More

    ಉರೀಗೌಡ-ನಂಜೇಗೌಡ ಸಿನಿಮಾ ಸ್ಥಗಿತ; ಗುರುಗಳು ಹೇಳಿದಂತೆ ಕೇಳಬೇಕು ಎಂದ ಸಿಎಂ ಬೊಮ್ಮಾಯಿ

    ಬೆಂಗಳೂರು: ಉರೀಗೌಡ-ನಂಜೇಗೌಡ ಸಿನಿಮಾ ಸ್ಥಗಿತಗೊಳಿಸಲು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರು ತಿಳಿಸಿದ ಹಿನ್ನೆಲೆಯಲ್ಲಿ, ಗುರುಗಳು ಹೇಳಿದಂತೆ ಕೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಸಚಿವ ಹಾಗೂ ಸಿನಿಮಾ ನಿರ್ಮಾಪಕ ಮುನಿರತ್ನ ಅವರು ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದ ಬಗ್ಗೆ ಮಾತನಾಡಿ, ಮುನಿರತ್ನ ಅವರು ಸಿನಿಮಾ ಮಾಡಲು ಹೊರಟಿದ್ದು, ಅದರ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ. ಅವರಿಂದ ಪೂರ್ತಿ ಮಾಹಿತಿ ತಿಳಿದ ನಂತರ ಮಾತನಾಡುವುದಾಗಿ ತಿಳಿಸಿದರು.

    ಇದನ್ನೂ ಓದಿ: ಬಾವಿಯಲ್ಲಿ ಬಾಲಕಿ ಮೃತದೇಹ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಬಯಲಾಯ್ತು ಬಾಲಕಿಯ ಚಿಮ್ಮಕ್ಕನ ಕಿರಾತಕ ಕೃತ್ಯ!

    ಉರಿಗೌಡ–ನಂಜೇಗೌಡ ಟೈಟಲ್ ರಿಜಿಸ್ಟರ್ ಆಗುತ್ತಿದ್ದಂತೆ ಮೇ 18 ರಂದು ಬೆಳಗ್ಗೆ 10 ಗಂಟೆಗೆ ಕಂಠೀರವ ಸ್ಟುಡಿಯೋನಲ್ಲಿ ಸಿನಿಮಾ ಮುಹೂರ್ತ ನಡೆಯಲಿದೆ ಎಂದು ಮುನಿರತ್ನ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಸಿನಿಮಾವನ್ನು ಸಚಿವ ಆರ್.ಅಶೋಕ್ ಹಾಗೂ ಸಿಟಿ ರವಿ ಪ್ರೆಸೆಂಟ್ಸ್ ಮಾಡಲು ಮುಂದಾಗಿದ್ದರು.

    ಮುನಿರತ್ನ ಅವರು ಟೈಟಲ್​ಗೆ ಅರ್ಜಿ ಸಲ್ಲಿಸಿದ್ದರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಾನು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಮಾತು ಕೊಟ್ಟಿದ್ದೇನೆ. ಯಾವುದೇ ಕಾರಣಕ್ಕೂ ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣ ಮಾಡುವುದಿಲ್ಲ ಎಂದು ಸಚಿವ ಮುನಿರತ್ನ ಹೇಳಿದ್ದಾರೆ. ಈ ಮೂಲಕ ಉರಿಗೌಡ-ನಂಜೇಗೌಡ ವಿವಾದಿತ ಚಲನಚಿತ್ರದ ಗೊಂದಲಗಳಿಗೆ ತೆರೆಬಿದ್ದಂತಾಗಿದೆ.

    ಇದನ್ನೂ ಓದಿ: ಬೆಂಗಳೂರಿನ ಈ ವ್ಯಕ್ತಿ ಹಗಲು ಆಟೋ ಚಾಲಕ; ರಾತ್ರಿ ಹಣಕಾಸು ಸಲಹೆಗಾರ!

    ರಾಜ್ಯಕ್ಕೆ ಮಾಡಬೇಕಾಗಿರುವ ಸಾಕಷ್ಟು ಕೆಲಸ ಕಾರ್ಯಗಳನ್ನು ಹಿಂದಿಟ್ಟು, ಉರಿಗೌಡ-ನಂಜೇಗೌಡ ಎಂಬ ಪಾತ್ರಗಳನ್ನು ಮುಂದಿಟ್ಟು ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಂಬುದನ್ನು ತಿಳಿಸಿದ್ದೇವೆ. ಇತಿಹಾಸದ ಹಿನ್ನೆಲೆಯನ್ನು ಸರಿಯಾಗಿ ಮನದಟ್ಟು ಮಾಡಿಕೊಟ್ಟಿರುವುದರಿಂದ ಸಿನಿಮಾ ವಿಚಾರವಾಗಿ ಸುಮ್ಮನಾಗಿದ್ದಾರೆ. ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿಯಾಗುತ್ತದೆ. ಶಾಸನದ ಹಿನ್ನೆಲೆಯಲ್ಲಿ ಬರೆಯುವುದು ಮುಂದಿನ ಪೀಳಿಗೆಗೆ ಶಕ್ತಿಯಾಗುತ್ತದೆ ಎಂದು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

    ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಜಾನ್​ ಕೂಗಿದ ಯುವಕ; ಆತನ ಧೈರ್ಯದ ಹಿಂದೆ ಇರೋದು ಕಾಂಗ್ರೆಸ್ ಪಕ್ಷ ಎಂದ ಶೋಭಾ ಕರಂದ್ಲಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts