More

    ಹಳ್ಳಿಗಳಲ್ಲಿ ಕರೊನಾ ಬಂದ್ದದ್ದೇ ಆ ಒಂದು ಕಾರಣಕ್ಕೆ; ಸಚಿವ ಮಾಧುಸ್ವಾಮಿ

    ತುಮಕೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಜಿಲ್ಲೆಯಲ್ಲೂ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಗ್ರಾಮೀಣ ಭಾಗಕ್ಕೂ ಸೋಂಕಿನ ವ್ಯಾಪ್ತಿ ವಿಸ್ತರಿಸಿಕೊಂಡಿದ್ದು, ಇದಕ್ಕೆಲ್ಲ ಕಾರಣ ಬೆಂಗಳೂರಿನಿಂದ ಬಂದವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು.

    ತುಮಕೂರು ಎಸ್ಪಿ ಕಚೇರಿಯಲ್ಲಿ ಪಿಪಿಇ ಕಿಟ್ ವಿತರಣೆ ವೇಳೆ ಮಾತನಾಡಿದ ಸಚಿವರು, ಕರೊನಾ ನಿಯಂತ್ರಣ ಕಾರ್ಯದಲ್ಲಿ ನಮಗೆ ತುಂಬಾ ತಾಪತ್ರಯ ಆಗಿರೋದು ಬೆಂಗಳೂರಿನಿಂದ ಬಂದವರು. ಅವರನ್ನು ಹಳ್ಳಿಗಳಿಗೆ ಬಿಟ್ಟುಕೊಳ್ಳದಿದ್ದರೆ, ಹಳ್ಳಿಗಳಲ್ಲಿ ಕರೊನಾ ಕೇಸ್ ಇರುತ್ತಿರಲಿಲ್ಲ. ಬೆಂಗಳೂರಿಂದ ಬಂದವರ ಬಗ್ಗೆ ನಮಗೆ ಮಾಹಿತಿ ನೀಡಲಿಲ್ಲ. ಪಾಸಿಟಿವ್ ಬಂದಾಗ ಊರಿಗೆ ಊರೇ ಸೀಲ್​ಡೌನ್ ಮಾಡಬೇಕಾಯಿತು ಎಂದ ಸಚಿವರು, ಬೆಂಗಳೂರಿನಿಂದ ಬಂದು ಮಾಹಿತಿ ನೀಡದಿದ್ದರೆ ಅಂತಹವರ ಮೇಲೆ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.

    ಇದನ್ನೂ ಓದಿರಿ 5 ಲಕ್ಷ ಆ್ಯಂಟಿಜನ್ ಟೆಸ್ಟ್ ಕಿಟ್ ಖರೀದಿ, 30 ನಿಮಿಷದಲ್ಲಿ ಕೈಸೇರಲಿದೆ ಕರೊನಾ ಟೆಸ್ಟ್ ವರದಿ!

    ಕಂಟೈನ್ಮೆಂಟ್ ಝೋನ್​ಗಳನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಈ ಪ್ರದೇಶಗಳಲ್ಲಿ ಜನರು ಸುಖಾಸುಮ್ಮನೆ ಹೊರಗೆ ಬರುವಂತಿಲ್ಲ. ಇನ್ನು ಬೆಂಗಳೂರಿಂದ ಬಂದವರು ಮೊದಲ ಎರಡು ದಿನ ಯಾರ ಸಂಪರ್ಕಕ್ಕೆ ಬರಬಾರದು. ಊರಿನ ಹೊರಗೆ ಅಥವಾ ಬೇರೆಲ್ಲಾದ್ರೂ ಇರಬೇಕು‌. ಅವರಿಗೆ ಕರೊನಾ ಟೆಸ್ಟ್ ಮಾಡಿ 48 ಗಂಟೆ ಒಳಗೆ ರಿಸಲ್ಟ್ ಕೊಡುತ್ತಿದ್ದೇವೆ. ವರದಿ ನೆಗೆಟಿವ್ ಬಂದ್ರೆ ಮನೆಗೆ ಹೋಗಲಿ, ಪಾಸಿಟಿವ್ ಬಂದ್ರೆ ಆಸ್ಪತ್ರೆಗೆ ದಾಖಲಿಸುತ್ತೇವೆ. ಈ ವೇಳೆ ಅತಿಯಾಗಿ ವರ್ತಿಸಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

    ‘ಅಪ್ಪ.. ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?’ ಎಂದ ಮಗ ಬಾರದ ಲೋಕಕ್ಕೆ ಸೇರಿಯೇಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts