More

    ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

    ಬಸವಕಲ್ಯಾಣ: ಇತಿಹಾಸ ಸಾರಿ ಹೇಳುವುದರ ಜತೆಗೆ ನಮ್ಮ ಸಂಸ್ಕೃತಿ, ಪರಂಪರೆಯ ದ್ಯೋತಕವಾಗಿರುವ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

    ಸೋಮವಾರ ಸಂಜೆ ಅನುಭವ ಮಂಟಪದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ರಾಜ್ಯದಲ್ಲಿರುವ ೨೫ ಸಾವಿರ ಸ್ಮಾರಕಗಳ ಸಂರಕ್ಷಣೆ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಜನರ ಪಾಲ್ಗೊಳ್ಳುವಿಕೆ ಜತೆಗೆ ಉಳ್ಳವರ ಕೈಜೋಡಿಸುವಿಕೆಯಿಂದ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸ್ಮಾರಕಗಳ ದರ್ಶನ ಮತ್ತು ಸಂರಕ್ಷಣೆಗಾಗಿ ವಿಶೇಷ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.

    ಬಸವಣ್ಣನ ತಪೋಭೂಮಿಯಿಂದ ಈ ಪ್ರವಾಸ ಆರಂಭಿಸಿದ್ದೇನೆ. ಬಸವಕಲ್ಯಾಣ ಕೋಟೆಯಲ್ಲಿ ಲೇಜರ್ ಶೋ ಹಾಗೂ ನೂತನ ಅನುಭವ ಮಂಟಪ ಕಾಮಗಾರಿ ಕುರಿತು ಸಚಿವ ಈಶ್ವರ ಖಂಡ್ರೆ ತೋರಿದ ಆಸಕ್ತಿ, ಛಲದಿಂದ ಮಾಡುವ ಕೆಲಸಕ್ಕೆ ನಾನು ಅವರನ್ನು ಅಭಿನಂದಿಸುವೆ ಎಂದು ಹೇಳಿದರು.
    ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.

    ಶ್ರೀ ಗುರುಬಸವ ಪಟ್ಟದ್ದೇವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಶರಣು ಸಲಗರ, ಮಾಜಿ ಎಂಎಲ್ಸಿ ವಿಜಯಸಿಂಗ್, ಡಿಸಿ ಡಾ.ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಎಸಿ ಪ್ರಕಾಶ ಕುದರಿ, ಬಿಕೆಡಿಬಿ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರರಾದ ಶಾಂತಗೌಡ ಬಿರಾದಾರ, ಶಿವಾನಂದ ಮೇತ್ರೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್, ನಗರ ಘಟಕದ ಅಧ್ಯಕ್ಷ ಮೀರ್ ಅಜರಲಿ ನವರಂಗ, ಶಿವರಾಜ ನರಶೆಟ್ಟೆ, ರಾಜಕುಮಾರ ಸಿರಗಾಪುರ, ಮೇಘರಾಜ ನಾಗರಾಳೆ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ, ರೈಸೋದ್ದಿನ್, ಮೀರ್ ಅಮಾನತ್ ಅಲಿ, ಪಪ್ಪು ಉದಾನೆ, ಜೈದೀಪ ತೆಲಂಗ ಇತರರಿದ್ದರು.

    ೩೦ ನಿಮಿಷ ಲೇಜರ್ ಶೋ ವೀಕ್ಷಣೆ: ಸಚಿವ ಎಚ್.ಕೆ ಪಾಟೀಲ್ ಐತಿಹಾಸಿಕ ಕೋಟೆಗೆ ಭೇಟಿ ನೀಡಿ ೧೨ನೇ ಶತಮಾನದ ಶರಣರ ಕ್ರಾಂತಿ ಕುರಿತು ೩೦ ನಿಮಿಷದ ಲೇಜರ್ ಶೋ ವೀಕ್ಷಿಸಿದರು. ನಂತರ ನೂತನ ಅನುಭವ ಮಂಟಪ ಕಾಮಗಾರಿ ಸ್ಥಳಕ್ಕೆ ತೆರಳಿ ವೀಕ್ಷಿಸಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜತೆಗಿದ್ದ ಸಚಿವ ಈಶ್ವರ ಖಂಡ್ರೆ ಅನುಭವ ಮಂಟಪದ ರೂಪುರೇಷೆ ಹಾಗೂ ಬಸವಕಲ್ಯಾಣದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಮಾಹಿತಿ ನೀಡಿದರು. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಶ್ರೀ ಗುರುಬಸವ ಪಟ್ಟದ್ದೇವರು ಸಚಿವರನ್ನು ಸನ್ಮಾನಿಸಿ ಆಶೀರ್ವದಿಸಿದರು.

    ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪ ಕೇವಲ ಕಟ್ಟಡವಾಗಿರದೆ ಅಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಿದರೆ ಘನತೆ, ಗೌರವ ಇನ್ನಷ್ಟು ಹೆಚ್ಚಳ ಜತೆಗೆ ಜೀವಂತವಾಗಿರುತ್ತದೆ. ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಬೇಕು.
    | ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ

    ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣ ಧಾರ್ಮಿಕ, ಆಧ್ಯಾತ್ಮಿಕ ಅಂತಾರಾಷ್ಟಿçÃಯ ಪ್ರವಾಸಿ ತಾಣವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ನೂತನ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗೆ ಅನುದಾನದ ಕೊರತೆ ಇಲ್ಲ. ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿದೆ. ಬಿಕೆಡಿಬಿಯಿಂದ ಸ್ಮಾರಕಗಳ ನಿರ್ವಹಣೆಗೆ ಅನುದಾನದ ವ್ಯವಸ್ಥೆ ಮಾಡಲಾಗಿದೆ
    | ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts