More

    4 ಸಾವಿರ ಕೋಟಿ ರೂ.ಅನುದಾನ ನಿರೀಕ್ಷೆ: ಸಚಿವ ಮಾಧುಸ್ವಾಮಿ

    ಮೂಡುಬಿದಿರೆ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ 1400 ಎಕರೆ ಜಾಗದಲ್ಲಿ ವೆಂಟೆಡ್ ಡ್ಯಾಂ ನಿರ್ಮಿಸಲು ಸರ್ವೇ ಮಾಡಲಾಗಿದ್ದು, 4 ಸಾವಿರ ಕೋಟಿ ರೂ. ಅನುದಾನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅನುದಾನ ಲಭಿಸಿದ ಕೂಡಲೇ ವೆಂಟೆಡ್ ಡ್ಯಾಂ ನಿರ್ಮಾಣ ಮಾಡಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದರು.

    ನಿಡ್ಡೋಡಿ ಗ್ರಾಮದ ಬ್ರಹ್ಮರಸ್ಥಾನಕಟ್ಟ ಪ್ರದೇಶದಲ್ಲಿ ನಂದಿನಿ ನದಿಗೆ ಅಡಲಾಗಿ ನಿರ್ಮಿಸಲಾದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಎರಡು ಕೋಟಿ ರೂ. ವೆಚ್ಚದ ಕಿಂಡಿ ಅಣೆಕಟ್ಟು ವೀಕ್ಷಿಸಿ ಮಾತನಾಡಿದರು.
    ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಿರುವುದರಿಂದ ಕಿಂಡಿ ಅಣೆಕಟ್ಟುಗಳ ನಿರ್ಮಾಣಗೊಳಿಸಿ ಕೃಷಿ ಪೂರಕ ನೀರಿನ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುವಂತೆ ಅನುದಾನ ಒದಗಿಸಿಕೊಡುವಂತೆ ಸಚಿವರಲ್ಲಿ ಕೋರಿದರು.

    ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಎಡಬ್ಲುೃಇ ವಿಷ್ಣು ಕಾಮತ್, ಇಂಜಿನಿಯರ್ ರಾಕೇಶ್, ಗುತ್ತಿಗೆದಾರ ಗೋಕುಲ್‌ದಾಸ್ ಶೆಟ್ಟಿ, ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ, ಸದಸ್ಯರಾದ ಕೇಶವ ಪಂಜಾಡಿ, ವಸಂತ ನಾಯ್ಕ, ಗಿರೀಶ್ ಪೂಜಾರಿ, ಆಶಾಲತಾ ಶೆಟ್ಟಿ, ವಿದ್ಯಾಲತಾ, ಪ್ರೇಮ ಶೆಟ್ಟಿ, ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಗ್ರಾಮಸ್ಥ ನಾಗರಾಜ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts