲ್ಲಿ ಮದುವೆ ಮಾಡುವುದೇ ಸೂಕ್ತವೆಂದು ಭಾವಿಸುತ್ತಾರೆ. ಏಕೆಂದರೆ ಈ ಅವಧಿಯಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ಹಣವನ್ನು ಖರ್ಚು ಮಾಡಬೇಕಾಗಿಲ್ಲ ಅಥವಾ ಅತಿಥಿಗಳಿಗೆ ದುಬಾರಿ ವೆಚ್ಚದ ಭೋಜನ ವ್ಯವಸ್ಥೆ ಮಾಡಬೇಕಿಲ್ಲ. 200 ಕ್ಕೂ ಹೆಚ್ಚು ಅತಿಥಿಗಳಿಗೆ ಭೋಜನ ವ್ಯವಸ್ಥೆ ಮಾಡಿ ಲಕ್ಷಾಂತರ ರೂ. ಸಾಲ ಮಾಡುವ ಬದಲು, 20,000 ರೂ.ಗೆ ಎಲ್ಲವನ್ನೂ ಮಾಡಬಹುದು ಎನ್ನುತ್ತಾರೆ ಲಾತೂರ್‌ನ ಸಾವಿತ್ರಿಬಾಯಿ ಫುಲೆ ಯುವಜನ ರಕ್ಷಣೆ ಗುಂಪಿನ ಮುಖ್ಯಸ್ಥೆ ಸಂಧ್ಯಾ ರಾಣಿ ತಿಳಿಸಿದ್ದಾರೆ.
    ರಾಜ್ಯ ಸರ್ಕಾರ COVID-19 ನಿರ್ವಹಿಸುವಲ್ಲಿ ನಿರತವಾಗಿರುವುದರಿಂದ ಗ್ರಾಮೀಣ ಕುಟುಂಬಗಳಿಗೆ ಇದು ವರದಾನವಾಗಿದ್ದು, ತಮ್ಮ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ರಹಸ್ಯವಾಗಿ ಮದುವೆ ಮಾಡಲು ಅವಕಾಶ ಒದಗಿದಂತಾಗಿದೆ.

    ಲಸಿಕೆಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡಲಿದೆ ಕರೊನಾ ವೈರಸ್​ನ ರೂಪಾಂತರ; ಭಾರತದಲ್ಲೂ ಇದೆ ಕುರುಹು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts