More

    ನಾವು ಅಶ್ವಮೇಧ ಕುದುರೆ ಬಿಟ್ಟಿದ್ದೇವೆ, ಕಾಂಗ್ರೆಸ್​ಗೆ ದಮ್ಮು ತಾಕತ್ ಇದ್ದರೆ ಕಟ್ಟಿ ಹಾಕಿ; ಶ್ರೀರಾಮುಲು ಸವಾಲು

    ಬಳ್ಳಾರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು ಕರ್ನಾಟಕದತ್ತ ಮುಖ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಸಂಡೂರು ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಕಾಂಗ್ರೆಸ್​ಗೆ ಸವಾಲು ಹಾಕಿದ್ದಾರೆ.

    ಸಂಡೂರು ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಲ್ಯಾಣ ಕ್ಷೇತ್ರದಲ್ಲಿ ಈ ಬಾರಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಸಂಕಲ್ಪ ಮಾಡುತ್ತೇವೆ. ಅಮಿತ್ ಶಾ ಚುನಾವಣೆ ಚಾಣುಕ್ಯಾ ಎಂದು ಹೇಳುತ್ತಾರೆ. ಮೋದಿಜಿ ಮತ್ತು ಅಮಿತ್ ಷಾ ಅನೇಕ ಚುನಾವಣೆ ಗೆದ್ದಿದ್ದಾರೆ. ಮುಂಬರುವ 2023ರ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಬಿಜೆಪಿಯನ್ನ ಗೆಲ್ಲಿಸಲಿದ್ದಾರೆ. ನಾವು ಅಶ್ವಮೇಧ ಕುದುರೆ ಬಿಟ್ಟಿದ್ದೇವೆ, ಕಾಂಗ್ರೆಸ್​ಗೆ ದಮ್ಮು ತಾಕತ್ ಇದ್ದರೆ ಕಟ್ಟಿ ಹಾಕಿ ಎಂದಿದ್ದಾರೆ.

    ಇದನ್ನೂ ಓದಿ: ಗಂಡನ ತಂಗಿಯನ್ನೇ ಮದುವೆಯಾದ 2 ಮಕ್ಕಳ ತಾಯಿ!

    ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಛಿದ್ರವಾಗತ್ತದೆ. ಗುಜರಾತ್ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಕಲ್ಯಾಣ ಕರ್ನಾಟಕದ ಜನ ಕಾಂಗ್ರೆಸ್​​ ಕಿತ್ತೆಸೆಯುವ ಸಂಕಲ್ಪ ಮಾಡಬೇಕಾಗಿದೆ. ಕಾಂಗ್ರೆಸ್ ನಾಯಕರು ಕಳೆದ 50 ವರ್ಷದಲ್ಲಿ ಹಿಂದುಳಿವ ವರ್ಗಗಳನ್ನ ವೋಟ್ ಬ್ಯಾಂಕ್ ಮಾಡಿಕೊಂಡು ಬಂದಿವೆ. ನಮ್ಮ ಸರ್ಕಾರ ಬಂದ್ರೆ ಎಸ್ಸಿ, ಎಸ್ಟಿಗೆ ಮೀಸಲಾತಿ ಮಾಡೋದಾಗಿ ನಾನು ಮಾತು ಕೊಟ್ಟಿದ್ದೆ, ಅದರಂತೆ ನಡೆದಿದ್ದೇನೆ.

    ಇದನ್ನೂ ಓದಿ: ಸಾಲದ ಹೊರೆಗೆ ಒಂದೇ ಕುಟುಂಬದ ಮೂವರು ಪ್ರಾಣ ತ್ಯಾಗ; ಮಗಳ ಮೇಲಿನ ಅತಿಯಾದ ಪ್ರೀತಿಯೇ ಮುಳುವಾಯ್ತಾ?

    ಮೋದಿ ಅವರು ಕಾಂಗ್ರೆಸ್​ನವರ ಕನಸಿನಲ್ಲಿ ಕಾಡುತ್ತಿದ್ದಾರೆ. ರಾಹುಲ್ ಗಾಂಧಿ ಕಾಲಿಟ್ಟ ಕಡೆ ಕಾಂಗ್ರೆಸ್ ಸರ್ವನಾಶವಾಗುತ್ತಿದೆ. 300 ಮಂದಿ ಬಿಜೆಪಿ ಸಂಸದರಿದ್ದರೆ, ಕಾಂಗ್ರೆಸ್​ನಲ್ಲಿ 52 ಮಂದಿ ಇದ್ದಾರೆ. ಆದರೆ ಬಿಜೆಪಿ 16 ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಕೇವಲ ಮೂರು ಜಿಲ್ಲೆಗಳಲ್ಲಿದೆ. ಕಾಂಗ್ರೆಸ್​ಗೆ ವಿರೋಧ ಪಕ್ಷವಾಗೋದಕ್ಕೂ ಶಕ್ತಿ ಇಲ್ಲ. ಕಾಂಗ್ರೆಸ್ ಚಿಂದಿ ಚಿತ್ರನ್ನ ಆಗಿರುವ ಪಾರ್ಟಿಯಾಗಿದೆ. ಈ 420 ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಒಂದು ಗತಿಗೆ ಹೋಗತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.

    ಪ್ರತಿಭಟನೆ ನಡುವೆಯೇ ರೈಲಿಗೆ ತಲೆಕೊಟ್ಟು ಪ್ರಾಣ ಬಿಟ್ಟ ಅನುದಾನಿತ ಶಾಲಾ ಶಿಕ್ಷಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts