More

    ಚುನಾವಣೇಲಿ ಸೋತಿರಬಹುದು, ನಾಯಕನಾಗಿ ಅಲ್ಲ

    ಸೊರಬ: ಪ್ರಜಾಪ್ರಭುತ್ವದಡಿ ಆಯ್ಕೆಯಾಗುವ ಜನಪ್ರತಿನಿಧಿ ಜಾತಿ-ಮತಗಳಿಂದ ದೂರವಿದ್ದು, ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸಿದಾಗ ಜನರ ಮನಸ್ಸಿನಲ್ಲಿ ಸದಾ ನಾಯಕನಾಗಿ ಉಳಿಯಲು ಸಾಧ್ಯ ಎಂದು ಮಾಜಿ ಶಾಸಕ ಎಸ್.ಮಧು ಬಂಗಾರಪ್ಪ ಹೇಳಿದರು.

    ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಗುಡುವಿಯಲ್ಲಿ ಭಾನುವಾರ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈ ಬಾರಿಯ ಗ್ರಾಪಂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು, ಕಾರ್ಯಕರ್ತರ ಗೆಲುವಿನಲ್ಲಿ ನನ್ನ ಗೆಲುವನ್ನು ಕಾಣುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿರಬಹುದು, ಆದರೆ ನಾಯಕನಾಗಿ ಎಂದೂ ಸೋತಿಲ್ಲ ಎಂದರು.

    ನಾನು ಅಧಿಕಾರದಲ್ಲಿರಲಿ, ಇಲ್ಲದಿರಲಿ ಹಲವು ಅಭಿವೃದ್ಧಿ ಯೋಜನೆ ಹಾಗೂ ನೀರಾವರಿ ಯೋಜನೆಗಳನ್ನು ತಾಲೂಕಿಗೆ ತರಲು ಪ್ರಯತ್ನಿಸಿದ್ದೇನೆ. ಅದರ ಫಲವಾಗಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮೂಡಿ ಮತ್ತು ಮೂಗೂರು ಏತ ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದರು. ನಾನು ಶಾಸಕನಾಗಿದ್ದಾಗ ಗುಡುವಿ ಹಾಗೂ ಹಲಸಿನಕೊಪ್ಪ ಬಳಿ ಸೇತುವೆಗಳ ನಿರ್ವಣಕ್ಕೆ ಅಡಿಪಾಯ ಹಾಕಲಾಗಿತ್ತು ಎಂದು ಹೇಳಿದರು.

    ಈಗಿನ ಶಾಸಕರು ಇವೆಲ್ಲವನ್ನೂ ತಾವೇ ತಂದ ಯೋಜನೆಗಳು ಎಂದು ಬಿಂಬಿಸಿಕೊಳ್ಳುತ್ತ ಜನರ ದಿಕ್ಕುತಪ್ಪಿಸುತ್ತಿದ್ದಾರೆ. ಮತ ಪಡೆಯಲು ಸುಳ್ಳು ಭರವಸೆ ನೀಡಲು ಬರುವ ಶಾಸಕರಿಗೆ ನೇರವಾಗಿ ಪ್ರಶ್ನಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

    ಗ್ರಾಮ ಮಟ್ಟದಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರೆ ಮುಂದಿನ ವಿಧಾನಸಭಾ ಚುನಾವಣೆಗೆ ಅನುಕೂಲವಾಗಲಿದೆ. ನನ್ನ ರಾಜಕೀಯ ಜೀವನದಲ್ಲಿ ಜಾತಿ, ಮತ, ಪಕ್ಷ ನೋಡದೆ ಸಮಾನ ದೃಷ್ಟಿಕೋನದಿಂದ ಬಗರ್​ಹುಕುಂ ಹಕ್ಕುಪತ್ರಗಳನ್ನು ನೀಡಿದ್ದೇನೆ ಎಂದರು.

    ಮುಖಂಡರಾದ ಎಚ್.ಗಣಪತಿ ಹುಲ್ತಿಕೊಪ್ಪ, ಎಂ.ಡಿ.ಶೇಖರ್, ಎಂ.ದ್ಯಾವಪ್ಪ, ಹುಲೇಮರಡಿ ಗಣಪತಿ, ಎಪಿಎಂಸಿ ಉಪಾಧ್ಯಕ್ಷ ಜೆ.ಪ್ರಕಾಶ್ ಹಳೇಸೊರಬ, ಧರ್ವಚಾರ್ ತ್ಯಾವಗೋಡು, ಮಂಜುನಾಥ ಗೌಡ, ಮಂಜುನಾಥ ಮಾಸ್ತರ್, ಕಲ್ಲಂಬಿ ರಾಮಪ್ಪ, ಬಸಪ್ಪ ಅಂಕರವಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts