More

    ಮಹಿಳೆಯರ ಬದ್ಧತೆಯಿಂದ ಸಮಾಜದ ಏಳಿಗೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​

    ಬೆಂಗಳೂರು: ಪ್ರತಿ ಕ್ಷೇತ್ರದಲ್ಲೂ ಸಾಧನೆ ಮೂಲಕ ಸಾಮರ್ಥ್ಯ ನಿರೂಪಿಸುತ್ತಿರುವ ಸ್ತ್ರೀಯರು ನಿಸ್ವಾರ್ಥದಿಂದ ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ತಿಳಿಸಿದರು,

    ಕಬ್ಬನ್​ಪಾರ್ಕ್​ನ ಜವಾಹರ ಬಾಲ ಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಸ್ತ್ರೀಯರ ಸ್ಥಾನಮಾನ ಬದಲಾಗುತ್ತಿದೆ. ಆಕೆ ಯಾವುದಾದರೊಂದು ಕ್ಷೇತ್ರದಲ್ಲಿ ಇಲ್ಲ ಎಂದರೆ, ಆ ಕ್ಷೇತ್ರ ಇನ್ನೂ ಅಭಿವೃದ್ಧಿ ಹೊಂದಿಲ್ಲ ಎಂದರ್ಥ. ಪ್ರತಿಕ್ಷಣದ ಹೋರಾಟದ ನಡುವೆಯೇ ಪರಿಶ್ರಮದಿಂದ ದುಡಿಯುವ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳುತ್ತಿದ್ದು, ಶಿಕ್ಷಣದ ಕಾರಣದಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತಿದೆ ಎಂದರು.

    ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ

    ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ 6 ಸಂಸ್ಥೆಗಳಿಗೆ, 20 ಸಾಧಕಿಯರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಗಲಕೋಟೆಯ ವಚನ ವೈಭವ ಮಹಿಳಾ ಜಾನಪದ ಸಾಂಸತಿಕ ಕಲಾ ಸಂಘ, ಧಾರವಾಡದ ಕಲ್ಕಿ ಎಜುಕೇಷನಲ್​ ಆ್ಯಂಡ್​ ಡೆವಲಪ್​ಮೆಂಟ್​ ಸೊಸೈಟಿ, ಬೀದರ್​ನ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ದಕ್ಷಿಣ ಕನ್ನಡದ ಮಹಿಳಾ ಮಂಡಲ, ಶಿವಮೊಗ್ಗದ ದಿ ಶಿವಮೊಗ್ಗ ಮಲ್ಟಿ ಪರ್ಪಸ್​ ಸೋಶಿಯಲ್​ ಸರ್ವೀಸ್​ ಸೊಸೈಟಿ, ಧಾರವಾಡದ ಹ್ಯಾಪಿ ಹೋಮ್​ ಇಂಡಿಯಾ ಟ್ರಸ್ಟ್​ಗಳು 50 ಸಾವಿರ ರೂ.ನಗದು ಒಳಗೊಂಡ ಪ್ರಶಸ್ತಿಗೆ ಭಾಜನವಾಗಿವೆ.

    ಪ್ರಶಸ್ತಿ ಪಡೆದ ಸಾಧಕಿಯರು

    ಮಹಿಳಾ ಅಭಿವೃದ್ಧಿ: ಬಿ.ಮಂಜುಳಾ ಇಟಗಿ, ಪಿ.ಆಶಾಲತಾ, ದೇವಿ ಸತೀಶ, ದೀಪಾ ಶಿವಕುಮಾರ, ನಾಗವ್ವಾ ಸಿದ್ದಪ್ಪಾ, ಪಿ.ಜಿ.ಅನಿತಾಲಕ್ಷ್ಮಿ, ನಿರ್ಮಾ ಡಿಸೋಜಾ, ಸ್ನೇಹಾ ಜಾಧವ್​, ವೀಣಾ ಬಿರಾದಾರ.
    ಕಲೆ: ಎಂ.ಶಾರದಾ, ಸರಸ್ವತಿ, ಎಸ್​. ಸಿಂಧು, ವೀಣಾ ಉಮೇಶ್​, ಎಂ.ಸವಿತಾ ಕುಲಕರ್ಣಿ.
    ಕ್ರೀಡೆ: ರುಮಾನ ಕೌಸರ್​, ಸಾಯೀಶ್ವರಿ ಗಂಗಾರಾಮ
    ಶಿಕ್ಷಣ: ಕಾವೇರಿ ಶಿವಶಂಕರಯ್ಯ
    ಸಾಹಿತ್ಯ: ಶುಭಾ, ಶಕುಂತಲಾ ಹಿರೇಮಠ, ಡಾ.ವಿ.ವಿ. ಹಿರೇಮಠ. (ಪ್ರಶಸ್ತಿಯು 25 ಸಾವಿರ ರೂ. ನಗದು ಒಳಗೊಂಡಿದೆ)

    ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 3 ಸ್ತ್ರೀ ಶಕ್ತಿ ಗುಂಪು, 3 ಸ್ತ್ರೀ&ಶಕ್ತಿ ಒಕ್ಕೂಟ ಹಾಗೂ ವಿಭಾಗೀಯ ಮಟ್ಟದಲ್ಲಿ 4 ಸ್ತ್ರೀ ಶಕ್ತಿ ಗುಂಪುಗಳಿಗೆ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆಗಳ ಸಾಧನೆ ತಿಳಿಸುವ ‘ಅಂತರಾಳ’ ಕಿರುಹೊತ್ತಗೆ ಬಿಡುಗಡೆ ಮಾಡಲಾಯಿತು.

    ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಕಾಂಗ್ರೆಸ್​ ಮುಖಂಡ ಉದಯ ಕುಮಾರ್​ ಶೆಟ್ಟಿ, ಇಲಾಖೆಯ ಕಾರ್ಯದರ್ಶಿ ಡಾ.ಜಿ.ಎಸ್​. ಪ್ರಕಾಶ್​, ಬಾಲ ಭವನದ ಕಾರ್ಯದರ್ಶಿ ಬಿ.ಎಚ್​.ನಿಶ್ಚಲ್​, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಚ್​. ಪುಷ್ಪಲತಾ, ಡಾ.ಮೈತ್ರಿ ಮತ್ತಿತರರಿದ್ದರು.

    ಮಹಿಳೆ ನಾಲ್ಕು ಗೋಡೆಗಳ ಮಧ್ಯೆ ಇರಬೇಕೆಂಬ ಪರಿಸ್ಥಿತಿ ಈಗಿಲ್ಲ. ಶಿಕ್ಷಣದಿಂದಾಗಿ ಬದಲಾವಣೆ ಸಾಧ್ಯವಾಗಿದೆ. ರಾಜಕೀಯ, ಉದ್ಯಮ, ಸರ್ಕಾರಿ ನೌಕರಿ, ಕಲೆ ಸೇರಿ ವಿವಿಧ ರಂಗಗಳಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದಾರೆ.
    -ಪದ್ಮಾವತಿ, ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts