More

    ವಿಧಾನಸಭೆಯ ಕ್ಯಾಂಟೀನ್​ನಲ್ಲಿ ಕಿತ್ತಾಡಿಕೊಂಡು ಹೊಡೆದಾಟಕ್ಕೆ ಮುಂದಾದ ಶಾಸಕ-ಸಚಿವ!

    ಬೆಂಗಳೂರು: ರಾಜ್ಯದ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆ ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಕಡೂರು ಶಾಸಕ ಮತ್ತು ತೋಟಗಾರಿಕೆ ಸಚಿವ ನಾರಾಯಣ್​ಗೌಡ ವಿಧಾನಸಭೆಯ ಮೊಗಸಾಲೆ ಮುಂಭಾಗವೇ ಕಿತ್ತಾಡಿಕೊಂಡಿದ್ದಾರೆ.

    ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಇಬ್ಬರೂ ಕ್ಯಾಂಟೀನ್​ಲ್ಲಿದ್ದ ಕುರ್ಚಿಗಳನ್ನು ಎಲೆದಾಡಿ ಪರಸ್ಪರ ಕೂಗಾಡಿಕೊಂಡರು. ಒಂದು ಹಂತದಲ್ಲಿ ‌ಕೈ-ಕೈ ಮಿಲಾಯಿಸೋ ಮಟ್ಟಕ್ಕೂ ಗಲಾಟೆ ಹೋಗಿತ್ತು. ಮಧ್ಯಪ್ರವೇಶಿಸಿದ ಜೆಡಿಎಸ್​ ಶಾಸಕ ಅನ್ನದಾನಿ, ಸಚಿವ ಸಿ.ಟಿ. ರವಿ ಮತ್ತಿತರರು ಸಮಾಧಾನ ಮಾಡಿದರು. ಇದನ್ನೂ ಓದಿರಿ  ವಿಧಾನಮಂಡಲ ಕಲಾಪ ಆರಂಭ, 60ಕ್ಕೂ ಹೆಚ್ಚು ಶಾಸಕರು ಗೈರು?

    ಟ್ರಾನ್ಸ್‌ಫರ್ ಫೈಲ್​ಗೆ ಸಿಎಂ ಬಳಿ ಸಹಿ ಮಾಡಿಸಿ ಬೆಳ್ಳಿ ಪ್ರಕಾಶ್ ಕೊಟ್ಟಿದ್ದರು. ಆದರೆ ಯಾವುದೇ ಪ್ರಗತಿ ಕಂಡಿರಲಿಲ್ಲ. ಈ ಬಗ್ಗೆ ವಿಧಾನಸೌಧ ಕ್ಯಾಂಟೀನ್​ನಲ್ಲಿ ಕುಳಿತಿದ್ದ ನಾರಾಯಣ್​ಗೌಡರನ್ನು ಬೆಳ್ಳಿ ಪ್ರಕಾಶ್ ಕೇಳಿದರು. ಇದಕ್ಕುತ್ತರಿಸಿದ್ದ ಸಚಿವರು ‘ಈ ವಾರ’ ಎಂದರು. ‘ಈ ವಾರ ಅಂತಾ ಹೇಳಿಯೇ ನಾಲ್ಕೈದು ತಿಂಗಳಾಯ್ತು, ಬಹುಷಃ ಕರ್ನಾಟಕದಲ್ಲಿರುವ ನಾಲಾಯಕ್ ಶಾಸಕರು ನಾವೇ ಇರಬೇಕು. ಬೇರೆ ರಾಜ್ಯಗಳಲ್ಲಿ ಶಾಸಕರು ಹೇಳಿದ ಕೆಲಸ ಆಗುತ್ತದೆ. ನಮ್ಮಲ್ಲಿ ಆಗಲ್ಲ’ ಎಂದು ಬೆಳ್ಳಿ ಪ್ರಕಾಶ್ ಖಾರವಾಗಿಯೇ ನುಡಿದರು.

    ಆಗ ನಾಲಾಯಕ್ ಎಂದು ತನಗೆ ಹೇಳಿದ್ದೆಂದು ಭಾವಿಸಿದ ನಾರಾಯಣ್​ ಗೌಡ ಸಿಡಿಮಿಡಿಗೊಂಡರು. ‘ನನ್ನ ಕಚೇರಿಗೆ ಬಂದು ಮಾತನಾಡು‌’ ಎಂದ ನಾರಾಯಣ್ ಗೌಡಗೆ ‘ನಾನೇಕೆ ನಿನ್ನ ಕಚೇರಿಗೆ ಬರಲಿ. ಕ್ಷೇತ್ರದ ಕೆಲಸ ಮಾಡದ ನೀನು ಎಂತಹ ಸಚಿವ?’ ಎನ್ನುತ್ತ ಬೆಳ್ಳಿ ಪ್ರಕಾಶ್ ಕಿಡಿಕಾರಿದರು. ಈ ವೇಳೆ ಏಕವಚನದಲ್ಲೇ ಕೂಗಾಡಿಕೊಂಡು ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ಹೋದರು. ಅಷ್ಟರಲ್ಲಿ ಸ್ಥಳದಲ್ಲಿದ್ದವರು ಸಮಾಧಾನ ಪಡಿಸಿದರು.

    ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು… ಮಳೆಯಲ್ಲೇ ಬೃಹತ್​ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts