More

    ಸಮಸ್ಯೆ ಕುರಿತು ಸಚಿವರ ಬಳಿ ಧ್ವನಿ ಎತ್ತಿದ್ದಕ್ಕೆ ನೋಟಿಸ್​!

    ರಾಯಚೂರು: ಕಂಪನಿಯಲ್ಲಿನ ಅನ್ಯಾಯಗಳ ಕುರಿತು ಸಚಿವರನ್ನ ಪ್ರಶ್ನೆ ಮಾಡಿದ್ದ ಕಾರ್ಮಿಕರಿಗೆ ನೋಟಿಸ್​ ಜಾರಿ ಮಾಡಲಾಗಿದ್ದು, ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇ ತಪ್ಪಾಯ್ತಾ? ಎಂದು ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.

    ಫೆ.26ರಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ರಾಯಚೂರಿನ ಹಟ್ಟಿ ಚಿನ್ನದ ಕಂಪನಿಗೆ ಭೇಟಿ ನೀಡಿದ್ದರು. ಈ ವೇಳೆ ಸಚಿವರನ್ನು ಮುತ್ತಿಗೆ ಹಾಕಿದ ಕಾರ್ಮಿಕರು, ‘ನಾವು ಸತ್ತ ಮೇಲೆ ನಮ್ಮ ಕುಟುಂಬದವರು ಏನು ಮಾಡಬೇಕು? ಈ ಕಂಪನಿಯಲ್ಲಿ ಕೆಲಸ ಮಾಡುವಾಗ ಸತ್ತವರ ಕುಟುಂಬಸ್ಥರಿಗೆ ಕೆಲಸ ನೀಡಿಲ್ಲ. ಈ ರೀತಿ 60 ಜನ ಸಂತ್ರಸ್ತರಿದ್ದು, ಕಳೆದ ಮೂರು ವರ್ಷಗಳಿಂದ ಯಾರಿಗೂ ಕೆಲಸ ಕೊಟ್ಟಿಲ್ಲ. ನಾವು ಸತ್ತ ಮೇಲೆ ನಮ್ಮ ಕುಟುಂಬದವರು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದರು. ಅಲ್ಲದೇ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸಚಿವರಿಗೆ ಘೇರಾವ್ ಹಾಕಲು ಯತ್ನಿಸಿದ್ದರು. ಈ ವೇಳೆ ಕಾರ್ಮಿಕರು ಮತ್ತು ಅಧಿಕಾರಿಗಳ ನಡುವೆ-ವಾದ-ವಿವಾದ ನಡೆದಿತ್ತು. ಇದನ್ನೂ ಓದಿರಿ ಬಿಗ್​ಬಾಸ್​ ಶೋ ಆರಂಭದಲ್ಲೇ ಕೇಳಿಬಂತು ಅಪಸ್ವರ: ಕಲರ್ಸ್​ ಕನ್ನಡಕ್ಕೆ ಜನರಿಟ್ಟ ಬೇಡಿಕೆ ಏನು?

    ಸಮಸ್ಯೆ ಕುರಿತು ಸಚಿವರ ಬಳಿ ಧ್ವನಿ ಎತ್ತಿದ್ದಕ್ಕೆ ನೋಟಿಸ್​!ಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕು, ಜೊತೆಗೆ ಅನ್​ಫಿಟ್ ಆದರೆ ಅವರ ಕಟುಂಬಸ್ಥರಿಗೆ ಕೆಲಸ ಕೊಡಬೇಕು ಎಂದು ಆಗ್ರಹಿಸಿದ್ದ ಕಾರ್ಮಿಕರು, ಗಣಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂರಿದ್ದರು.

    ಇದೀಗ ಸಚಿವರು ಭೇಟಿ ನೀಡಿದ್ದ ವೇಳೆ ಗಣಿ ಆವರಣದಲ್ಲಿ ಗಲಾಟೆ ಮಾಡಲು ಮುಂದಾಗಿದ್ದಲ್ಲದೆ ಮಾಧ್ಯಮಗಳ ಮುಂದೆ ಮಾತನಾಡಿದ್ದೀರಿ ಎಂದು ಚಿನ್ನದ ಗಣಿ ತಾಂತ್ರಿಕ ವಿಭಾಗದ ಉದ್ಯೋಗಿ ಮಲ್ಲಪ್ಪ ಮತ್ತು ನಾಗಪ್ಪಗೆ ನೋಟಿಸ್‌ ನೀಡಿರುವ ಹಟ್ಟಿ ಚಿನ್ನದ ಗಣಿ ಕಂಪನಿಯ ಆಡಳಿತ ಮಂಡಳಿ, ಮೂರು ದಿನದೊಳಗೆ ನೋಟಿಸ್​ಗೆ ಉತ್ತರಿಸುವಂತೆ ಸೂಚಿಸಿದೆ.

    ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಕ್ಕೆ ಇದೆಂಥಾ ಶಿಕ್ಷೆ? ಎಂದು ನೋಟಿಸ್ ನೀಡಿದ್ದಕ್ಕೆ ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.

    ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ ಗ್ರಾಮಸ್ಥರು!

    ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

    ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts