More

    ಸಚಿವ ಪ್ರಿಯಾಂಕ್ ಖರ್ಗೆಯವರಿಂದ ನರೇಗಾ ಯೋಜನೆಯ ನೂತನ ವರ್ಷದ ಕ್ಯಾಲೆಂಡರ್​ ಬಿಡುಗಡೆ

    ಬೆಂಗಳೂರು: ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಹೊರತಂದಿರುವ ಮಹಾತ್ಮ ಗಾಂಧಿ ನರೇಗಾ ಯೋಜನೆಯ ನೂತನ ವರ್ಷ 2024ರ ಕ್ಯಾಲೆಂಡರ್​ ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರು ಮಂಗಳವಾರ ಬಿಡುಗಡೆ ಮಾಡಿದರು.

    ಕ್ಯಾಲೆಂಡರ್​ ಬಿಡುಗಡೆ ಬಳಿಕ ಸಚಿವರು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸುವುದು, ಉತ್ತಮ ಆಡಿಟ್ ಅನುಸರಣೆಗಳು ಮತ್ತು ಉತ್ತಮ ಯೋಜನೆಗಳ ಬಿಡ್ಡಿಂಗ್​ಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಆರ್​ಐಡಿಎಲ್​ ತಾಂತ್ರಿಕವಾಗಿ, ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ಉತ್ತಮ ಇಂಜಿನಿಯರಿಂಗ್ ಕಂಪನಿಯಾಗುವ ಸಾಮರ್ಥ್ಯವನ್ನು ತಲುಪಿದೆ ಎಂದು ಖಚಿತಪಡಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದರು.

    Minister Priyank Kharge

    ನರೇಗಾ ಭಾಗವಹಿಸುವಿಕೆ, ಸಾಮಾಜಿಕ ಲೆಕ್ಕಪರಿಶೋಧನೆ, ಕುಡಿಯುವ ನೀರಿಗಾಗಿ ಯೋಜನೆ, ಪಿಆರ್​ ಇಂಜಿನಿಯರಿಂಗ್ ಪ್ರಗತಿ, ಬಾಕಿ ಉಳಿದಿರುವ ಇಲಾಖೆ ವಿಚಾರಣೆಗಳು ಮತ್ತು ಕೂಸಿನ ಮನೆ ಸೇರಿದಂತೆ ಇತರ ಯೋಜನೆಗಳು ಮತ್ತು ಸಮಸ್ಯೆಗಳಿಗೆ ನಾವು ಗಡುವನ್ನು ನಿಗದಿಪಡಿಸಿದ್ದೇವೆ ಮತ್ತು ಪ್ರತಿ ತಿಂಗಳ 2ನೇ ತಾರೀಖಿನಂದು ನಾನು ಅದನ್ನು ಪರಿಶೀಲಿಸುತ್ತೇನೆ ಎಂದು ಸಚಿವರು ಎಕ್ಸ್​ ಖಾತೆಯ ಮೂಲಕ ತಿಳಿಸಿದ್ದಾರೆ.

    ಕ್ಯಾಲೆಂಡ್​ರ್​ ಬಿಡುಗಡೆ ವೇಳೆ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹದೇವನ್, ಗ್ರಾಮೀಣಾಭಿವೃದ್ಧಿ ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಅಂಜುಮ್ ಪರ್ವೇಜ಼್, ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಪವನ್ ಕುಮಾರ್ ಮಾಲಪಾಟಿ, ಪಂಚಾಯತ್ ರಾಜ್ ಆಯುಕ್ತರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕರಾದ ನಾಗೇಂದ್ರ ಪ್ರಸಾದ್ ಮತ್ತು ಇನ್ನಿತರ ಅಧಿಕಾರಿಗಳೂ, ಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    “ಸತ್ಯ ಮೇಲುಗೈ ಸಾಧಿಸಿದೆ”: ಹಿಂಡನ್‌ಬರ್ಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ತೀರ್ಪು ಸ್ವಾಗತಿಸಿದ ಗೌತಮ್ ಅದಾನಿ

    ಅಮೆರಿಕದಲ್ಲಿ ಭಾರತೀಯ ಕುಟುಂಬ ಸಾವು ಪ್ರಕರಣ: ಪತ್ನಿ, ಮಗಳನ್ನು ಕೊಂದು ರಾಕೇಶ್ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts