More

    ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುವಂತೆ ಸಚಿವ ಮಾಧುಸ್ವಾಮಿ ಪತ್ನಿ ಮನವಿ

    ಹುಳಿಯಾರು: ದೇಶದ ಸುರಕ್ಷತೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸುವಂತೆ ಸಚಿವ ಮಾಧುಸ್ವಾಮಿ ಅವರ ಪತ್ನಿ ತ್ರಿವೇಣಿ ಮಾಧುಸ್ವಾಮಿ ಮನವಿ ಮಾಡಿದರು.

    ಹುಳಿಯಾರು ಹೋಬಳಿಯ ಪೋಚಕಟ್ಟೆಯಲ್ಲಿ ಜೆ.ಸಿ.ಮಾಧುಸ್ವಾಮಿ ಪರ ಮತಯಾಚನೆ ಮಾಡಿ ಮಾತನಾಡಿದರು.
    ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ, ದೇಶದ ಸುರಕ್ಷತೆಗೆ ಆದ್ಯತೆ, ಜನಧನ ಯೋಜನೆ, ಕಿಸಾನ್ ಸಮ್ಮಾನ್, ತ್ರಿವಳಿ ತಲಾಖ್ ರದ್ದತಿ ಸೇರಿ ಹೀಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಡಬಲ್ ಇಂಜಿನ್ ಸರ್ಕಾರ ಜನಪರವಾದ ಐತಿಹಾಸಿಕ ಯೋಜನೆಗಳನ್ನು ನೀಡುತ್ತಿದೆ ಎಂದರು.

    ಮಾಧುಸ್ವಾಮಿ ನೀರಾವರಿ, ವಿದ್ಯುತ್, ರಸ್ತೆ ಸೇರಿ ಅನೇಕ ಅಗತ್ಯ ಕೆಲಸಗಳನ್ನು ಜನರ ನಿರೀಕ್ಷೆಗೂ ಮೀರಿ ತಮ್ಮ ಆಡಳಿತಾವಧಿಯಲ್ಲಿ ಮಾಡಿದ್ದಾರೆ. ಅಲ್ಲದೆ ಸಚಿವರಾಗಿದ್ದರೂ ಬೆಂಗಳೂರಿನಲ್ಲಿ ನೆಲೆಸದೆ ಹುಟ್ಟೂರು ಜೆ.ಸಿ.ಪುರದಲ್ಲಿ ಇದ್ದು, ನಿತ್ಯ ಜನರ ಕಷ್ಟ-ಸುಖಗಳನ್ನು ಆಲಿಸಿದ್ದಾರೆ. ಹೀಗಾಗಿ ಜನತೆ ಜನಪರ ಒಲವಿನ ಮಾಧುಸ್ವಾಮಿ ಅವರ ಗೆಲುವಿಗೆ ಆಶೀರ್ವಾದ ಮಾಡಬೇಕು ಎಂದರು.

    ಕೆಂಕೆರೆ ಪಂಚಾಯಿತಿಗೆ ಭರಪೂರ ಕೊಡುಗೆ

    ಚಿಕ್ಕನಾಯಕನಹಳ್ಳಿ ತಾಲೂಕಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿರುವ ಸಚಿವ ಮಾಧುಸ್ವಾಮಿ ಅವರು ಕೆಂಕೆರೆ ಪಂಚಾಯಿತಿಗೂ ಭರಪೂರ ಕೊಡುಗೆ ನೀಡಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ತಿಳಿಸಿದರು. ಹುಳಿಯಾರು ಹೋಬಳಿಯ ಕುರಿಹಟ್ಟಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರ ಮತಯಾಚನೆ ಮಾಡಿ ಮಾತನಾಡಿದರು.

    ಕೆಂಕೆರೆ ಪಂಚಾಯಿತಿ ರೈತರ ಬಹುದಿನದ ಬೇಡಿಕೆಯಾದ ಪಶು ಆಸ್ಪತ್ರೆ, 2 ಅಂಗನವಾಡಿ ಕಟ್ಟಡ, ಎಸ್‌ಸಿ ಕಾಲನಿಗೆ 60 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ, ಜನಾಂಗದ 8 ಹಾಗೂ ಎಸ್‌ಟಿ ಜನಾಂಗದ 6 ಮಂದಿಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ, ಊರಿನಿಂದ ಬಸ್ ನಿಲ್ದಾಣದವರೆಗೆ ರಸ್ತೆ, ಹೊನ್ನಯ್ಯನಪಾಳ್ಯ ರಸ್ತೆಗೆ 80 ಲಕ್ಷ ರೂ., ಬರದಲೇಪಾಳ್ಯ ರಸ್ತೆಗೆ 1 ಕೋಟಿರೂ., ಕೆಂಕೆರೆ ಗೊಲ್ಲರಹಟ್ಟಿಗೆ 45 ಲಕ್ಷ ರೂ.ವೆಚ್ಚದ ರಸ್ತೆ, 1 ಕೋಟಿ ರೂ. ವೆಚ್ಚದಲ್ಲಿ ಚನ್ನಕಟ್ಟಯ್ಯನಗುಡ್ಲು ಪಿಕಪ್, ಸಬ್ಸಿಡಿ ಲೋನ್, ಗೌಡಗೆರೆ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ., ಸುಬೇದಾರ್‌ಪಾಳ್ಯ ರಸ್ತೆಗೆ 60 ಲಕ್ಷ ರೂ., ತಮ್ಮಡಿಹಳ್ಳಿ ಬರದಲೇಪಾಳ್ಯ ರಸ್ತೆಗೆ 1.5 ಕೋಟಿ ರೂ., ಮನೆ ಮನೆ ನಲ್ಲಿ ಯೋಜನೆ ಜಾರಿ ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.

    ತಾಪಂ ಮಾಜಿ ಅಧ್ಯಕ್ಷ ವಸಂತಯ್ಯ, ಯಗಚೀಹಳ್ಳಿ ನಾಗಣ್ಣ, ಕಂಪನಹಳ್ಳಿ ಪ್ರಕಾಶ, ರವಿ, ಗಾಣಧಾಳು ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts