More

    ಗುಳೆ ಹೋದಮೇಲೆ ಕೋಟೆ ಬಾಗಿಲು ಮುಚ್ಚೋಕೆ ಹೊರಟ್ರು ಸಾಮ್ರಾಟ್​ !: ಸಚಿವ ಆರ್. ಅಶೋಕ್ ಸಭೆಯ ಕಥೆ-ವ್ಯಥೆ ಇದು..

    ಬೆಂಗಳೂರು: ಲಾಕ್​ಡೌನ್​ನಿಂದ ಆತಂಕ ಗೊಂಡ ಸಾವಿರಾರು ಕಟ್ಟಡ ಕಾರ್ವಿುಕ ಕುಟುಂಬ ಗಳು ತಮ್ಮೂರು ತಲುಪಲು ಬೆಂಗಳೂರಿನಿಂದ ನಡೆದುಕೊಂಡೇ ಹೋದ 4 ದಿನಗಳ ಬಳಿಕ ಸರ್ಕಾರ ಎಚ್ಚರಗೊಂಡಿದೆ! ಕಂದಾಯ ಸಚಿವ ಅಶೋಕ್ ಬುಧವಾರ ಕ್ರ್ರೆಡಾಯ್ (ದಿ ಕಾನ್ಪಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿ ಯೇಷನ್ ಆಫ್ ಇಂಡಿಯಾ) ಪದಾಧಿಕಾರಿಗಳ ಜತೆ ಸಭೆ ನಡೆಸಿ ವಿವಿಧ ಕ್ರಮಕ್ಕೆ ಸೂಚನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಕಟ್ಟಡ ಕಾರ್ವಿುಕರು ಗುಳೆ ಹೋಗುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಕ್ರೆಡಾಯ್ ಪದಾಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಕಾರ್ವಿುಕರು ಇರುವ ಸ್ಥಳ ಬಿಟ್ಟು ಬೇರೆಡೆ ತೆರಳುವಂತಿಲ್ಲ. ಅವರಿಗೆ ಅಗತ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. ಕಾರ್ವಿುಕರು ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ,

    ಡೆವಲಪರ್ಸ್​ಗಳಿಗೆ ಹಲವು ನಿರ್ದೇಶನ ನೀಡಲಾಗಿದೆ. 30 ಸಾವಿರಕ್ಕೂ ಹೆಚ್ಚು ಕಾರ್ವಿುಕರು ಬೆಂಗಳೂರಿನಲ್ಲಿದ್ದಾರೆ. ಇವರಿಗೆ ಇರುವ ಸ್ಥಳದಲ್ಲೇ ವಸತಿ, ಊಟದ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಲಾಗಿದೆ. ಕಾರ್ವಿುಕರು ರಸ್ತೆಯಲ್ಲಿ ಓಡಾಡುವುದು ಕಂಡುಬಂದರೆ ಸಂಬಂಧ ಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ರಾಜಧಾನಿಯಲ್ಲಿರುವ ಬಡವರ್ಗದ ಜನ, ಕೊಳೆಗೇರಿ ಪ್ರದೇಶದಲ್ಲಿರುವ ಜನರಿಗೆ ಗುರುವಾರದಿಂದ ಏ.14ರವರೆಗೆ ಉಚಿತವಾಗಿ ನಂದಿನಿ ಹಾಲು ವಿತರಣೆ ಮಾಡಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

    ಕರೊನಾ ಕೊಡ್ತು ಗುಡ್​ನ್ಯೂಸ್​ – ವಿಚಾರಣಾಧೀನ ಕೈದಿಗಳಿಗೆ ಬಿಡುಗಡೆ ಭಾಗ್ಯ: ವಿವಿಧ ಜೈಲುಗಳ 383 ಬಂಧಿಗಳ ಪಟ್ಟಿ ಸಿದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts