More

  ಮಾರ್ಚ್‌ನಲ್ಲಿ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ: ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿಕೆ

  ಮಂಡ್ಯ: ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಕ್ಷೇತ್ರಗಳನ್ನ ಗೆಲ್ಲುವ ಉದ್ದೇಶ ಇಟ್ಟುಕೊಂಡಿದ್ದಾರೆ. ಆ ಉದ್ದೇಶಕ್ಕೆ ಪೂರಕವಾಗಿ ಹಲವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಇನ್ನು ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಿಸುವ ಜವಾಬ್ದಾರಿಯನ್ನ ಪಕ್ಷ ಕೊಟ್ಟಿದೆ. ಆ ದೃಷ್ಟಿಯಿಂದಲೇ ನಾನು ಮಂಡ್ಯಗೆ ಬಂದಿದ್ದೀನಿ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು.
  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಾರ ನಾನು ಹಾಗೂ ಸಿಎಂ ಜತೆ ಸೇರಿ ಮೋದಿ ಅವರನ್ನು ಭೇಟಿ ಮಾಡುತ್ತೇವೆ. ಬೆಂಗಳೂರು-ಮೈಸೂರು ಹೈವೇ ಉದ್ಘಾಟನೆಗೆಂದು ಮಾರ್ಚ್‌ನಲ್ಲಿ ಪ್ರಧಾನಿ ಮೋದಿ ಅವರು ಬರುತ್ತಾರೆ. ಆ ಕಾರ್ಯಕ್ರಮ ಮಂಡ್ಯದಲ್ಲಿ ನಡೆಯುತ್ತದೆ. ಕಾಂಗ್ರೆಸ್-ಜೆಡಿಎಸ್ ಅನ್ನು ಮಂಡ್ಯದಲ್ಲಿ ತೊಳೆಯುತ್ತೇವೆ ಎಂದರು.
  ಮಂಡ್ಯ ನನಗೇನು ಹೊಸದಲ್ಲ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಹಲವು ಅಭಿವೃದ್ದಿ ಕೆಲಸ ಮಾಡಿದ್ದೀನಿ. ಚುನಾವಣೆಗಾಗಿ ರಾಜಕೀಯ ಬದಲಾವಣೆ ತರುವುದಕ್ಕಾಗಿಯೇ ನಾನು ಬಂದಿದ್ದೀನಿ. ಎರಡೂ ಪಕ್ಷಗಳನ್ನ ನೋಡಿ ಜನರು ಬೇಸರಗೊಂಡಿದ್ದಾರೆ. ಮೈಷುಗರ್ ಕಾರ್ಖಾನೆಯನ್ನು ನಮ್ಮ ಸರ್ಕಾರ ಬಂದ ಮೇಲೆ ಓಪನ್ ಮಾಡಿದ್ದೀವಿ. ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಚಾಲನೆ ಕೊಡಬೇಕು. ಈಗಾಗಲೇ ಮಂಡ್ಯದಲ್ಲಿ ನಾವು ಖಾತೆ ಓಪನ್ ಮಾಡಿದ್ದೀವಿ. ಈ ಖಾತೆಗೆ ಇನ್ನಷ್ಟು ಸೇರ್ಪಡೆ ಮಾಡುತ್ತೇವೆ. ಜಿಲ್ಲೆಯ ಜನರು ಎರಡು ಪಕ್ಷಗಳನ್ನ ನೋಡಿ ಬದಲಾವಣೆ ಬಯಸಿದ್ದಾರೆ. ಬದಲಾವಣೆ ಬೇಕಾದರೆ ಒಳ್ಳೆಯ ಅಭ್ಯರ್ಥಿಗಳು ಬೇಕು. ಆದ್ದರಿಂದ ಉತ್ತಮ ಅಭ್ಯರ್ಥಿಗಳು ಹಾಕುತ್ತೇವೆ. ಹಲವು ಮುಖಂಡರ ಜೊತೆ ಚರ್ಚೆಯಾಗಿದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಎರಡೂ ಪಕ್ಷ ತಿಪ್ಪರುಲಾಗ ಹಾಕಿದರೂ ನಡೆಯಲ್ಲ ಎಂದರು.
  ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಎಚ್.ಪಿ.ಮಹೇಶ್, ಎಚ್.ಆರ್.ಅರವಿಂದ್, ನವನೀತ್‌ಗೌಡ ಇತರರಿದ್ದರು.
  ಉಸ್ತುವಾರಿ ವಹಿಸಿಕೊಂಡ ನಂತರ ಮೊದಲ ಬಾರಿಗೆ ಆಗಮಿಸಿದ ಅಶೋಕ್ ಅವರನ್ನು ಫ್ಯಾಕ್ಟರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಗತಿಸಿದರು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts