More

    ಶ್ರೀಶೈಲ ಗಲಾಟೆ ಪ್ರಕರಣ; ಕನ್ನಡಿಗರು ಕಾನೂನು ಕೈಗೆತ್ತಿಕೊಳ್ಳದಿರಲು ಸಚಿವ ನಿರಾಣಿ ಮನವಿ

    ಬಾಗಲಕೋಟೆ: ಸುಕ್ಷೇತ್ರ ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ, ಬಾಗಲಕೋಟೆ ಯುವಕನಿಗೆ ಚಾಕು ಇರಿತ ವಿಚಾರವಾಗಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ, ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ.

    ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಭಕ್ತರು ಶ್ರೀಶೈಲಕ್ಕೆ ಪ್ರತಿವರ್ಷ ಪಾದಯಾತ್ರೆ ಮಾಡ್ತಾರೆ. ಈ ಬಾರಿಯ ಭಕ್ತಾದಿಗಳ ಮೇಲಿನ ಹಲ್ಲೆ ನೋವು ತಂದಿದೆ. ಬೀಳಗಿಯ ಜಾನಮಟ್ಟಿಯ ಯುವಕ ಶ್ರೀಶೈಲ ಮೇಲಿನ ಚಾಕು ಇರಿತ ಘಟನೆ ತುಂಬಾ ನೋವು ತಂದಿದೆ.

    ಈ ಕುರಿತು ಕರ್ನೂಲ್ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಜತೆ ಮಾತನಾಡಿದ್ದೇನೆ. ಪರಿಸ್ಥಿತಿ ಬಗ್ಗೆ, ಘಟನೆ ಸವಿವರ ಕೇಳಿದ್ದೇನೆ. ಗಾಯಗೊಂಡವರಿಗೆ ಶ್ರೀಶೈಲದಲ್ಲಿ ಚಿಕಿತ್ಸೆ, ಇನ್ನಿತರ ವೈದ್ಯಕೀಯ ಚಿಕಿತ್ಸೆಗೆ ಸೂಚನೆ ನೀಡಿದ್ದೇನೆ. ಕನ್ನಡಿಗರ ಮೇಲಿನ ಹಲ್ಲೆ, ವಾಹನ ಜಖಂಗೊಳಿಸಿದ್ದು ಖಂಡನೀಯ. ಕನ್ನಡಿಗರು ಕಾನೂನು ಕೈಗೆತ್ತಿಕೊಳ್ಳದೆ ಶಾಂತಿಯಿಂದ ಇರಿ, ಸರ್ಕಾರ ಪರಿಸ್ಥಿತಿ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತದೆ ಎಂದು ಮನವಿ ಮಾಡಿದರು.

    ಪಿಎಂ ಭೇಟಿಯಾದ ಸಂಸದ ಮುನಿಸ್ವಾಮಿ; ಕೆಜಿಎಫ್, ಕ್ಲಾಕ್ ಟವರ್ ವಿಷಯ ಪ್ರಸ್ತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts