More

    ಇಂಜಿನಿಯರ್‌ಗಳನ್ನು ರಕ್ಷಿಸಿ: ಕೇಂದ್ರಕ್ಕೆ ಸಚಿವ ಜಾರಕಿಹೊಳಿ ಮೊರೆ

    ಬೆಂಗಳೂರು: ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್ ನಗರದಲ್ಲಿ ಸಿಲುಕಿರುವ 12 ಜನ ಇಂಜಿನಿಯರ್‌ಗಳನ್ನು ರಕ್ಷಿಸುವಂತೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ.

    ಇದನ್ನೂ ಓದಿ: ಬಿಎಸ್​ವೈಗೆ ಡಿಕೆಶಿ ಸವಾಲು.. ಅದೂ 24 ಗಂಟೆ ಗಡುವು ವಿಧಿಸಿ!

    ಈ ಕುರಿತು ವಿದೇಶಾಂಗ ಸಚಿವ ಡಾ. ಸುಬ್ರಮಣ್ಯಂ ಜೈಶಂಕರ್ ಅವರಿಗೆ ಪತ್ರವೊಂದನ್ನು ಬರೆದಿರುವ ಅವರು, ಆದಷ್ಟು ಬೇಗ ಆ ಇಂಜಿನಿಯರ್‌ಗಳನ್ನು ಅಲ್ಲಿಂದ ಭಾರತಕ್ಕೆ ಕರೆತರುವಂತೆ ಕೋರಿದ್ದಾರೆ.

    ಈ ಇಂಜಿನಿಯರ್‌ಗಳು ಹೈಡ್ರಾಲಜಿ ವಿಷಯದ ತರಬೇತಿಗಾಗಿ ಅಲ್ಲಿಗೆ ಹೋಗಿದ್ದರು, ಮಾ. 23ರಂದು ಹಿಂತಿರುಗಬೇಕಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕೆಲವೊಮ್ಮೆ ಚಿಕ್ಕ ಸಂಗತಿಗಳೂ ಅಮೂಲ್ಯವೆನಿಸುತ್ತವೆ. ಅದಕ್ಕೊಂದು ಸಾಕ್ಷಿ ಈ ವಿಡಿಯೋದಲ್ಲಿದೆ.

    ಜೂ. 7ರಂದು ಆಕ್ಲೆಂಡ್‌ನಿಂದ ಬರಲಿರುವ ವಿಮಾನದಲ್ಲಿ ಈ ಇಂಜಿನಿಯರ್‌ಗಳನ್ನು ಕರೆತರಲು ಅವಕಾಶ ಕಲ್ಪಿಸುವಂತೆಯೂ ಮನವಿ ಮಾಡಿದ್ದಾರೆ. ವಾಪಸು ಬರುವವರನ್ನು ಕೂಡಲೇ ಕ್ವಾರಂಟೈನ್‌ಗೆ ಒಳಪಡಿಸುವ ಜವಾಬ್ದಾರಿ ತಮ್ಮದು ಎಂದೂ ಹೇಳಿದ್ದಾರೆ.

    ಜೂನ್ 30ರವರೆಗೆ ಲಾಕ್‌ಡೌನ್ ವಿಸ್ತರಣೆ; ಜೂನ್ 8ರಿಂದ ದೇವಸ್ಥಾನ, ಹೋಟೆಲ್ ‌ಓಪನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts