More

    video/ ಕುಣಿಗಲ್​ ಶಾಸಕರ ಮೇಲೆ ಮಾಧುಸ್ವಾಮಿ ಕೆಂಗಣ್ಣು, ರಣರಂಗವಾಯ್ತು ಕೆಡಿಪಿ ಸಭೆ

    ತುಮಕೂರು: ಜಿಲ್ಲಾ ಕೇಂದ್ರದಲ್ಲಿ ಇಂದು(ಶುಕ್ರವಾರ) ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮತ್ತು ಕುಣಿಗಲ್​ ಶಾಸಕ ಡಾ.ರಂಗನಾಥ್ ನಡುವಿನ ವಾಕ್ಸಮರ ಮಿತಿಮೀರಿತ್ತು. ಏರುಧ್ವನಿಯಲ್ಲೇ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಇಡೀ ಸಭಾಂಗಣ ಮೂಕಪ್ರೇಕ್ಷಕವಾಗಿತ್ತು.

    ಕ್ಷೇತ್ರದ ಬಡ ಜನರಿಗೆ ಮನೆ ಕಟ್ಟಲು ಹಣ ಬಿಡುಗಡೆ ಮಾಡಿ ಎಂದ ಕುಣಿಗಲ್​ ಶಾಸಕ ಡಾ.ರಂಗನಾಥ್​ರನ್ನ ತರಾಟೆಗೆ ತೆಗೆದುಕೊಂಡ ಸಚಿವ ಮಾಧುಸ್ವಾಮಿ, ‘ರಂಗನಾಥ್, ಯುವರ್ ಫ್ರಾಡ್.. ಯುವರ್ ಕಮಿಟೆಡ್ ಫ್ರಾಡ್..’ ಎಂದರು.

    ಇದನ್ನೂ ಓದಿರಿ ಜುಟ್ಟನಹಳ್ಳಿ ಮಾರಮ್ಮನ ಹುಂಡಿ ಹಣ ಕದ್ದ ಪೂಜಾರಿಯನ್ನು ಅಟ್ಟಾಡಿಸಿದ ಬಸವ, ದೇವರ ಹಣ ವಾಪಸ್​!

    ರಣಾಂಗಣವಾಯ್ತು ಕೆಡಿಪಿ ಸಭೆ: ಕೆಡಿಪಿ ಸಭೆ ಆರಂಭವಾಗುತ್ತಿದ್ದಂತೆ ‘ಎಸ್ಸಿ-ಎಸ್ಟಿ ಸೇರಿದಂತೆ ಇತರ ವರ್ಗದ ಜನ್ರಿಗೆ ಮನೆ ಕಟ್ಟಲು ಹಣ ಕೊಟ್ಟಿಲ್ಲ. ಬಡವರು ಬೀದಿಗೆ ಬಂದಿದ್ದಾರೆ. ಕರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರದ ಬಳಿ ಹಣ ಇಲ್ಲ ಎಂದು ಒಪ್ಪಿಕೊಳ್ಳಿ.. ಸುಮ್ಮನೆ ಹಣ ಕೊಟ್ಟಿದ್ದೇವೆ ಎನ್ನಬೇಡಿ’ ಎಂದು ರಂಗನಾಥ್​ ಹೇಳುತ್ತಿದ್ದಂತೆ ಗರಂ ಆದ ಮಾಧುಸ್ವಾಮಿ, ‘ಕುಣಿಗಲ್​ನಲ್ಲಿ 38 ಮನೆಯನ್ನು ಫ್ರಾಡ್​ ಮಾಡ್ತಿದ್ದೀರಿ, ರಂಗನಾಥ್ ಯುವರ್ ಫ್ರಾಡ್.. ಯುವರ್ ಕಮಿಟೆಡ್ ಫ್ರಾಡ್..’ ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು.

    ಇದಕ್ಕೆ ಏರುಧ್ವನಿಯಲ್ಲೇ ಪ್ರತಿಕ್ರಿಯಿಸಿದ ಶಾಸಕರು,’ ಯುವರ್​ ಓನ್ಲೀ ಗ್ರೇಟ್​.. ಅಧಿಕಾರಿಗಳಿಗೆ ಹೇಳಿ ಆಕ್ಷನ್​ ತಗೋಳಿ, ನಾವೇನಾದ್ರು ಮೋಸ ಮಾಡಿದ್ರೆ ಪ್ಲೀಸ್​ ಟೇಕ್​ ಆಕ್ಷನ್..’ ಎಂದು ಆಗ್ರಹಿಸಿದರು.

    ‘ನೀವು ಫ್ರಾಡ್ ಮಾಡಿದ್ರಿಂದಲೇ ರಾಜ್ಯಾದ್ಯಂತ ಎರಡು ತಿಂಗಳು ಹಣ ರಿಲೀಸ್ ಮಾಡೋದು ವಿಳಂಬ ಆಯ್ತು. ನನ್ನತ್ರ ದಾಖಲೆ ಇದೆ. ನೀವು ಮನೆಗಳನ್ನ ಫ್ರಾಡ್​ ಮಾಡ್ತಿದ್ರೂ ಸರ್ಕಾರ ಹೇಗೆ ಹಣ ಕೊಡುತ್ತೆ..?’ ಎಂದು ಮಾಧುಸ್ವಾಮಿ ಜಾಡಿಸಿದರು. ‘ಅಕ್ರಮ ನಡೆದಿದ್ರೆ ಆಕ್ಷನ್​ ತಗೋಳಿ.. ತನಿಖೆ ಮಾಡ್ಸಿ’ ಎಂದು ಶಾಸಕರು ಸವಾಲು ಎಸೆದರು.

    ಸಚಿವ ಮಾಧುಸ್ವಾಮಿ v/s ಕುಣಿಗಲ್​ ಶಾಸಕ ಡಾ.ರಂಗನಾಥ್

    ಸಚಿವ ಮಾಧುಸ್ವಾಮಿ v/s ಕುಣಿಗಲ್​ ಶಾಸಕ ಡಾ.ರಂಗನಾಥ್ತುಮಕೂರು ಜಿಲ್ಲೆಯ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮತ್ತು ಕುಣಿಗಲ್​ ಶಾಸಕ ಡಾ.ರಂಗನಾಥ್ ನಡುವೆ ವಾಕ್ಸಮರ ನಡೆದಿದೆ. ಕ್ಷೇತ್ರದ ಬಡ ಜನರಿಗೆ ಮನೆ ಕಟ್ಟಲು ಹಣ ಬಿಡುಗಡೆ ಮಾಡಿ ಎಂದು ಕುಣಿಗಲ್​ ಶಾಸಕ ಡಾ.ರಂಗನಾಥ್​ಕೇಳುತ್ತಿದ್ದಂತೆ ಗರಂ ಆದ ಸಚಿವ ಮಾಧುಸ್ವಾಮಿ, 'ರಂಗನಾಥ್, ಯುವರ್ ಫ್ರಾಡ್.. ಯುವರ್ ಕಮಿಟೆಡ್ ಫ್ರಾಡ್..' ಎಂದು ತರಾಟೆಗೆ ತೆಗೆದುಕೊಂಡರು. 'ನಾವೇನಾದ್ರು ಮೋಸ ಮಾಡಿದ್ರೆ ಪ್ಲೀಸ್​ ಟೇಕ್​ ಆಕ್ಷನ್​… ತನಿಖೆ ಮಾಡ್ಸಿ' ಎಂದು ಶಾಸಕರು ಸವಾಲು ಎಸೆದರು. #Madhuswamy #Kunigal #Tumkur #DrRanganath

    Posted by Vijayavani on Friday, August 7, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts