More

    ಅಭಿವೃದ್ಧಿ ಕಾರ್ಯಗಳೇ ಮಾಧುಸ್ವಾಮಿ ಗೆಲುವಿಗೆ ಶ್ರೀರಕ್ಷೆ

    ಹುಳಿಯಾರು: ಸಚಿವ ಜೆ.ಸಿ.ಮಾಧುಸ್ವಾಮಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟು ಈ ಬಾರಿ ಚುನಾವಣೆ ಎದುರಿಸುತ್ತೇವೆ ಎಂದು ಮಾಧುಸ್ವಾಮಿ ಪುತ್ರ ಅಭಿಜ್ಞ ಮಾಧುಸ್ವಾಮಿ ಹೇಳಿದರು.

    ಹುಳಿಯಾರು ಪಪಂ ವ್ಯಾಪ್ತಿಯಲ್ಲಿ ಸೋಮವಾರ ಮನೆಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.
    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ್ದ ಬಹುತೇಕ ಭರವಸೆಗಳನ್ನು ನಮ್ಮ ತಂದೆ ಈಡೇರಿಸಿದ್ದಾರೆ. ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಸಿ.ಸಿ.ರಸ್ತೆಗಳು, ರೈತರ ಅನುಕೂಲಕ್ಕಾಗಿ ಕೆರೆಗಳ ಭರ್ತಿ, ಚೆಕ್‌ಡ್ಯಾಮ್ ಸೇರಿ ಹತ್ತು ಹಲವು ಕಾರ್ಯಗಳನ್ನು ಮಾಡಲಾಗಿದೆ ಎಂದರು.

    ಚುನಾವಣಾ ಪ್ರಚಾರದ ಸಂದರ್ಭ ಜನರು ಊರಿನಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಮ್ಮೆ ಮಾಧುಸ್ವಾಮಿ ಅವರನ್ನು ಗೆಲ್ಲಿಸುವ ಭರವಸೆ ನೀಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾರ್ಯಕರ್ತರ ಹುಮ್ಮಸ್ಸು, ಮತದಾರರ ಪ್ರೀತಿ, ವಿಶ್ವಾಸ ಗಮನಿಸಿದರೆ ಕಳೆದ ಬಾರಿಯ ಅಂತರಕ್ಕೂ ಅಧಿಕ ಮತಗಳ ಅಂತರದಿಂದ ಮತ್ತೊಮ್ಮೆ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದರು.

    ಸದಸ್ಯರಾದ ಹೇಮಂತ್ ಕುಮಾರ್, ಬೀಬೀ ಫಾತಿಮಾ, ಚಂದ್ರಶೇಖರ್, ಬಡ್ಡಿಪುಟ್ಟರಾಜು, ಗೀತಾ ಅಶೋಕ್‌ಬಾಬು, ಬಳೆದಾಸಪ್ಪ, ಮುಖಂಡರಾದ ನಂದಿಹಳ್ಳಿ ಶಿವಣ್ಣ, ಪಟಾಕಿ ಶಿವಣ್ಣ, ಕರಡಿ ಜಯಣ್ಣ, ಅಶೋಕ್ ಬಾಬು, ರೇವಣ್ಣ ಇದ್ದರು.

    ಮಾಧುಸ್ವಾಮಿ ಸದನದಲ್ಲಿದ್ದರೆ ವಿಧಾನಸೌಧಕ್ಕೆ ಶೋಭೆ

    ಮಾಧುಸ್ವಾಮಿ ಅವರಂತ ಹುಟ್ಟು ಹೋರಾಟಗಾರ ಸದನದಲ್ಲಿದ್ದರೆ ವಿಧಾನಸೌಧಕ್ಕೆ ಶೋಭೆ. ಅವರನ್ನು ಕ್ಷೇತ್ರದ ಜನ ಮತ್ತೊಮ್ಮೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಬೇಕು ಎಂದು ಗ್ರಾಪಂ ಸದಸ್ಯ, ಲೇಖಕ ಕೆ.ಮರಿಯಪ್ಪ ಮನವಿ ಮಾಡಿದರು.

    ಹೊಯ್ಸಳಕಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ಮಾಧುಸ್ವಾಮಿ ಪರ ಮತಯಾಚನೆ ಮಾಡಿ ಮಾತನಾಡಿದರು.
    ಮಾಧುಸ್ವಾಮಿ ಅವರಲ್ಲಿರುವ ಅಪಾರ ಕಾನೂನು ಜ್ಞಾನದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಶಿವಲಿಂಗೇಗೌಡ ಸೇರಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಮಾಧುಸ್ವಾಮಿ ಚರ್ಚೆಗೆ ನಿಂತರೆ ವಿರೋಧ ಪಕ್ಷದವರು ಕಕ್ಕಾಬಿಕ್ಕಿಯಾಗುತ್ತಾರೆ. ರಾಜ್ಯದ ಪ್ರಗತಿಯ ದೃಷ್ಟಿಯಲ್ಲಿ ಅವರು ಮಂಡಿಸುವ ವಾದಕ್ಕೆ ಇಡೀ ರಾಜ್ಯದ ಜನ ಮಾರುಹೋಗುತ್ತಾರೆ. ತಾಲೂಕಿನ ಘನತೆ, ಗೌರವವನ್ನು ಎತ್ತಿಹಿಡಿಯುತ್ತಿರುವ ಮಾಧುಸ್ವಾಮಿ ಅವರ ಗೆಲುವು ಕ್ಷೇತ್ರದ ಮತದಾರರ ಗೆಲುವು ಎಂದರು.

    ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡಿದಿದ್ದಾರೆ. ಹಿಂದು-ಮುಸ್ಲಿಂ ಬೇಧಭಾವ ಮಾಡದೆ, ಒಂದೇ ತಾಯಿ ಮಕ್ಕಳೆಂದು ಭಾವಿಸಿ, ಅಧಿಕಾರ ನಡೆಸುತ್ತಿದ್ದಾರೆ. ಪ್ರತಿಯೊಂದು ಇಲಾಖೆಯಿಂದಲೂ ಅನುದಾನ ತಂದು, ಕ್ಷೇತ್ರದಲ್ಲಿ ಹಣದ ಹೊಳೆ ಹರಿಸಿ, ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಬಹುಮುಖ್ಯವಾಗಿ ತಾಲೂಕಿನ ನೀರಿನ ಸಮಸ್ಯೆ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ ಹೇಮಾವತಿ ನದಿ ನೀರು ಹರಿಸಿ, ಅಂತರ್ಜಲ ವೃದ್ಧಿ ಮಾಡಿದ್ದಾರೆ. ಅಂತಹ ವ್ಯಕ್ತಿಯನ್ನು ಗೆಲ್ಲಿಸಿ, ಅಭಿವೃದ್ಧಿ ಮುಂದುವರಿಸಿ ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts