More

    ಡ್ಯಾಂ ಉಳಿಸಲು ಹೋರಾಟಕ್ಕೆ ಮುಂದಾದ ರೈತ ಸಂಘ: ಸಭೆಯಲ್ಲಿ ತೆಗೆದುಕೊಂಡರು ಮಹತ್ವದ ನಿರ್ಣಯ

    ಮಂಡ್ಯ: ರೈತರ ಜೀವನಾಡಿ ಕೃಷ್ಣರಾಜಸಾಗರ ಡ್ಯಾಂ ಉಳಿವಿಗಾಗಿ ಜಲಾಶಯದ ಸುತ್ತಮುತ್ತಲ 25 ಕಿ.ಮೀ ಪ್ರದೇಶದಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸುವಂತೆ ಆಗ್ರಹಿಸಿ ನಿರಂತರ ಹೋರಾಟ ನಡೆಸಲು ಶುಕ್ರವಾರ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ತೀರ್ಮಾನಿಸಲಾಯಿತು.
    ಗಣಿಗಾರಿಕೆ ನಿಲ್ಲಿಸಿ, ಕೆ ಆರ್ ಎಸ್ ಉಳಿಸಿ ಹೋರಾಟದ ರೂಪುರೇಷೆಯ ಪೂರ್ವಭಾವಿ ಸಭೆಯಲ್ಲಿ ಜಲಾಶಯದ ಉಳಿವಿಗಾಗಿ ಹಲವು ನಿರ್ಣಯ ಕೈಗೊಂಡು ಗಣಿಗಾರಿಕೆಯು  ಕೃಷ್ಣರಾಜಸಾಗರಕ್ಕೆ ಅಪಾಯ ತಂದೊಡ್ಡುತ್ತಿರುವುದರಿಂದ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಲು ಸರ್ಕಾರದ ಮೇಲೆ ಒತ್ತಡ ತರಲು ನಿರ್ಧರಿಸಲಾಯಿತು.
    ಕೆಆರ್ಎಸ್ ಉಳಿವಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಜನಜಾಗೃತಿ ಮೂಡಿಸಿ ಹಳ್ಳಿಹಳ್ಳಿಗಳಲ್ಲಿ ಹೋರಾಟ ನಡೆಸುವುದು, ಕಾವೇರಿ ಕಣಿವೆ ಜಿಲ್ಲೆಗಳು ಸೇರಿ ರಾಜ್ಯ ವ್ಯಾಪ್ತಿಗೆ ಹೋರಾಟ ವಿಸ್ತರಿಸಲು  ಸಲಹೆ ಕೇಳಿಬಂದಿತು.
    ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರಗೋಡು, ಎಂ.ಎಸ್.ಆತ್ಮಾನಂದ, ಎನ್.ರಾಜು, ಬಿ.ಬಸವರಾಜು, ಬೋರೇಗೌಡ, ಪ್ರಸನ್ನ ಎಸ್.ಗೌಡ, ಕೆ.ಟಿ ಗೋವಿಂದೇಗೌಡ, ಹರೀಶ್, ಸ್ವಾಮಿಗೌಡ, ಮಧುಚಂದನ್, ಜಯರಾಮು ಇತರರಿದ್ದರು.
    Attachments area

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts