More

    ಶಕ್ತಿಯುತ ಸಮಾಜಕ್ಕೆ ಪೌಷ್ಟಿಕ ಆಹಾರ ಪೂರಕ : ಸಚಿವ ಮಾಧುಸ್ವಾಮಿ

    ತುಮಕೂರು: ಸದೃಢ ದೇಶಕ್ಕೆ ಆರೋಗ್ಯವಂತ ಮಾನವ ಸಂಪನ್ಮೂಲ ಅಗತ್ಯವಾಗಿದ್ದು, ತಾಯಂದಿರು ಆರೋಗ್ಯವಾಗಿದ್ದರಷ್ಟೇ ಇದು ಸಾಧ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

    ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ ಆಯೋಜಿಸಿದ್ದ ‘ವಿಶ್ವ ಮಹಿಳಾ ದಿನಾಚರಣೆ ಹಾಗೂ ಪೋಷಣ್ ಅಭಿಯಾನ್ ಪಕ್ವಾಡ’ ಉದ್ಘಾಟಿಸಿ ಮಾತನಾಡಿದರು.

    ತಾಯಂದಿರು ಪೌಷ್ಟಿಕ ಆಹಾರ ಸೇವಿಸಿದರೆ ಮಕ್ಕಳಲ್ಲಿಯೂ ಸಬಲತೆ, ಸಮರ್ಥತೆ ತಾನಾಗಿಯೇ ಬರುತ್ತದೆ, ಮಹಿಳೆ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರದ ಕಾರ್ಯಕ್ರಮಗಳು ನೈಜವಾಗಿ ತಲುಪಬೇಕು ಎಂದರು.

    ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯವಂತ, ಶಕ್ತಿಯುತ ಸಮಾಜ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನ್ಯಾಷನಲ್ ನ್ಯೂಟ್ರಿಷನ್ ಮಿಷನ್ ಯೋಜನೆ ಜಾರಿಗೆ ತಂದಿದೆ, ಜಿಲ್ಲೆಯಲ್ಲಿ ಪೋಷಣ್ ಅಭಿಯಾನ್ ಪಕ್ವಾಡ ಕಾರ್ಯಕ್ರಮ ಇಂದಿನಿಂದಲೇ ಚಾಲ್ತಿಯಾಗಲಿದೆ ಎಂದರು. 12ನೇ ಶತಮಾನದಲ್ಲಿಯೇ ಬಸವಣ್ಣನವರು ಸ್ತ್ರೀ ಸಮಾನತೆ ನೀಡಿ ಶಕ್ತಿ ಮತ್ತು ಅವಕಾಶ ನೀಡಿದ್ದರಿಂದ ವಚನಗಾರ್ತಿಯರು ಹುಟ್ಟಿಕೊಂಡರು ಎಲ್ಲ ಮಹಿಳೆಗೂ ಸಾಧಿಸುವ ಶಕ್ತಿ ಇರುತ್ತದೆ ಅವರಿಗೆ ಅವಕಾಶ ನೀಡಬೇಕು ಎಂದರು.

    ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಮಹಿಳೆಯರ ಆರೋಗ್ಯ, ಪೌಷ್ಟಿಕತೆ ಹಾಗೂ ಸಬಲೀಕರಣಕ್ಕೆ ಸರ್ಕಾರ ಅನೇಕ ಯೋಜನೆ ತಂದಿದೆ. ಉಜ್ವಲ ಅನಿಲ ಯೋಜನೆಯಿಂದ ದೇಶದ 8 ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು. ತುಮಕೂರು ವಿವಿ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಉಪನ್ಯಾಸಕಿ ಡಾ.ಎಂ.ಸುಜಾತಾ ವಿಶೇಷ ಉಪನ್ಯಾಸ ನೀಡಿದರು. ಮೇಯರ್ ಫರೀದಾ ಬೇಗಂ, ಜಿಪಂ ಉಪಾಧ್ಯಕ್ಷೆ ಶಾರದಾ, ಉಪಮೇಯರ್ ಶಶಿಕಲಾ, ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್. ನಟರಾಜ್ ಮತ್ತಿತರರು ಇದ್ದರು.

    ಈಚನೂರು ಮಹಿಳಾ ಸಂಘಕ್ಕೆ ಪ್ರಶಸ್ತಿ!: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡು ರಾಜ್ಯಮಟ್ಟದ ಅತ್ಯುತ್ತಮ ಸ್ತೀಶಕ್ತಿ ಗುಂಪು’ ಪ್ರಶಸ್ತಿಗೆ ಭಾಜನವಾದ ತಿಪಟೂರು ತಾಲೂಕು ಈಚನೂರು ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಸದಸ್ಯರನ್ನು ಸನ್ಮಾನಿಸಲಾಯಿತು.

     

    ಸ್ವಾತಂತ್ರೃ ನಂತರದಲ್ಲಿ ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕೆಂದು ರಾಜಕೀಯ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಗೆ ಮೀಸಲಾತಿ ಕಲ್ಪಿಸಲಾಗಿದೆ ಎಂದರಲ್ಲದೇ, ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದ್ದು, ಇಂತಹ ಮಹಿಳೆಯರಿಗಾಗಿಯೇ ಪೋಷಣ್ ಅಭಿಯಾನ್ ಜಾರಿಯಾಗಿದೆ.

    ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts