More

    VIDEO | ಉರಿಗೌಡ-ನಂಜೇಗೌಡ ಗೊತ್ತಿಲ್ಲ… ದೇವೇಗೌಡರು ಮಾತ್ರ ಗೊತ್ತು; ಸಚಿವ ಸುಧಾಕರ್

    ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ಸದ್ಯ ಸದ್ದು ಮಾಡುತ್ತಿರುವ ಎರಡು ಹೆಸರುಗಳೆಂದರೆ ಅದು, ಉರಿಗೌಡ ಮತ್ತು ನಂಜೇಗೌಡ. ಅದರಲ್ಲೂ ಸಚಿವ ಮುನಿರತ್ನ ಉರಿಗೌಡ-ನಂಜೇಗೌರಡ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದಾದಾಗ, ಚರ್ಚೆಯ ವಿಷಯ ಹೆಚ್ಚು ಕಾವು ಪಡೆದುಕೊಂಡಿತ್ತು. ಈ ವೇಳೆ ಮೂರು ಪಕ್ಷಗಳ ಬಹುತೇಕ ನಾಯಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

    ಸಹಜವಾಗಿಯೇ ಆರೋಗ್ಯ ಸಚಿವ ಡಾ.ಸುಧಾಕರ್​ಗೂ ಉರಿಗೌಡ-ನಂಜೇಗೌಡ ಕುರಿತಾಗಿ ಪ್ರಶ್ನೆ ಎದುರಾಗಿದೆ. ಈ ವೇಳೆ ಸುಧಾಕರ್ ಪ್ರತಿಕ್ರಿಯಿಸುತ್ತಾ, ನನಗೆ ಉರಿಗೌಡ ಗೊತ್ತಿಲ್ಲ… ನಂಜೇಗೌಡನೂ ಗೊತ್ತಿಲ್ಲ. ನನಗೆ ಮಾಜಿ ಪ್ರಧಾನಿ ದೇವೇಗೌಡರು ಮಾತ್ರ ಗೊತ್ತು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ರೈಲು ನಿಲ್ದಾಣದ ಟಿ.ವಿ ಪರದೆಯಲ್ಲಿ ಪ್ರದರ್ಶನವಾದ ನೀಲಿ ಚಿತ್ರ; ಮುಜುಗರಕ್ಕೊಳಗಾದ ಪ್ರಯಾಣಿಕರು

    ಇತಿಹಾಸದಲ್ಲಿ ಉರಿಗೌಡ-ನಂಜೇಗೌಡರ ಬಗ್ಗೆ ನಾನು ಒದಿಲ್ಲ. ಗೊತ್ತಿರುವವರ ಬಗ್ಗೆ ಕೇಳಿದರೆ ನಾನು ಹೇಳುತ್ತೇನೆ. ಇದನ್ನು ದೊಡ್ಡ ವಿಷಯ ಮಾಡುವುದು ಬೇಡ. ಚರಿತ್ರೆಯಲ್ಲಿ ದೇಶ ಸೇವೆ ಮಾಡಿದವರಿಗೆ ಮಾನ್ಯತೆ ಕೊಟ್ಟು, ಗೌರವ ಸೂಚಿಸೋಣ ಎಂದು ಹೇಳಿದರು.

    ಸಚಿವ ಮುನಿರತ್ನ ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಈ ನಡುವೆ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಇಂದು ಬೆಳಗ್ಗೆ ಭೇಟಿಯಾದ ಮುನಿರತ್ನ, ನಾನು ಮಾತು ಕೊಟ್ಟಿದ್ದೇನೆ. ಯಾವುದೇ ಕಾರಣಕ್ಕೂ ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣ ಮಾಡುವುದಿಲ್ಲ ಹೇಳಿದ್ದರು. ಈ ಮೂಲಕ ವಿವಾದಿತ ಚಲನಚಿತ್ರದ ಗೊಂದಲಗಳಿಗೆ ತೆರೆಬಿದ್ದಿದೆ.

    ಇದನ್ನೂ ಓದಿ: ಬಾವಿಯಲ್ಲಿ ಬಾಲಕಿ ಮೃತದೇಹ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಬಯಲಾಯ್ತು ಬಾಲಕಿಯ ಚಿಮ್ಮಕ್ಕನ ಕಿರಾತಕ ಕೃತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts